ಹೊಸಪೇಟೆ : ಕನ್ನಡಪ್ರಭ ಮುಖಪುಟ ಫ್ರೇಮ್‌ ಬಳಸಿ ಡಾ. ಮನಮೋಹನ್‌ ಸಿಂಗ್‌ಗೆ ಶ್ರದ್ಧಾಂಜಲಿ

Published : Dec 28, 2024, 12:01 PM IST
manmohan singh

ಸಾರಾಂಶ

ಕನ್ನಡಪ್ರಭ’ ಪತ್ರಿಕೆಯ ಶುಕ್ರವಾರದ ಸಂಚೆಕೆ ಮುಖಪುಟವನ್ನೇ ಫೋಟೋ ಫ್ರೇಮ್‌ ಮಾಡಿಸಿ, ಅದನ್ನು ಬಳಸಿ ಡಾ. ಮನಮೋಹನ್‌ ಸಿಂಗ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಸಂಗ ಹಂಪಿ ಕನ್ನಡ ವಿವಿಯಲ್ಲಿ ನಡೆದಿದೆ.

ಹೊಸಪೇಟೆ : ‘ಕನ್ನಡಪ್ರಭ’ ಪತ್ರಿಕೆಯ ಶುಕ್ರವಾರದ ಸಂಚೆಕೆ ಮುಖಪುಟವನ್ನೇ ಫೋಟೋ ಫ್ರೇಮ್‌ ಮಾಡಿಸಿ, ಅದನ್ನು ಬಳಸಿ ಡಾ. ಮನಮೋಹನ್‌ ಸಿಂಗ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಸಂಗ ಹಂಪಿ ಕನ್ನಡ ವಿವಿಯಲ್ಲಿ ನಡೆದಿದೆ.

 ‘ಕನ್ನಡಪ್ರಭ’ ಶುಕ್ರವಾರದ ಸಂಚಿಕೆಯಲ್ಲಿ ‘ಮನಮೋಹನ ಚಿರಮೌನ’ ಶೀರ್ಷಿಕೆ ನೀಡಿ, ಶಿರೋನಾಮೆಯನ್ನು ಕೆಳಗಿಳಿಸಿ ಮನಮೋಹನ್‌ ಸಿಂಗ್‌ ಅವರಿಗೆ ಗೌರವ ಸೂಚಿಸಿತ್ತು. ಇದನ್ನು ಗಮನಿಸಿದ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಚಿತ್ರಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತಿಳಿಸಿ, ‘ಕನ್ನಡಪ್ರಭ’ ಪತ್ರಿಕೆ ಮುಖಪುಟವನ್ನೇ ಫ್ರೇಮ್‌ ಹಾಕಿಸಿಕೊಂಡು ಬರಲು ತಿಳಿಸಿದ್ದಾರೆ. 

ನಂತರ ಇದೇ ಫೋಟೋ ಇರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕುಲಪತಿ ಡಾ.ಪರಮಶಿವಮೂರ್ತಿ, ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಡಾ. ಪರಮಶಿವಮೂರ್ತಿ, ‘ಕನ್ನಡಪ್ರಭ’ ಮುಖಪುಟ ಉತ್ತಮವಾಗಿ ಮೂಡಿ ಬಂದಿದೆ ಎಂದರು. ಅಧಿಕಾರಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ಮೌನಾಚರಣೆಯಲ್ಲಿ ಭಾಗವಹಿಸಿದ್ದರು. 

PREV

Recommended Stories

ರಸಗೊಬ್ಬರ ಬೆಲೆ ಹೆಚ್ಚಳ: ಕೇಂದ್ರದ ಕ್ರಮ ಖಂಡಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ
ಸುಂದರ, ಸ್ವಚ್ಛ ಕಂಪ್ಲಿ ನಿರ್ಮಾಣಕ್ಕೆ ಕೈ ಜೋಡಿಸಿ: ಭಟ್ಟ ಪ್ರಸಾದ್