ಹಾವೇರಿ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ

KannadaprabhaNewsNetwork |  
Published : Jun 18, 2024, 12:54 AM IST
೧೭ಎಚ್‌ವಿಆರ್೪ | Kannada Prabha

ಸಾರಾಂಶ

ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಹಾವೇರಿ: ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ನಗರದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಸಾಮೂಹಿಕ ಪ್ರಾರ್ಥನೆಯ ನಂತರ ಹಿರಿಯರು, ಕಿರಿಯರು ಪರಸ್ಪರರು ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆಯಲ್ಲಿ ಪಾಲ್ಗೊಂಡ್ದಿದ ಮುಸ್ಲಿಂ ಧರ್ಮ ಗುರುಗಳು ಧರ್ಮ ಸಂದೇಶ ನೀಡಿ ಮಾತನಾಡಿ, ಮುಸ್ಲಿಂ ಧರ್ಮದಲ್ಲಿ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ನಮಾಜ್, ಹಜ್, ರೋಜಾ, ಜಕಾತ, ಸಿತ್ರಾ ಈ ಪಂಚ ಸೂತ್ರಗಳನ್ನು ಪಾಲಿಸಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಿ ಮೋಕ್ಷ ಪಡೆಯಲು ಸಾಧ್ಯ. ಅನಿವಾರ್ಯ ಸಂದರ್ಭದಲ್ಲಿ ದೇಶ, ಧರ್ಮ ಹಾಗೂ ಮಾನವ ಕುಲಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸನ್ನದ್ಧಗೊಳಿಸುವುದು ಈ ಹಬ್ಬದ ಆಚರಣೆಯ ಉದ್ದೇಶವಾಗಿದೆ ಎಂದರು. ವಿಧಾನಸಭೆ ಉಪಸಭಾಪತಿ, ಶಾಸಕ ರುದ್ರಪ್ಪ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರು, ಹಾವೇರಿ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಭುಗೌಡ ಬಿಸ್ಟನಗೌಡ್ರು ಮುಸ್ಲಿಂ ಬಾಂಧವರಿಗೆ ಶುಭಕೋರಿ ಸಾಮರಸ್ಯ ಮೆರೆದರು. ಈ ಸಂದರ್ಭದಲ್ಲಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ, ಉಪಾಧ್ಯಕ್ಷ ಚಮನ್ ಮುಲ್ಲಾ, ಅನ್ವರ ಕಡೇಮನಿ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೆರಿ, ಖಜಾಂಚಿ ಗುಲಾಮ್ ಬಂಕಾಪುರ್, ಸದಸ್ಯರಾದ ಇಮಾಮ್ ಹುಸೇನ್ ಬಾಯಿಬಾಯಿ, ಸಾಧಿಕ್ ಸವಣೂರ, ಉಸ್ಮಾನ್‌ಸಾಬ್ ಪಟವೇಗಾರ, ಜಮೀರ್ ಜಿಗರಿ, ಇಸ್ಮಾಯಿಲ್ ಲಭ್ಯರ್, ವಸೀಮ್ ಸನ್ನುಖಾನ್, ಬಾಬುಲಾಲ್ ಬಾಲೇಬಾಯಿ, ಸುನೀಲ ಜಮಾದರ, ವಲಿ ಅತ್ತಾರ, ಅಮಿರಜಾನ ಬೆಪಾರಿ, ಹಜರತ್ ಅಲಿ ತಹಶೀಲ್ದಾರ್, ಗೌಸ್ ಹತ್ತಿ ಕಾಳ, ಸಾದಿಕ ಮುಲ್ಲಾ, ಮನ್ಸೂರ್ ಮುಲ್ಲಾ, ಸಾದಿಕ, ಕೋತ್ವಾಲ್, ಖಮರ್ ಕಲ್ಯಾಣಿ, ನಪ್ತಾರ್ ಗುಡಗೇರಿ, ಇಕ್ಬಾಲ್ ಶಿಡ್ಗನಾಳ, ಅಜಮತ್ ಶೇಕ್, ಖಾಸಿಂಸಾಬ್ ಅಗಡಿ, ಭಾಷಾ, ಅಬ್ದುಲ್, ಶಫಿ ಗೋಲಿಬಾರ್, ಅಂಜುಮನ್ ಇಸ್ಲಾಂ ಸಂಸ್ಥೆಯ ಸರ್ವ ಸದಸ್ಯರು ಸೇರಿದಂತೆ ಸಾವಿವಾರೂ ಮುಸ್ಲಿಂ ಸಮಾಜದ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು. ಹಬ್ಬದ ಊಟ: ಈ ಹಬ್ಬದ ಜೊತೆಗೆ ಊಟವೂ ವಿಶೇಷವಾಗಿರುತ್ತದೆ. ಸುರ್‌ಕುಂಬಾ ಹಬ್ಬದ ವಿಶೇಷವಾಗಿದ್ದು, ಉಳಿದಂತೆ ಹಕೀಂ ಕೋಳಿ ಬಿರಿಯಾನಿ, ಮಟನ್ ಬಿರಿಯಾನಿ, ಮೀನು, ಪರೋಟಾ, ಮೊಟ್ಟೆ, ಚಪಾತಿ, ವಿವಿಧ ಹಣ್ಣುಗಳು ಊಟದ ಭಾಗವಾಗಿದ್ದವು. ಗೆಳೆಯರು, ಬಂಧುಗಳನ್ನು ಆಹ್ವಾನಿಸಿ ಜೊತೆಯಾಗಿ ಊಟ ಮಾಡಿ ಸಂಭ್ರಮಿಸಿದರು. ಬಕ್ರೀದ್‌ ವೇಳೆ ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಜಿಲ್ಲಾದ್ಯಂತ ಶಾಂತಿಯುತವಾಗಿ ಹಬ್ಬದ ಆಚರಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು