ಬೆಂಗಳೂರು ಟು ಬೆಳಗಾವಿ ಇನ್ಸ್ಟಾಗ್ರಾಂ ಲವ್ ಸ್ಟೋರಿ

KannadaprabhaNewsNetwork |  
Published : Jul 31, 2024, 01:09 AM IST
 ಇನ್‌ಸ್ಟಾಗ್ರಾಂನಲ್ಲಿ ಹುಟ್ಟಿದ ಪ್ರೀತಿಯಿಂದ ಮದುವೆಯಾದ ಜೋಡಿ | Kannada Prabha

ಸಾರಾಂಶ

ಪ್ರೀತಿ ಯಾವಾಗ ಯಾರ ಮೇಲೆ ಹುಟ್ಟುತ್ತದೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಇಲ್ಲಿಯೂ ಹಾಗೇ ಇನ್ ಸ್ಟಾಗ್ರಾಂ ನಲ್ಲಿ ಹುಟ್ಟಿದ ಪ್ರೀತಿ ಯುವತಿಯನ್ನು ಬೆಂಗಳೂರಿನಿಂದ ಬೆಳಗಾವಿಯ ಖಾನಾಪುರಕ್ಕೆ ತಂದು ನಿಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರೀತಿ ಯಾವಾಗ ಯಾರ ಮೇಲೆ ಹುಟ್ಟುತ್ತದೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಇಲ್ಲಿಯೂ ಹಾಗೇ ಇನ್ ಸ್ಟಾಗ್ರಾಂ ನಲ್ಲಿ ಹುಟ್ಟಿದ ಪ್ರೀತಿ ಯುವತಿಯನ್ನು ಬೆಂಗಳೂರಿನಿಂದ ಬೆಳಗಾವಿಯ ಖಾನಾಪುರಕ್ಕೆ ತಂದು ನಿಲ್ಲಿಸಿದೆ. ಮೂಲತಃ ಬೆಂಗಳೂರಿನ ಕಸ್ತೂರಬಾ ನಗರದ ಯುವತಿ ಪ್ರಿಯಾಂಕಾ (24) ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದ ರಾಹುಲ್ ಎಂಬ ಯುವಕನ ಜೊತೆಗೆ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ ಈಗ ಮದುವೆಯ ಹಂತಕ್ಕೆ ಬಂದು ನಿಂತಿದೆ. ಆದರೆ, ಈ ಜೋಡಿಗೆ ಹುಡುಗಿಯ ಮಾವನೇ ವಿಲನ್ ಆಗಿದ್ದಾನೆ.

ಹುಟ್ಟು ಕೋಟ್ಯಧೀಶೆ ಆಗಿರುವ ಪ್ರಿಯಾಂಕಾ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡಿದ್ದು, ಸೋದರ ಮಾವ ಚಿಕ್ಕವಯಸ್ಸಿನಿಂದ ಸಾಕಿ ಸಲುಹಿದ್ದು, ಪ್ರಿಯಾಂಕಾ ವಯಸ್ಕಳಾಗುತ್ತಿದ್ದಂತೆಯೇ ಅವಳ ಹೆಸರಲ್ಲಿರುವ ಬೆಂಗಳೂರಿನ ನಾಲ್ಕಂತಸ್ತಿನ ಮನೆ ಮತ್ತು ಕಾಂಪ್ಲೆಕ್ಸ್, ಶಿವಮೊಗ್ಗದಲ್ಲಿರುವ ಮನೆ ಇದೆಲ್ಲ ಕೈಬಿಟ್ಟು ಹೋಗತ್ತದೆ ಎಂಬ ಭಯದಿಂದ ಪ್ರಿಯಾಂಕಾಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಪ್ರೀತಿಯರಸಿ ಬೆಳಗಾವಿಗೆ ಬಂದಿದ್ದಾಳೆ.

