ಶಿರಸಿ: ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್‌ನಿಂದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಗರದ ಪ್ರಧಾನ ಕಚೇರಿಯ ಸುಂದರರಾವ್ ಪಂಡಿತ ಸ್ಮಾರಕ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ೨೦೨೨-೨೩ನೇ ಸಾಲಿನ ದಿ. ಜಿ.ಎಸ್. ಹೆಗಡೆ ಅಜ್ಜೀಬಳ "ಸಹಕಾರ ಪ್ರಶಸ್ತಿ "ಯನ್ನು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಭಾಸ್ಕರ ನಾರ್ವೇಕರ ಹಾಗೂ ಸಹಕಾರಿ ನೌಕರರಾಗಿ ಉತ್ತಮ ಸೇವೆ ನಿರ್ವಹಿಸಿದ ಸುಬ್ರಾಯ ನಾರಾಯಣ ಹೆಗಡೆ ಬೊಪ್ಪನಕೇರಿ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಮಟ್ಟದ ಉತ್ತಮ ಪ್ರಾಥಮಿಕ ಸಹಕಾರ ಸಂಘಗಳಾದ ಹುಳಗೋಳ ಸಂಘ, ಹೆಗ್ಗರಣಿ ಸೇವಾ ಸಂಘ, ಇಂದೂರ ಕೃಷಿ ಸಹಕಾರಿ ಸಂಘ, ಹಿತ್ಲಳ್ಳಿ ಸೊಸೈಟಿ, ನಾಗನಶೆಟ್ಟಿಕೊಪ್ಪ ಸೇವಾ ಸಹಕಾರಿ ಸಂಘ, ಆದರ್ಶ ಸೇವಾ ಸಂಘ ಜಗಲಪೇಟೆ, ಮಾಜಾಳಿ ಸೇವಾ ಸಹಕಾರಿ ಸಂಘ, ವ್ಯವಹಾಯ ಸೇವಾ ಸಹಕಾರಿ ಸಂಘ ಆಂದ್ಲೆ, ಧಾರೇಶ್ವರ ವ್ಯವಸಾಯ ಸಂಘ, ಕೆಳಗಿನೂರು ಸೇವಾ ಸಹಕಾರಿ ಸಂಘ, ಮಾರುಕೇರಿ ವ್ಯವಸಾಯ ಸಂಘ, ದಾಂಡೇಲಪ್ಪ ಸೊಸೈಟಿ ಗೌರವಿಸಲಾಯಿತು.
೨೦೨೩-೨೪ನೇ ಸಾಲಿನಲ್ಲಿ ಸಂಘದ ಮಟ್ಟದಲ್ಲಿ ನೂರಕ್ಕೆ ನೂರರಷ್ಟು ವಸೂಲಿ ಮಾಡಿದ ಇಟಗುಳಿ ಸೊಸೈಟಿ ಕಾರ್ಯದರ್ಶಿ ಮಹೇಶ ಹೆಗಡೆ ಎಮ್ಮೆನಹೊಂಡ, ರಾಗಿಹೊಸಳ್ಳಿ ಸಂಘದ ಕಾರ್ಯದರ್ಶಿ ಪ್ರಶಾಂತ ಹೆಗಡೆ, ಬೇಡ್ಕಣಿ ಸಂಘದ ಕಾರ್ಯದರ್ಶಿ ಜಿ.ಕೆ. ಶಶಿಧರ, ನಂದೋಳ್ಳಿ ಸಂಘದ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಚಿತ್ತಾರ ಸೊಸೈಟಿಯ ಮನೋಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು.