ಕನ್ನಡಪ್ರಭ ವಾರ್ತೆ ಬೈಲಹೊಂಗಲ ವೀರರಾಣಿ ಕಿತ್ತೂರು ಚನ್ನಮ್ಮಾ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ₹ 200 ಕೋಟಿ ಅನುದಾನ ನೀಡಿಯೇ, ಅದ್ಧೂರಿಯಾಗಿ ಉದ್ಘಾಟನೆ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ಕರೆ ನೀಡಿದ್ದ ಬೈಲಹೊಂಗಲ ಬಂದ್ ಸುಸೂತ್ರವಾಗಿ ಭಾಗಶಃ ಯಶಸ್ವಿಯಾಗಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವೀರರಾಣಿ ಕಿತ್ತೂರು ಚನ್ನಮ್ಮಾ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ₹ 200 ಕೋಟಿ ಅನುದಾನ ನೀಡಿಯೇ, ಅದ್ಧೂರಿಯಾಗಿ ಉದ್ಘಾಟನೆ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ಕರೆ ನೀಡಿದ್ದ ಬೈಲಹೊಂಗಲ ಬಂದ್ ಸುಸೂತ್ರವಾಗಿ ಬಾಗಶಃ ಯಶಸ್ವಿಯಾಗಿದೆ.ಕೇಂದ್ರ ಬಸ್‌ನಿಲ್ದಾಣದ ಕರೆಮ್ಮದೇವಿ ದೇವಸ್ಥಾನದ ಹತ್ತಿರ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮಳಿಗೆ ರಾಷ್ಟ್ರಮಟ್ಟದಲ್ಲಿ ಸಿಗಬೇಕಾದ ಗೌರವ ಇನ್ನೂವರೆಗೂ ಸಿಕ್ಕಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ ವೀರರಾಣಿ ಚನ್ನಮ್ಮಳಿಗೆ ರಾಜ್ಯ ಸರಕಾರ ನೀಡಬೇಕಾದ ಗೌರವ ನೀಡದಿರುವುದು ವಿಷಾದನೀಯ. ಅವಳ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ರಾಯಣ್ಣ ಸೈನಿಕ ಶಾಲೆ, ಜೀವನ ಚರಿತ್ರೆಯ ರಾಕ್ ಗಾರ್ಡನ್, ವೀರಮರಣವಪ್ಪಿದ್ದ ನಂದಗಡವನ್ನು ನೂರಾರು ಕೋಟಿ ವೆಚ್ಚ ಮಾಡಿ ಅಭಿವೃದ್ಧಿ ಪಡಿಸಿ, ಪ್ರವಾಸಿ ತಾಣ ಮಾಡಿದ್ದು ಸಂತಸ ತಂದಿದೆ. ಆದರೆ,ಮುಖ್ಯಮಂತ್ರಿ ಸಿದ್ಧರಾಮಯ್ಯನವರು 2026ರ ಆಯವ್ಯಯದಲ್ಲಿ ಚನ್ನಮ್ಮಾಜಿ ಐಕ್ಯ ಸ್ಥಳ ಅಭಿವೃದ್ಧಿಗಾಗಿ ₹ 200 ಕೋಟಿ ರೂ.ಮೀಸಲಿಡುವ ಭರವಸೆ ಇತ್ತು. ಆದರೆ, ಮಲತಾಯಿ ಧೋರಣೆ ಅನಸರಿಸುತ್ತಿದ್ದು, ಇದು ತೀವ್ರ ಖಂಡನೀಯವಾಗಿದೆ. ಇದು ಜನರ ಆಸೆಗೆ ನಿರಾಸೆಯಾಗಿದೆ. ಈಗಾಗಲೇ ಅಭಿವೃದ್ಧಿ ಪ್ರಾಧಿಕಾರದಿಂದ ಚನ್ನಮ್ಮಾಜಿಯ ಐಕ್ಯ ಸ್ಥಳದ ಅಭಿವೃದ್ಧಿಗೆ ₹ 5 ಕೋಟಿ ವೆಚ್ಚದಲ್ಲಿ ಮರು ನವೀಕರಣ ಮಾಡಿ, ನಾಡಿನ ಮಠಾಧೀಶರು, ಗಣ್ಯರನ್ನು, ಚನ್ನಮ್ಮಾಜಿಯ ಅಭಿಮಾನಿಗಳನ್ನು ಆಹ್ವಾನಿಸದೆ ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದು ಯಾಕೆ ಎಂದು ಕಿಡಿಕಾರಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರಫೀಕ ಬಡೇಘರ, ಬಿ.ಎಂ.