ಆಧುನಿಕತೆಯ ಕಾಲಘಟ್ಟದಲ್ಲಿ ಮರೆಯಾಗುತ್ತಿರುವ ನಮ್ಮ ಕೃಷಿ ಬದುಕು ಇನ್ನಷ್ಟು ಗಟ್ಟಿಗೊಳಿಸಬೇಕು. ನಮ್ಮ ಪೂರ್ವಿಕರು ಹಾಕಿ ಕೊಟ್ಟ ತಳಹದಿಯಲ್ಲಿ ಸಾಗಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿ: ಆಧುನಿಕತೆಯ ಕಾಲಘಟ್ಟದಲ್ಲಿ ಮರೆಯಾಗುತ್ತಿರುವ ನಮ್ಮ ಕೃಷಿ ಬದುಕು ಇನ್ನಷ್ಟು ಗಟ್ಟಿಗೊಳಿಸಬೇಕು. ನಮ್ಮ ಪೂರ್ವಿಕರು ಹಾಕಿ ಕೊಟ್ಟ ತಳಹದಿಯಲ್ಲಿ ಸಾಗಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ತೋಕೂರು ಬಡಗಬೆಟ್ಟು ಗದ್ದೆಯಲ್ಲಿ ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ, ಶ್ರೀ ವಿನಾಯಕ ಮಹಿಳಾ ಮಂಡಳಿ ಹಾಗೂ ಅಲಯನ್ಸ್ ಕ್ಲಬ್ ಕಿನ್ನಿಗೋಳಿ ಆಶ್ರಯದಲ್ಲಿ ಜರುಗಿದ 5ನೇ ವರ್ಷದ ಬಲೇ ಕೆಸರ್ಡ್ ಗೊಬ್ಬುಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ ಅಧ್ಯಕ್ಷತೆ ವಹಿಸಿದ್ದು, ವೇದಮೂರ್ತಿ ಪಂಜ ವಾಸುದೇವ ಭಟ್ ಶುಭ ಹಾರೈಸಿದರು. ದ.ಕ. ಮೈ ಭಾರತ್ ಸಂಸ್ಥೆಯ ಜಗದೀಶ್, ಪಡುಪಣಂಬೂರು ಗ್ರಾಪಂ ಪಿಡಿಒ ಸುಧೀರ್, ಕಿನ್ನಿಗೋಳಿ ಅಲೆಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಆಚಾರ್ಯ, ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ತಿರುಮಲ ಆ್ಯಡ್ಸ್‌ನ ಚರಣ್ ಜೆ. ಶೆಟ್ಟಿ ಕುಳಾಯಿಗುತ್ತು, ತುಳುವೆರ್ ಕಲ ಟ್ರಸ್ಟ್ ಅಧ್ಯಕ್ಷೆ ಗೀತಾ ಲಕ್ಷ್ಮೇಶ್, ಕೆಮ್ರಾಲ್ ಗ್ರಾಪಂ ಕಾರ್ಯದರ್ಶಿ ಕೇಶವ್, ಗುತ್ತಿಗೆದಾರ ಜಯರಾಮ ಆಚಾರ್ಯ ಪಕ್ಷಿಕೆರೆ, ಜೈ ತುಳುನಾಡ್ ಸಂಸ್ಥೆಯ ಮಾಜಿ ಅಧ್ಯಕ್ಷ ಉದಯ್ ಪೂಂಜ ತಾಳಿಪಾಡಿಗುತ್ತು, ಕೃಷಿಕ ಲಕ್ಷ್ಮಣ್ ಪೂಜಾರಿ ತೋಕೂರು, ಮಂಡಳಿಯ ಅಧ್ಯಕ್ಷ ಧನ್‌ರಾಜ್ ಅಂಚನ್, ಮಹಿಳಾ ಮಂಡಳಿ ಅಧ್ಯಕ್ಷೆ ಧನಲಕ್ಷೀ, ಕಾರ್ಯಕ್ರಮ ಸಂಯೋಜಕ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.