ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣಿಗಾರಿಕೆಯಿಂದಾಗಿ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರ ಪ್ರಾಣ ಹಾನಿಯಾದರೂ ಸಹ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮವಹಿಸದೇ ಕಣ್ಣು ಮುಚ್ಚಿ ಕುಳಿತಿವೆ ಎಂದು ಆರೋಪಿಸಿದರು.
ಕರ್ನಾಟಕ ಸರ್ಕಾರದ ಸಚಿವಾಲಯ ಸರ್ಕಾರಿ ಗೋಮಾಳಗಳಲ್ಲಿ ನಿರ್ವಹಣೆ ಕುರಿತು ಉಚ್ಚ ನ್ಯಾಯಾಲಯದ ಅದೇಶದಂತೆ ೧೯೬೬ರ ನಿಯಮ ೯೭(೨)ರ ಗ್ರಾಮದ ಜಾನುವಾರು ಮೇಯಲು ಅನುಕೂಲವಾಗುವಂತೆ ಸಾಕಷ್ಟು ಅರಣ್ಯ ಪ್ರದೇಶವಿದ್ದರೇ ಅದರ ವಿಸ್ತೀರ್ಣಕ್ಕನುಗುಣವಾಗಿ ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇದೆಯೆಂದು ಪ್ರದೇಶದ ವಿಸ್ತೀರ್ಣವನ್ನು ಕಡಿಮೆ ಮಾಡಬಹುದು ಎಂದರು.ನಿಯಮ ೯೭೪೩ರನ್ವಯ ಗ್ರಾಮದಲ್ಲಿ ಯಾವ ಗೋಮಾಳವು ಇಲ್ಲದಿದ್ದರೆ ಅಥವಾ ಇರುವ ಭೂಮಿಯು ೯೭(೧)ರನ್ವಯ ನಿಯಮಿಸಿದ ವಿಸ್ತೀರ್ಣಕ್ಕಿಂತ ಕಡಿಮೆಯಾಗಿದ್ದರೆ, ಪಕ್ಕದ ಗ್ರಾಮದಲ್ಲಿ ದೊರೆಯುವ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಪ್ರತ್ಯೇಕವಾಗಿಡುವುದರ ಮೂಲಕ ಆ ಕೊರತೆಯನ್ನು ತುಂಬಬಹುದು ಎಂದಿದೆ ಎಂದು ತಿಳಿಸಿದರು.
ಹೆಗ್ಗೋಠಾರ ಹಾಗೂ ಮುತ್ತಿಗೆ ಗ್ರಾಮದಲ್ಲಿನ ಆಕ್ರಮ ಗಣಿಗಾರಿಕೆಯನ್ನು ಕಂಡು ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾ ನ್ಯಾಯಾಧೀಶರು ಹಾಗೂ ತಾಲೂಕು ಆಡಳಿತ, ಭೂ ವಿಜ್ಞಾನಿಯವರ ಸ್ಥಳ ಪರಿಶೀಲನಾ ವರದಿಯನ್ವಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದನ್ನು ಉಲ್ಲೇಖಿಸಿ 2025ರ ಫೆ.6ರಂದು ಗಣಿ ಗುತ್ತಿಗೆ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದು, ನಂತರ ಜಿಲ್ಲಾಡಳಿತ ಹಾಗೂ ಆಯುಕ್ತರಿಂದ ೨೦೨೬ರ ಮಾರ್ಚ್ ತಿಂಗಳಲ್ಲಿದ್ದ ರದ್ದತಿಯನ್ನು ಹಿಂಪಡೆದು ಗಣಿ ಗುತ್ತಿಗೆ ನೀಡಿ ಜಾನುವಾರು ಹಾಗೂ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಾಜಿಪುರ ಕುಮಾರ್, ತಾಲೂಕು ಉಪಾಧ್ಯಕ್ಷ ಶಿವಮೂರ್ತಿ, ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಪದಾಧಿಕಾರಿಗಳಾದ ಅಶೋಕ್, ಮಾದಪ್ಪ, ಸಂಜು ಇತರರು ಹಾಜರಿದ್ದರು.