ಚಿಕ್ಕನಗೌಡರ, ಕಿತ್ತೂರು ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಜೆಟ್‌ನಲ್ಲಿ ಚನ್ನಮ್ಮಾಜಿ ಐಕ್ಯಸ್ಥಳ ಅಭಿವೃದ್ಧಿಗಾಗಿ ₹ 200 ಕೋಟಿ ಮೀಸಲಿಡುವ ಭರವಸೆ ಇತ್ತು. ಇದು ಜನರಿಗೆ ನಿರಾಸೆ ತಂದಿದೆ. ಸಚಿವ ದಿನೇಶ ಗುಂಡೂರಾವ ತೀವ್ರ ನಿಗಾ ಘಟಕ ನಿರ್ಮಾಣಕ್ಕೆಭೂಮಿಪೂಜೆಗೆ ಆಗಮಿಸಿದ್ದಾಗ ಏಕಾಏಕಿ ಯಾರಿಗೂ ಮಾಹಿತಿ ನೀಡದೇ, ಚನ್ನಮ್ಮಾಜಿ ಐಕ್ಯಸ್ಥಳವನ್ನು ಶಾಸಕರು ಪ್ರೋಟೋ ಕಾಲ್ ಪಾಲಿಸಿದೆ ಉದ್ಘಾಟನೆ ಮಾಡಿರುವುದು ಸರಿಯಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೇಂದ್ರ ಬಸ್‌ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಸರ್ಕಾರದ ವಿರುದ್ಧ, ಶಾಸಕರ ವಿರುದ್ಧ ಘೋಷಣೆ ಕೂಗಿ ಅಕ್ರೋಶ ಹೊರ ಹಾಕಿದರು. ನಂತರ ಎಸ್.ಆರ್.ಸರ್ಕಲ್‌ದಲ್ಲಿ ನಿರಂತರ ಧರಣಿ ನಡೆಸಲಾಯಿತು.ಈ ಸಂದರ್ಭದಲ್ಲಿ ಶ್ರೀಶೈಲ ಯಡಳ್ಳಿ, ರಾಜು ಕುಡಸೋಮಣ್ಣವರ, ನಿಂಗಪ್ಪ ಚೌಡಣ್ಣವರ, ನ್ಯಾಯವಾದಿ ದುಂಡೇಶ ಗರಗದ, ಮಡಿವಾಳಪ್ಪ ಹೋಟಿ, ರಿತೇಶ ಪಾಟೀಲ, ಬಾಳನಗೌಡ ಪಾಟೀಲ, ವಿರೇಶ ಹೊಳೆಪ್ಪನ್ನವರ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಗುಂಡ್ಲೂರ, ಶ್ರೀಶೈಲ ಶರಣಪ್ಪನವರ, ನಾಗರಾಜ ಗುಂಡ್ಲೂರ, ಆನಂದಗೌಡ ಪಾಟೀಲ, ರಾಜು ಬೋಳನ್ನವರ, ಬಸವರಾಜ ಬೋಳಗೌಡ್ರ, ಶಿವಾನಂದ ಕುರಬೆಟ್ಟ, ಸುಭಾಸ ಬಾಗೇವಾಡಿ, ಸುನೀಲ ವರ್ಣೇಕರ, ರತ್ನಾ ಗೋಧಿ, ಶಾಂತಾ ಮಡ್ಡಿಕಾರ, ಬಸವರಾಜ ಭಜಂತ್ರಿ, ಉಮೇಶಗೌಡ ಪಾಟೀಲ, ದಯಾನಂದ ಚಿಕ್ಕಮಠ, ಮಲ್ಲಿಕಾರ್ಜುನ ಬಾಜಿ, ಚಂದನ ಕೌಜಲಗಿ, ಶೀವು ಶಿರಸಂಗಿ, ಗಂಗಪ್ಪ ಗುಗ್ಗರಿ, ಈರಣ್ಣ ಹರಕುಣಿ, ರಾಜು ನರಸಣ್ಣವರ, ಆನಂದ ಮೂಗಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಹನುಮಂತ ಶಿರಹಟ್ಟಿ ಭೇಟಿ ನೀಡಿ, ಪ್ರತಿಭಟನಾಕಾರರ ಬೇಡಿಕೆ ಕುರಿತು ಚರ್ಚಿಸಿದರು. ಮುಂಜಾಗ್ರತ ಕ್ರಮವಾಗಿ ಪಟ್ಟಣದಲ್ಲಿ ಪ್ರೊಬೆಷನರಿ ಎಸ್ಪಿ ಡಾ.ಬಾನು ಪ್ರಕಾಶ್, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐಗಳಾದ ಎಫ್.ವೈ.ಮಲ್ಲೂರ, ಚಾಂದಬಿ ಗಂಗಾವತಿ, ಪ್ರವೀಣ ಗಂಗೊಳ್ಳ, ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
--------ಕೋಟ್‌ರಾಣಿ ಚನ್ನಮ್ಮನ ವಿಷಯದಲ್ಲಿ ಮಾತ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿರುವುದು ಈ ನಾಡಿಗೆ ಅಪಮಾನವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನಡೆ ತೀವ್ರ ಖಂಡನೀಯವಾಗಿದೆ. ಕೂಡಲೇ ರಾಜ್ಯ ಸರ್ಕಾರ ಬಜೆಟ್ ಅಧಿವೇಶನದಲ್ಲಿ ಚನ್ನಮ್ಮಾಜಿಯ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 200 ಕೋಟಿ ಅನುದಾನ ನೀಡಿ ಗೌರವ ಸಲ್ಲಿಸಬೇಕು. ವೀರಮಾತೆಯ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಣೆ ಮಾಡಲು ಸರ್ವ ಪಕ್ಷಗಳ ನಿಯೋಗದ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಒಂದು ವೇಳೆ ಸರಕಾರ ಇದಕ್ಕೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ರೂಪುರೇಷೆ ನಡೆಸಲಾಗುವುದು.ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.