ಕಿನ್ನಿಗೋಳಿ ಸಮೀಪದ ಕೆಮ್ಮಡೆ ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿ ಮಂಟಪದಲ್ಲಿ ಜರುಗಿದ ಕೆಮ್ಮಡೆ ಶ್ರೀ ಮಹಾಗಣಪತಿ ಭಜನಾ ಮಂಡಳಿಯ 19ನೇ ವರ್ಷದ ಭಜನಾ ಮಂಗಲೋತ್ಸವ
ಮೂಲ್ಕಿ: ನಿರಂತರ ಧ್ಯಾನ, ಭಜನೆ, ಆರಾಧನೆ ಮೂಲಕ ಭಗವಂತನನ್ನು ಮೆಚ್ಚಿಸಬಹುದು ಎಂದು ಹಿರಿಯರು ಕಂಡು ಕೊಂಡಿದ್ದು, ನಾವು ಸತ್ ಚಿಂತನೆಯಲ್ಲಿ ಸಾಗಬೇಕು ಎಂದು ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಕಿನ್ನಿಗೋಳಿ ಸಮೀಪದ ಕೆಮ್ಮಡೆ ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿ ಮಂಟಪದಲ್ಲಿ ಜರುಗಿದ ಕೆಮ್ಮಡೆ ಶ್ರೀ ಮಹಾಗಣಪತಿ ಭಜನಾ ಮಂಡಳಿಯ 19ನೇ ವರ್ಷದ ಭಜನಾ ಮಂಗಲೋತ್ಸವದಲ್ಲಿ ಮಾತನಾಡಿದರು.
ಸಮಿತಿಯ ಗೌರವ ಸಲಹೆಗಾರ ರಾಧಾಕೃಷ ನಾಯಕ್ ಮೂರುಕಾವೇರಿ, ಮಾಧವ ಶೆಟ್ಟಿಗಾರ್ ಕೆರೆಕಾಡು, ನಿರಂಜನ ಶೆಟ್ಟಿ, ವಸಂತ ಕೆರಕಾಡು, ಸಮಿತಿ ಸಂಚಾಲಕ ಅಶೋಕ್ ಕೆಮ್ಮಡೆ, ಅಧ್ಯಕ್ಷೆ ವಸಂತಿ ರಾಮಕೃಷ್ಣ ದೇವಾಡಿಗ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಬೆಳಗ್ಗೆ ಸೋರ್ಯೋದಯದಿಂದ ಸಂಜೆ ಸೂರ್ಯಾಸ್ತದ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.