ಮುತ್ತತ್ತಿಯಲ್ಲಿ ಆಯುರ್ವೇದ ವೈದಾಧಿಕಾರಿ ಆತ್ಮಹತ್ಯೆ

KannadaprabhaNewsNetwork |  
Published : Jun 27, 2026, 01:45 AM IST
26ಕೆಎಂಎನ್‌ಡಿ-7ರಕ್ಷಿತ್‌ | Kannada Prabha

ಸಾರಾಂಶ

ಮೂಲತಃ ಬನ್ನೂರು ಸಮೀಪದ ಮಾಕನಹಳ್ಳಿ ಗ್ರಾಮದ ಸುರೇಂದ್ರರವರ ಪುತ್ರ. ಮದ್ದೂರು ಸಮೀಪದ ಕೆಸ್ತೂರು ಗ್ರಾಮದಲ್ಲಿ ಖಾಸಗಿ ಆಯುರ್ವೇದ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೂರು ದಿನಗಳ ಹಿಂದೆ ಮುತ್ತತ್ತಿಗೆ ಮೋಟರ್ ಬೈಕಿನಲ್ಲಿ ಬಂದು ನಿರ್ಜನ ಪ್ರದೇಶದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿಯಲ್ಲಿ ಖಾಸಗಿ ಆಯುರ್ವೇದ ವೈದ್ಯರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮದ್ದೂರು ತಾಲೂಕು ಕೆಸ್ತೂರಿನಲ್ಲಿ ಖಾಸಗಿ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ರಕ್ಷಿತ್ (28) ಸಾವನ್ನಪ್ಪಿದವರು. ಮೂಲತಃ ಬನ್ನೂರು ಸಮೀಪದ ಮಾಕನಹಳ್ಳಿ ಗ್ರಾಮದ ಸುರೇಂದ್ರರವರ ಪುತ್ರ. ಮದ್ದೂರು ಸಮೀಪದ ಕೆಸ್ತೂರು ಗ್ರಾಮದಲ್ಲಿ ಖಾಸಗಿ ಆಯುರ್ವೇದ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೂರು ದಿನಗಳ ಹಿಂದೆ ಮುತ್ತತ್ತಿಗೆ ಮೋಟರ್ ಬೈಕಿನಲ್ಲಿ ಬಂದು ನಿರ್ಜನ ಪ್ರದೇಶದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮಸ್ಥರಿಂದ ವಿಷಯ ತಿಳಿದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶವ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ರಕ್ಷಿತ್ ಮಂಗಳವಾರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಅವರ ತಾಯಿ ಅನ್ನಪೂರ್ಣಮ್ಮ ನಾಪತ್ತೆ ದೂರು ದಾಖಲಿಸಿದ್ದರು. ಸಾವಿಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಧಾನಸೌಧ ವ್ಯಾಪಾರಿ ಕೇಂದ್ರವಾಗಿ ಪರಿವರ್ತನೆ: ಹೆಚ್.ವಿಶ್ವನಾಥ್
ದೇಶದ ಭದ್ರತೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರರು