ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗೋಪಿ ಸರ್ಕಲ್‌ನಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ಆಯೋಜಿಸಿದ್ದ ರೈನ್ ಡಾನ್ಸ್ ಮತ್ತು ಡಿಜೆ ಸಂಭ್ರಮದಲ್ಲಿ ಸಂಸದ ರಾಘವೇಂದ್ರ ಭಾಗವಹಿಸಿದ್ದರು. ಈ ವೇಳೆ ಅಲ್ಲಿ ನೆರೆದಿದ್ದವರು ಸಂಸದ ರಾಘವೇಂದ್ರರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು.
ಕಾಲೇಜು ಜೀವನ ನೆನಪಾಯಿತು:ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲಾಗುತ್ತಿದೆ. ಶಿವನ ತಪಸ್ಸು ಭಂಗ ಮಾಡಲು ಹೋದ ಕಾಮನ ದಹನವಾಗಿತ್ತು. ಅದೇ ರೀತಿ ಈ ದೇಶದ ಸಮಸ್ಯೆಗಳು ದೂರಾಗಿ ದೇಶಕ್ಕೆ ಒಳಿತಾಗಬೇಕಿದೆ. ಇವತ್ತು ಹೋಳಿ ಆಚರಣೆಯಲ್ಲಿ ಭಾಗವಹಿಸಿದ್ದು ನನ್ನ ಕಾಲೇಜು ಜೀವನ ನೆನಪಾಯಿತು. ಆಗೆಲ್ಲ ಸ್ನೇಹಿತರ ಜೊತೆಗೆ ಆಚರಣೆ ಮಾಡುತ್ತಿದ್ದೆ. ಇವತ್ತು ಯುವಕರ ಜೊತೆ ಹಬ್ಬ ಆಚರಿಸಿ ಖುಷಿಯಾಯಿತು ಎಂದರು.----------------------