ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ವರ್ಷ ಪೂರ್ತಿ ಶಾಲೆಯ ಮಕ್ಕಳಿಗೆ ಯುವ ಆವೃತಿ ಸ್ವಂತ ಹಣದಲ್ಲಿ ಉಚಿತವಾಗಿ ವಿತರಿಸಿದ ಸಮಾಜ ಸೇವಕ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಜಿ.ಶಿವಕುಮಾರ್ ಮಾತನಾಡಿ, ಕನ್ನಡಪ್ರಭದ ಯುವ ಆವೃತ್ತಿ ವರ್ಷದಲ್ಲಿ ರಜಾ ದಿನ ಹೊರತು ಪಡಿಸಿ ಉಳಿದೆಲ್ಲ ದಿನಗಳು ಮಕ್ಕಳ ಕೈ ಸೇರಲಿವೆ ಎಂದರು. ಕನ್ನಡಪ್ರಭದ ಯುವ ಆವೃತ್ತಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಮುಖ್ಯವಾಗಿ ಉಪಯೋಗಕ್ಕೆ ಬರಲಿದೆ. ಈ ಆವೃತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಉದ್ಯೋಗಕ್ಕೆ ಸಹಾಯವಾಗಲಿದ್ದು, ಮಕ್ಕಳು ಈ ಆವೃತ್ತಿ ಬಳಕೆ ಮಾಡಿಕೊಂಡು ಹೆಚ್ಚು ಅಂಕ ಪಡೆಯಿರಿ ಎಂದರು.
ಮಕ್ಕಳು ಮನಸ್ಸಿಗೆ ಲಗಾಮು ಹಾಕಿಕೊಂಡು ವ್ಯಾಸಂಗ ಮಾಡಬೇಕು, ಯಾವುದೇ ಚಟಕ್ಕೆ ಬೀಳಬೇಡಿ ಮತ್ತು ಬಲಿಯಾಗಬೇಡಿ. ಶಾಲೆಯ ಶಿಕ್ಷಕರು ತಮ್ಮ ಮಕ್ಕಳಂತೆ ನಿಮ್ಮ ಬಗ್ಗೆ ಕಾಳಜಿ ವಹಿಸಿ ದುಡಿಯುತ್ತಿದ್ದಾರೆಂಬ ಅರಿವು ನಿಮಗೆ ಇರಲಿದ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ಮಾತನಾಡಿ, ವರ್ಷ ಪೂರ್ತ ಉಚಿತವಾಗಿ ಶಾಲಾ ಮಕ್ಕಳು ಅನುಕೂಲವಾಗಲಿ ಎಂದು ಸ್ವಂತ ಹಣದಿಂದ ನಿಮಗೆ ಕನ್ನಡ ಪ್ರಭ ಯುವ ಆವೃತ್ತಿ ನೀಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ ಅವರಂತೆ ನೀವಾಗಬೇಕು ಎಂದರು. ಶಾಲೆಯ ಮುಖ್ಯ ಶಿಕ್ಷಕಿ ಪದ್ಮ ಮಾತನಾಡಿ, ಕನ್ನಡಪ್ರಭ ಯುವ ಆವೃತ್ತಿ ನಿಮ್ಮ ಓದಿಗೆ ಬಹಳ ಮುಖ್ಯವಾಗಲಿದೆ ಯುವ ಆವೃತ್ತಿಗಳನ್ನೆಲ್ಲ ಸೇರಿಸಿ ಕೊಂಡು ಓದಿದರೆ ಪರೀಕ್ಷೆಗೆ ತುಂಬ ಉಪಯೋಗವಾಗಲಿದೆ ಎಂದರು.ವರ್ಷ ಪೂರ್ತಿ ಉಚಿತವಾಗಿ ಶಾಲಾ ಮಕ್ಕಳಿಗೆ ಕನ್ನಡಪ್ರಭ ಯುವ ಆವೃತ್ತಿ ಕೊಡುಗೆ ನೀಡಿದ ಸಮಾಜ ಸೇವಕ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಜಿ.ಶಿವಕುಮಾರ್‌ರನ್ನು ಶಿಕ್ಷಕ ನಂದೀಶ್ ಸನ್ಮಾನಿಸಿದರು. ಸಮಾರಂಭದಲ್ಲಿ ಕನ್ನಡಪ್ರಭ ತಾಲೂಕು ವರದಿಗಾರ ರಂಗೂಪುರ ಶಿವಕುಮಾರ್, ಜಿಲ್ಲಾ ಮಕ್ಕಳ ಆಯೋಗದ ಅಧಿಕಾರಿ ಸಿದ್ದಶೆಟ್ಟಿ, ಸಂಘಟಕ ಮಹೇಶ್, ಎಸ್‌ಡಿಎಂಸಿ ಅಧ್ಯಕ್ಷ ಮುದ್ದಶೆಟ್ಟಿ, ಶಿಕ್ಷಕ ನಂದೀಶ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.