ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಚನ್ನಗಿರಿ ಪತ್ರಕರ್ತ ಬಾ.ರಾ.ಮಹೇಶ್ ಆಯ್ಕೆ

KannadaprabhaNewsNetwork |  
Published : Nov 01, 2026, 02:45 AM IST
ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಚನ್ನಗಿರಿ ತಾಲೂಕು ಹಿರಿಯ ಪತ್ರಕರ್ತ ಬಾ.ರಾ.ಮಹೇಶ್ | Kannada Prabha

ಸಾರಾಂಶ

ದಾವಣಗೆರೆ ಜಿಲ್ಲಾಡಳಿತದಿಂದ ನೀಡುವ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಚನ್ನಗಿರಿ ಪಟ್ಟಣದ ನಿವಾಸಿ, ತಾಲೂಕಿನ ಹಿರಿಯ ಪತ್ರಕರ್ತ ಬಾ.ರಾ.ಮಹೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ದೂರವಾಣಿ ಮೂಲಕ ತಿಳಿಸಲಾಗಿದೆ.

ಚನ್ನಗಿರಿ: ದಾವಣಗೆರೆ ಜಿಲ್ಲಾಡಳಿತದಿಂದ ನೀಡುವ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಚನ್ನಗಿರಿ ಪಟ್ಟಣದ ನಿವಾಸಿ, ತಾಲೂಕಿನ ಹಿರಿಯ ಪತ್ರಕರ್ತ ಬಾ.ರಾ.ಮಹೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ದೂರವಾಣಿ ಮೂಲಕ ತಿಳಿಸಲಾಗಿದೆ.

ಮಹೇಶ್‌ ಅವರು 40 ವರ್ಷಗಳಿಂದ ರಾಜ್ಯದ ವಿವಿಧ ವಾರ ಪತ್ರಿಕೆ, ಜಿಲ್ಲಾಮಟ್ಟದ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2000ನೇ ಇಸವಿಯಿಂದ ನಾಡಿನ ಹೆಸರಾಂತ ಕನ್ನಡಪ್ರಭ ದಿನಪತ್ರಿಕೆಯಲ್ಲಿ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಾ.ರಾ.ಮಹೇಶ್‌ ಅವರಿಗೆ 2010ರಲ್ಲಿ ತಾಲೂಕು ಆಡಳಿತ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮಾಧ್ಯಮ ಪ್ರಶಸ್ತಿ, ಕನ್ನಡನಾಡು ಹಿತರಕ್ಷಣಾ ಸಮಿತಿ ವತಿಯಿಂದ ರಾಜ್ಯಮಟ್ಟದ ಕರ್ನಾಟಕ ಸೇವಾ ರತ್ನ ಪ್ರಶಸ್ತಿ, 2023ರಲ್ಲಿ ಚನ್ನಗಿರಿ ತಾಲೂಕು ಪತ್ರಕರ್ತರ ಸಂಘ ವತಿಯಿಂದ ಕೆಳದಿರಾಣಿ ಚನ್ನಮ್ಮಾಜಿ ಮಾಧ್ಯಮ ಪ್ರಶಸ್ತಿಗಳು ಲಭಿಸಿವೆ.

ನವೆಂಬರ್ 1ರಂದು ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಚನ್ನಗಿರಿ ಪತ್ರಕರ್ತ ಬಾ.ರಾ.ಮಹೇಶ್‌ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಲಾಗಿದೆ.

- - -

-31ಕೆಸಿಎನ್ಜಿ2: ಬಾ.ರಾ.ಮಹೇಶ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಗೆ ರಾತ್ರಿ 8-10ರ ವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
ವೈದ್ಯರ ನಿರ್ಲಕ್ಷ್ಯದಿಂದ 1 ವರ್ಷದ ಮಗು 3 ತಿಂಗಳಿಂದ ಕೋಮಾದಲ್ಲಿ: ಆರೋಪ