- ಅಸ್ತಮಾ ರೋಗಕ್ಕೆ ಉಚಿತ ಬಾಳೆಹಣ್ಣು ಔಷಧಿ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆಯುರ್ವೇದ ಔಷಧ ಪದ್ಧತಿ ಸಾವಿರಾರು ವರ್ಷಗಳ ಇತಿಹಾಸದ ಮೂಲ. ಪ್ರಕೃತಿ ಮಡಿಲಿನಲ್ಲಿ ನೈಸರ್ಗಿಕವಾಗಿ ದೊರೆಯುವ ದಿವ್ಯೌಷಧ ಶರೀರದ ಆರೋಗ್ಯ ಸಮಸ್ಯೆಗಳಿಗೆ ಫಲಪ್ರದ ಎಂದು ನಗರಸಭೆ ಸದಸ್ಯ ಕವಿತಾ ಶೇಖರ್ ಹೇಳಿದರು.ನಗರದ ಹೌಸಿಂಗ್ ಬೋರ್ಡ್ ಸಮೀಪದ ತ್ರಿಮೂರ್ತಿ ಭವನದಲ್ಲಿ ಲೈಫ್ ಕೇರ್ ಕ್ಲಿನಿಕ್ ನಿಂದ ಶ್ವಾಸ ಕಾಸ ಮುಕ್ತಿ ಅಭಿಯಾನದ ಪ್ರಯುಕ್ತ ಬುಧವಾರ ಆಯೋಜಿಸಿದ್ಧ ಅಸ್ತಮಾ ರೋಗಕ್ಕೆ ಉಚಿತ ಬಾಳೆಹಣ್ಣು ಔಷಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಋಷಿಮುನಿಗಳ ಕಾಲದಿಂದ ಆರ್ಯುವೇದಿಕ್ ಔಷಧ ಪ್ರಚಲಿತದಲ್ಲಿದೆ. ಪರಿಸರ ಸ್ನೇಹಿಯಾದ ಔಷಧಿಗಳ ಸೇವನೆಯಿಂದ ಪೂರ್ವಿಕರು ಆರೋಗ್ಯ ಸಮಸ್ಯೆಯನ್ನು ಗಟ್ಟಿಯಾಗಿ ಎದುರಿಸಿದವರು. ಆ ನಿಟ್ಟಿನಲ್ಲಿ ಇಂದಿನ ಸಮಾಜ ಹೆಚ್ಚು ಆಧುನಿಕ ಔಷಧಿಗಳಿಗೆ ಮಾರುಹೋಗದೇ ಆಯುರ್ವೇದ ಚಿಕಿತ್ಸೆಗೆ ಒತ್ತು ನೀಡಬೇಕು ಎಂದರು.ಮನುಷ್ಯನ ದಿನಚರಿಯಲ್ಲಿ ನಿಯಮಿತ ಆಹಾರ, ಕಷಾಯ ಸೇವನೆ ಹಾಗೂ ಯೋಗಾಭ್ಯಾಸ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆಹಾರದ ಗುಟ್ಟು ಅಡುಗೆ ಕೋಣೆಯಲ್ಲಿದೆ. ಕೆಮ್ಮು, ಶೀತದಂಥ ಸಣ್ಣ ಆರೋಗ್ಯ ಸಮಸ್ಯೆಗೆ ಪಾತ್ರೆಗೆ ಜೋತು ಬೀಳದೇ, ಮನೆಮದ್ದನ್ನು ಉಪಯೋಗಿಸಬೇಕು ಎಂದು ತಿಳಿಸಿದರು. ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕ ಭಾಗ್ಯ ಮಾತನಾಡಿ, ಪ್ರಕೃತಿಯಿಂದ ಸಕಲ ಪ್ರಯೋಜನ ಪಡೆದುಕೊಳ್ಳುವ ಮಾನವ, ಮರಳಿ ಪ್ರಕೃತಿಯನ್ನು ಕಹಿಯನ್ನು ಉಣಿಸುವುದು ಸರಿಯಲ್ಲ. ಮನೆಗೊಂದು ಸಸಿನೆಟ್ಟು ನಿರಂತರ ಪೋಷಿಸಬೇಕು. ಪರಿಸರಕ್ಕೆ ಮಾರಕವಾಗುವ ಯಾವುದೇ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದರು.