ನಗರದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 16 ರಿಂದ 20 ವರೆಗೆ ನಡೆಯಲ್ಲಿರುವ ಬ್ರಹ್ಮಕಲಶೋತ್ಸವದ ಸೇವಾ ಕಚೇರಿಯನ್ನು ಜಿ. ಶಂಕರ ಫ್ಯಾಮಿಲಿ ಟ್ರಸ್ಟ್ ಪವರ್ತಕ ನಾಡೋಜ ಡಾ ಜಿ. ಶಂಕರ್ ಉದ್ಘಾಟಿಸಿದರು.
ಉಡುಪಿ: ನಗರದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 16 ರಿಂದ 20 ವರೆಗೆ ನಡೆಯಲ್ಲಿರುವ ಬ್ರಹ್ಮಕಲಶೋತ್ಸವದ ಸೇವಾ ಕಚೇರಿಯನ್ನು ಜಿ. ಶಂಕರ ಫ್ಯಾಮಿಲಿ ಟ್ರಸ್ಟ್ ಪವರ್ತಕ ನಾಡೋಜ ಡಾ ಜಿ. ಶಂಕರ್ ಉದ್ಘಾಟಿಸಿದರು.
ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಮತ್ತಿತರ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ದೇವಳದ ಶಶಿಕಾಂತ್ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಳದ ಅರ್ಚಕರಾದ ವಾಸುದೇವ ಉಪದ್ಯಾಯ ನಡೆಸಿಕೊಟ್ಟರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಬನ್ನಂಜೆ, ಮಾಜಿ ಅಧ್ಯಕ್ಷರಾದ ಹರೀಶ್ ರಾಮ್ ಬನ್ನಂಜೆ, ಶಾಸಕ ಯಶಪಾಲ್ ಸುವರ್ಣ, ಪ್ರಮುಖರಾದ ರಮೇಶ್ ಕಾಂಚನ್, ತೋಟದಮನೆ ದಿವಾಕರ್ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್, ನಗರಸಭಾ ಮಾಜಿ ಸದಸ್ಯರಾದ ಸದಸ್ಯರಾದ ಟಿ. ಜಿ. ಹೆಗ್ದೆ, ಸವಿತಾ ಹರೀಶ್ ರಾಂ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಭಾಕರ್ ಶೆಟ್ಟಿ, ದಿನೇಶ್ ಪುತ್ರನ್, ಶೇಖರ್ ಶೆಟ್ಟಿ, ಸುದೇಶ್ ಶೇಟ್, ರಾಜೇಶ್ ಬನ್ನಂಜೆ, ಶಮಿತಾ ಎಸ್. ಭಂಡಾರಿ, ವಿದ್ಯಾಲತಾ ಶೆಟ್ಟಿ, ಲಕ್ಷ್ಮಣ್, ಸದಾನಂದ, ಗಣನಾಥ ಹೆಗ್ಡ, ಮೀನಾಕ್ಷಿ ಬನ್ನಂಜೆ ಹಾಗೂ ದೇವಳದ ವ್ಯವಸ್ಥಾಪಕ ರವಿರಾಜ್ ಭಟ್, ವಿವಿಧ ಭಜನಾ ಮಂಡಳಿಯ ಸದಸ್ಯರು ನೂರಾರು ಭಕ್ತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.