ಇವರಿಬ್ಬರ ಪ್ರೀತಿ ವಿಚಾರ ಪ್ರಿಯಾಂಕಾಳ ಸೋದರಮಾವನ ಮಗನಿಗೆ ತಿಳಿಯುತ್ತಿದ್ದಂತೆ ಕಿರುಕುಳ ಜಾಸ್ತಿ ಮಾಡಿದ್ದರಿಂದ ಬೇಸತ್ತು ಈ ಹಿಂದೆಯೂ ಮನೆ ತೊರೆದು ಬೆಳಗಾವಿಗೆ ಬಂದಿದ್ದ ಯುವತಿಯನ್ನು ಹುಡುಕಿಕೊಂಡು ಬಂದಿದ್ದ ಅವರ ಮಾವ ಖಾನಾಪುರ ಪೊಲೀಸರಲ್ಲಿ ಸುಳ್ಳು ಕಥೆ ಕಟ್ಟಿ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿ ಕರೆದುಕೊಂಡು ಹೋಗಿದ್ದ. ಆದರೆ, ಬೆಂಗಳೂರಿಗೆ ತಲುಪುತ್ತಿದ್ದಂತೆ ತನ್ನ ಹಳೇ ಚಾಳಿ ಮುಂದುವರೆಸಿ ಯುವತಿಯನ್ನು ತಿಂಗಳುಗಳ ಕಾಲ ಸ್ನೇಹಿತನ ಮನೆಯಲ್ಲಿ ಗೃಹ ಬಂಧನದಲ್ಲಿಟ್ಟಿದ್ದ ಎನ್ನಲಾಗಿದೆ.

ಈಗ ಹೇಗೋ ಆಕೆ ಮತ್ತೆ ತಪ್ಪಿಸಿಕೊಂಡ ತನ್ನ ಪ್ರಿಯಕರ ರಾಹುಲ್ ಮನೆ ಸೇರಿದ್ದಾಳೆ. ಮೂಲತಃ ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದ ಬಡ ಕುಟುಂಬದ ಹುಡುಗ ರಾಹುಲ್ ಎಲೆಕ್ಟ್ರಿಷಿಯನ್ ವೃತ್ತಿ ಮಾಡಿಕೊಂಡು ಕುಟುಂಬ ಸಾಗಿಸುತ್ತಿದ್ದು, ಯುವತಿಯ ಮಾವ ನಮಗೆ ತೊಂದರೆ ಕೊಡಬಹುದೆಂಬ ಹೆದರಿಕೆಯಿಂದ ಖಾನಾಪುರದಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದು, ರಕ್ಷಣೆ ಕೊಡುವಂತೆ ಖಾನಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ನಾನು ರಾಹುಲ್‌ ಪರಸ್ಪರ ಪ್ರಿತಿಸಿ, ಮದುವೆಯಾಗಿದ್ದೇವೆ. ಆದರೆ, ನನ್ನ ಆಸ್ತಿಯ ಮೇಲೆ ಕಣ್ಣಿಟ್ಟಿರುವ ನನ್ನ ಸೋದರ ಮಾವನ ಮಗ ಯಾವುದೇ ಕ್ಷಣದಲ್ಲಾದರೂ ನಮಗೆ ತೊಂದರೆ ಕೊಡಬಹುದು. ಪೊಲೀಸರು ನಮಗೆ ರಕ್ಷಣೆ ನೀಡಬೇಕು.

ಪ್ರಿಯಾಂಕಾ, ಮದುವೆಯಾದ ಬೆಂಗಳೂರಿನ ಯುವತಿ

ಶಿಡ್ಲಘಟ್ಟ ಯುವತಿ ಹಾಗೂ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದ ಯುವಕ ಪ್ರೀತಿಸಿ ಮದುವೆಯಾಗಿದ್ದಾರೆ. ಅವರು ಪೊಲೀಸರು ರಕ್ಷಣೆ ಕೋರಿದ್ದಾರೆ. ಅವರಿಗೆ ರಕ್ಷಣೆ ನೀಡಲಾಗುವುದು,

ಡಾ.ಭೀಮಾಶಂಕರ ಗುಳೇದ, ಎಸ್ಪಿ, ಬೆಳಗಾವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುರೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ : ಮಹಿಳೆಯರಿಗೆ ಅವಮಾನ ಆರೋಪ- ದೂರು
ಸರ್ಕಾರದಿಂದ ಕುಡುಕರ ಸೃಷ್ಟಿ: ಬಿವೈವಿ