೨೦೨೩-೨೪ನೇ ಸಾಲಿನಲ್ಲಿ ಉತ್ತಮ ಕೃಷಿಯೇತರ ಸಹಕಾರಿ ಸಂಘಗಳಾದ ಶಿರಸಿ ತಾಲೂಕು ಅಗ್ರಿಕಲ್ಚರಲ್ ಮಾರ್ಕೇಟಿಂಗ್ ಸೊಸೈಟಿ, ಕೃಷಿ ಹುಟ್ಟುವಳಿ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘ ಸಿದ್ದಾಪುರ, ವೀರಭದ್ರೇಶ್ವರ ಕೈಮಗ್ಗ ನೇಕಾರರ ಸಹಕಾರಿ ಸಂಘ ಯಲ್ಲಾಪುರ, ಗುತ್ತಿಮನೆ ಕಂಬಾರರ ಕುಶಲ ಕೈಗಾರಿಕಾ ಕೆಲಸಗಾರರ ಸಹಕಾರಿ ಸಂಘ ಕಾನಗೋಡ ಸಿದ್ದಾಪುರ, ಶಿರಸಿ ಅರ್ಬನ್ ಬ್ಯಾಂಕ್, ಸುವರ್ಣ ಸೊಸೈಟಿ ಶಿರಸಿ, ಮಾರುತಿ ಪತ್ತಿನ ಸಹಕಾರಿ ಸಂಘ ಶಿರಾಲಿ, ಮಂಗಲಮೂರ್ತಿ ಸೊಸೈಟಿ ಯಲ್ಲಾಪುರ, ರಾಮನಾಥ ಸಹಕಾರಿ ಸಂಘ ಹೊನ್ನಾವರ, ಹವ್ಯಕ ಸಹಕಾರಿ ಸಂಘ ಗೋಕರ್ಣ ಕುಮಟಾ, ಅಂಕೋಲಾ ಗ್ರೂಪ್ ಕೂಲಿಕಾರರ ಸಂಘ, ಉಂಚಳ್ಳಿ ಹಾಲು ಉತ್ಪಾದಕರ ಸಂಘ, ಬೆಳಕೊಂಡ ಫಿಶರೀಸ್ ಸೊಸೈಟಿ ಹೊನ್ನಾವರ ನಗದು ಪುರಸ್ಕಾರ ನೀಡಲಾಯಿತು.
ತಾಲೂಕು ಮಟ್ಟದ ಉತ್ತಮ ಶಾಖೆ ಬಹುಮಾನ ಪಡೆದ ಭಟ್ಕಳ ಶಾಖೆ, ಗ್ರಾಮಾಂತರ ಮಟ್ಟದ ಉತ್ತಮ ಶಾಖೆಗಳಾದ ಕರ್ಕಿ ಶಾಖೆ (ಪ್ರಥಮ) ಹೇರೂರ ಶಾಖೆ (ದ್ವಿತೀಯ) ವ್ಯವಸ್ಥಾಪಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಶ್ರೀಕಾಂತ ಘೊಟ್ನೇಕರ, ಕೃಷ್ಣ ದೇಸಾಯಿ, ಪ್ರಕಾಶ ಗುನಗಿ, ಆರ್.ಎಂ. ಹೆಗಡೆ ಬಾಳೇಸರ, ರಾಮಕೃಷ್ಣ ಹೆಗಡೆ ಕಡವೆ, ಎಲ್.ಟಿ. ಪಾಟೀಲ, ಬೀರಣ್ಣ ನಾಯಕ, ವಿಶ್ವನಾಥ ಭಟ್ಟ, ರಾಘವೇಂದ್ರ ಶಾಸ್ತ್ರೀ, ಪ್ರಮೋದ ದವಳಿ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ವೃತ್ತಿಪರ ನಿರ್ದೇಶಕ ತಿಮ್ಮಯ್ಯ ಹೆಡಗೆ ಇದ್ದರು. ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ ಸ್ವಾಗತಿಸಿದರು. ಬ್ಯಾಂಕಿನ ಸಿಬ್ಬಂದಿ ಅನಿತಾ ಭಟ್ಟ ನಿರೂಪಿಸಿದರು.ಹೆಮ್ಮರವಾಗಿ ಬೆಳೆದಿದೆ
ಶಿವರಾಮ ಹೆಬ್ಬಾರ್, ಅಧ್ಯಕ್ಷ ಹಾಗೂ ಶಾಸಕ