ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ

KannadaprabhaNewsNetwork |  
Published : Sep 12, 2026, 01:30 AM IST
11ಕೆಪಿಎಸ್ಎನ್ಡಿ3: | Kannada Prabha

ಸಾರಾಂಶ

ರಾಷ್ಟ್ರೀಯ ಬ್ಯಾಂಕ್ಗಳ ನೌಕರರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ವ್ಯವಹಾರ-ವಹಿವಾಟುಗಳನ್ನು ಬಹಿಷ್ಕರಿಸಿ ಬ್ಯಾಂಕ್‌ ನೌಕರರು ರಾಯಚೂರು ಮತ್ತು ಸಿಂಧನೂರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆಯನ್ನು ಶುಕ್ರವಾರ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು / ಸಿಂಧನೂರು

ರಾಷ್ಟ್ರೀಯ ಬ್ಯಾಂಕ್ಗಳ ನೌಕರರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ವ್ಯವಹಾರ-ವಹಿವಾಟುಗಳನ್ನು ಬಹಿಷ್ಕರಿಸಿ ಬ್ಯಾಂಕ್‌ ನೌಕರರು ರಾಯಚೂರು ಮತ್ತು ಸಿಂಧನೂರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆಯನ್ನು ಶುಕ್ರವಾರ ನಡೆಸಿದರು.

ರಾಯಚೂರಿನ ಫೆಡರಲ್‌ ಬ್ಯಾಂಕ್‌ ಮುಂದೆ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯಿಸ್ ಫೇಡರೇಶನ್‌ನ ಮತು ಯುಎಫ್‌ಬಿಯು ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರೆ ಸಿಂಧನೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಶಾಖೆಯ ಮುಂಭಾಗದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ನೇತೃತ್ವದಲ್ಲಿ ಮುಷ್ಕರ ನಡೆಯಿತು.

ವಾರದಲ್ಲಿ 2 ದಿವಸ ರಜೆ ನೀಡಬೇಕು, 5 ದಿನ ಮಾತ್ರ ಕರ್ತವ್ಯ ದಿನಗಳೆಂದು ಘೋಷಿಸಬೇಕು, ಹಳೆಯ ನಿವೃತ್ತಿ ವೇತನ ಪದ್ಧತಿಯನ್ನು ಅನುಷ್ಠಾನ ಮಾಡಬೇಕು, ಬ್ಯಾಂಕ್ಗಳ ಲಾಭಕ್ಕನುಗುಣವಾಗಿ ಸ್ಫೂರ್ತಿದಾಯಕ ಸಂಯೋಜಿತ ಪ್ರೋತ್ಸಾಹ ಧನವನ್ನು ಆಡಳಿತ ಮಂಡಳಿಯ ನೌಕರರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್‌ಗಳನ್ನು ವಿಲೀನ ಮಾಡುವ ಪ್ರಕ್ರಿಯೆ ನಿರಂತರವಾಗಿ ಸಾಗಿದ್ದು, ಇದರಿಂದ ಉದ್ಯೋಗ ಕಡಿತವಾಗುತ್ತದೆ. ಲಕ್ಷೋಪಲಕ್ಷ ಜನರಿಗೆ ಉದ್ಯೋಗ ಇಲ್ಲದಂತಾ ಗುತ್ತದೆ. ಹಿಂದೆ ಒಬ್ಬ ಕಾರ್ಮಿಕ 100 ಜನರಿಗೆ ಸೇವೆ ಒದಗಿಸಿದರೆ, ಈಗ ಒಬ್ಬ ವ್ಯಕ್ತಿ 200 ಜನರಿಗೆ ಸೇವೆ ಒದಗಿಸಬೇಕಾಗಿದೆ. ಬ್ಯಾಂಕಿಂಗ್ನ ಕರ್ತವ್ಯ ಅವಧಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿದರೆ ಅದಕ್ಕೆ ಪ್ರತ್ಯೇಕ ಭತ್ಯೆಯನ್ನು ಕೊಡಬೇಕು. ಹೀಗೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಚಳವಳಿ ನಡೆಸುತ್ತಿ ರುವುದಾಗಿ ಹೇಳಿದರು.

ಬ್ಯಾಂಕ್‌ ನ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಸದಸ್ಯರು, ಅಧಿಕಾರಿ, ಸಿಬ್ಬಂದಿ ವರ್ಗದವರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಗ್ರಾಹಕರು ತೀವ್ರ ಪರದಾಡಿದರು.

----

11ಕೆಪಿಎಸ್ಎನ್ಡಿ3: ಸಿಂಧನೂರಿನ ಎಸ್.ಬಿ.ಐ. ಮುಖ್ಯ ಶಾಖೆಯ ಮುಂಭಾಗದಲ್ಲಿ ವಿವಿಧ ರಾಷ್ಟ್ರೀಯ ಬ್ಯಾಂಕ್ಗಳ ನೌಕರರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವ್ಯವಹಾರ-ವಹಿವಾಟುಗಳನ್ನು ಬಹಿಷ್ಕರಿಸಿ ಮುಷ್ಕರ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಸಾರಿಗೆ ಬಸ್‌ ಸಮಯ ಬದಲಿಸಲು ಆಗ್ರಹಿಸಿ ಧರಣಿ
ಹುತಾತ್ಮ ಅರಣ್ಯ ಅಧಿಕಾರಿಗಳ ತ್ಯಾಗ ಅಮೋಘ