ಶಿವಮೊಗ್ಗ: ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾಗಿರುವ ಶಿವಮೊಗ್ಗ, ವಿಜಯಪುರ ವಿಮಾನ ನಿಲ್ದಾಣಗಳಲ್ಲಿ ಪೈಲೆಟ್ ತರಬೇತಿ ಕೇಂದ್ರ ನಿರ್ಮಾಣವು ಬಹಳಷ್ಟು ಯುವಕರಿಗೆ ಅನುಕೂಲವಾಗುವುದರ ಜೊತೆಗೆ ಸಂತೋಷವನ್ನು ತಂದು ಕೊಟ್ಟಿದೆ. ಮಕ್ಕಳಿಗೆ ಈಗಾಗಲೇ ಮಾರಕವಾಗಿರುವ ಸೋಶಿಯಲ್ ಮೀಡಿಯಾ ಬಳಕೆಯನ್ನು 16 ವರ್ಷದ ಒಳಗಿನ ಮಕ್ಕಳಿಗೆ ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೇಶ್ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯವರಾದ ಶಾಂತವೇರಿ ಗೋಪಾಲ್ ಗೌಡ ರವರ ಹೆಸರನ್ನು ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಗೆ ಇಟ್ಟಿರುವುದು ಹೆಮ್ಮೆಯ ವಿಚಾರ. ಈ ಬಾರಿಯ ಬಜೆಟ್ ನಲ್ಲಿ ಹೊಸ ನೇಮಕಾತಿಯ ವಿಚಾರವಾಗಿ ಹಾಗೂ ಆರೋಗ್ಯದ ವಿಚಾರವಾಗಿ ಮತ್ತು ಉದ್ಯೋಗದ ವಿಚಾರವಾಗಿ ಹೆಚ್ಚಿನ ಹೊತ್ತನ್ನು ನೀಡಿರುವುದು ಸಹ ಸ್ವಾಗತಾರ್ಹ.