ಪ್ರತಿ ವರ್ಷ ಹುಣ್ಣಿಮೆಯಂದು ಲೈಫ್‌ಕೇರ್‌ನಿಂದ ಚಳಿಗಾಲದಲ್ಲೇ ಔಷಧಿ ಸಿಂಪಡಣೆ ಬಾಳೆಹಣ್ಣನ್ನು ಆಯುರ್ವೇದ ಪದ್ಧತಿಯಲ್ಲಿ ವಿತರಿಸಿ ಜನತೆ ಆರೋಗ್ಯ ಕಾಪಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಸೌಲಭ್ಯ ಸಮಾಜದ ನಾಗರಿಕರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಲೈಫ್ ಕೇರ್ ಕ್ಲಿನಿಕ್ ವೈದ್ಯ ಡಾ. ಕೆ.ಎ.ಅನೀತ್‌ಕುಮಾರ್ ಮಾತನಾಡಿ, ಶೀತ, ಕೆಮ್ಮು, ಸೀನು ಮತ್ತು ಅಸ್ತಮಾ, ಉಸಿರಾಟ ದಂಥ ಸಮಸ್ಯೆಗಳಿಂದ ಬಳಲುತ್ತಿರುವವರ ಮಂದಿಗೆ ಆಯುರ್ವೇದ ಪದ್ಧತಿಯಲ್ಲಿ ಇಂದು ಜಿಲ್ಲೆಯ 500 ಮಂದಿಗೆ ಉಚಿತ ಔಷಧಯುಕ್ತ ಬಾಳೆಹಣ್ಣನ್ನು ವಿತರಿಸಲಾಗಿದೆ ಎಂದರು.ಈ ಹಣ್ಣನ್ನು ಆಯುರ್ವೇದ ಪ್ರಕಾರ ಹುಣ್ಣಿಮೆಯ ರಾತ್ರಿ ಔಷಧಿಯುಕ್ತ ಬಾಳೆಹಣ್ಣನ್ನು ಚಂದ್ರನ ಬೆಳಕಿನಲ್ಲಿ ಪ್ರಕ್ರಿಯೆಗೆ ಒಳಪಡಿಸಿ ಸೇವನೆ ಮಾಡಬೇಕು. ಅಲ್ಲದೇ ಈ ಔಷಧಿಯನ್ನು ಸಂಪೂರ್ಣವಾಗಿ ಗಿಡಮೂಲಿಕೆಗಳ ಸಾರಗಳಿಂದ ತಯಾರಿಸಲಾಗಿದ್ದು ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು ಹೇಳಿದರು.ನಗರಸಭೆ ನಾಮಿನಿ ಸದಸ್ಯ ಕೀರ್ತಿಶೇಟ್ ಮಾತನಾಡಿ, ಆರೋಗ್ಯ ಅಡ್ಡಪರಿಣಾಮ ಉಚಿತ ಹಣ್ಣು ಸೇರಿದಂತೆ ಮಾದಕ ವಸ್ತುಗಳ ಅರಿವು, ಮಧುಮೇಹ, ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಿರುವ ಡಾ. ಅನೀತ್ ಸಮಾಜದ ಏಳಿಗೆಗಾಗಿ ದುಡಿಯುತ್ತಿದ್ದು ಮುಂದೆ ಇನ್ನಷ್ಟು ಹೆಚ್ಚು ಸಮಾಜಮುಖಿ ಕಾರ್ಯ ಮಾಡುವಂತಾಗಲೀ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಐಡಿಎಸ್‌ಜಿ ಕಾಲೇಜು ಪ್ರಾಧ್ಯಾಪಕಿ ಲಾವಣ್ಯ ಉಪಸ್ಥಿತರಿದ್ದರು.
4 ಕೆಸಿಕೆಎಂ 1ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್‌ನ ತ್ರಿಮೂರ್ತಿ ಭವನದಲ್ಲಿ ಶ್ವಾಸ ಕಾಸ ಮುಕ್ತಿ ಅಭಿಯಾನದ ಪ್ರಯುಕ್ತ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಅಸ್ತಮಾ ರೋಗಕ್ಕೆ ಉಚಿತ ಬಾಳೆಹಣ್ಣು ಔಷಧಿಯನ್ನು ಕವಿತಾ ಶೇಖರ್ ಅವರು ವಿತರಿಸಿದರು.