ಓಟ್‌ಬ್ಯಾಂಕಿಗಾಗಿ ಗೋಹತ್ಯೆ ನಿಷೇಧ ಕಾನೂನಿನ ಜಾರಿಯಾಗುತ್ತಿಲ್ಲ

KannadaprabhaNewsNetwork |  
Published : Apr 03, 2026, 01:45 AM IST
2ಎಚ್ಎಸ್ಎನ್12 :  | Kannada Prabha

ಸಾರಾಂಶ

ಪ್ರಸ್ತುತ ಗೋಹತ್ಯೆ ನಿಷೇಧ ಕಾಯಿದೆ ಇದ್ದರೂ ಸಹ ಮುಸ್ಲಿಮರ ತುಷ್ಠೀಕರಣದ ಹಿನ್ನೆಲೆಯಲ್ಲಿ ಅವರ ಮತಕ್ಕಾಗಿ ಗೋಹತ್ಯೆ ತಡೆಯಲು ಮುಂದಾಗುತ್ತಿಲ್ಲ. ಪೊಲೀಸ್ ಇಲಾಖೆಗೆ ಈ ಕುರಿತು ಸಂಪೂರ್ಣ ಮಾಹಿತಿ ಇದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ಸ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನಪ್ರಸ್ತುತ ಗೋಹತ್ಯೆ ನಿಷೇಧ ಕಾಯಿದೆ ಇದ್ದರೂ ಸಹ ಮುಸ್ಲಿಮರ ತುಷ್ಠೀಕರಣದ ಹಿನ್ನೆಲೆಯಲ್ಲಿ ಅವರ ಮತಕ್ಕಾಗಿ ಗೋಹತ್ಯೆ ತಡೆಯಲು ಮುಂದಾಗುತ್ತಿಲ್ಲ. ಪೊಲೀಸ್ ಇಲಾಖೆಗೆ ಈ ಕುರಿತು ಸಂಪೂರ್ಣ ಮಾಹಿತಿ ಇದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ಸ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರಸಿದ್ಧ ಮಹಾರಾಜ ಪಾರ್ಕ್ ಬಳಿ ಇರುವ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ರಾಮನವಮಿ ಮಹೋತ್ಸವವು ಭಕ್ತಿಭಾವ ಮತ್ತು ಧಾರ್ಮಿಕ ಸಂಭ್ರಮದಿಂದ ಕಂಗೊಳಿಸುತ್ತಿದ್ದು, ಗುರುವಾರ ನಡೆದ ರಥೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಪಡೆದು ನಂತರ ದೇವಸ್ಥಾನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ದೇವಸ್ಥಾನ ಅತ್ಯಂತ ಜಾಗೃತಿಯುತವಾಗಿದ್ದು, ಭಕ್ತರ ವಿಶ್ವಾಸದ ಕೇಂದ್ರವಾಗಿದೆ. ರಥೋತ್ಸವವು ಭಕ್ತಿ, ಶ್ರದ್ಧೆ ಮತ್ತು ಏಕತೆಯ ಸಂಕೇತವಾಗಿದೆ. ಪ್ರಭು ಶ್ರೀರಾಮಚಂದ್ರ ಎಲ್ಲರಿಗೂ ಆಯಸ್ಸು, ಆರೋಗ್ಯ, ಧನಸಂಪತ್ತು ಹಾಗೂ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ಸಮಾಜದಲ್ಲಿ ನಡೆಯುತ್ತಿರುವ ಮತಾಂತರ, ಲವ್ ಜಿಹಾದ್ ಮತ್ತು ಗೋಹತ್ಯೆ ವಿಷಯಗಳನ್ನು ಉಲ್ಲೇಖಿಸಿದ ಅವರು, ಇಂತಹ ಅನಿಷ್ಟ ಚಟುವಟಿಕೆಗಳನ್ನು ತಡೆಯಲು ನಮ್ಮಲ್ಲಿ ಆತ್ಮಶಕ್ತಿ ಬೆಳೆಸಿಕೊಳ್ಳಬೇಕು. ಧಾರ್ಮಿಕ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ರಾಜ್ಯಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುತಾಲಿಕ್, ಗೋಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನ ಕಾಣಿಸುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಕೆಲವು ವರ್ಗಗಳ ತುಷ್ಠೀಕರಣ ನಡೆಯುತ್ತಿದೆ. ಗೋಹತ್ಯೆ ತಡೆಯಲು ಮುಂದಾಗದ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಂತಾಗಿದೆ ಎಂದು ಆರೋಪಿಸಿದರು.

ಹಿಂದೂ ಕಾರ್ಯಕರ್ತರು ಗೋಹತ್ಯೆ ತಡೆಯಲು ಮುಂದಾದರೆ ಅವರ ಮೇಲೆಯೇ ಪ್ರಕರಣ ದಾಖಲಿಸುವುದು ವಿಷಾದನೀಯ ಎಂದು ಹೇಳಿದ ಅವರು, “ಇದು ನ್ಯಾಯಸಮ್ಮತ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಗೋಮಾತೆ ಕೇವಲ ಪೂಜಾ ಪ್ರಾಣಿ ಮಾತ್ರವಲ್ಲ, ಕೃಷಿ ವ್ಯವಸ್ಥೆಯ ಮೂಲ ಆಧಾರವಾಗಿದೆ. ಹಾಲು, ಗೊಬ್ಬರ, ಔಷಧ ಸೇರಿದಂತೆ ಅನೇಕ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಕೃಷಿ ಪ್ರಧಾನ ದೇಶದಲ್ಲಿ ಗೋ ಸಂರಕ್ಷಣೆ ಅತ್ಯಂತ ಮುಖ್ಯ” ಎಂದು ಹೇಳಿದರು.

ಹಾಸನ ಜಿಲ್ಲೆಯಲ್ಲಿಯೇ ಗೋವುಗಳ ಕಳ್ಳಸಾಗಣೆ ಹಾಗೂ ಅಕ್ರಮ ಮಾರಾಟ ನಡೆಯುತ್ತಿರುವುದಾಗಿ ಆರೋಪಿಸಿದ ಅವರು, “ಪೊಲೀಸ್ ಇಲಾಖೆಗೆ ಈ ಕುರಿತು ಸಂಪೂರ್ಣ ಮಾಹಿತಿ ಇದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಸಂಘಟನೆ ಕಾರ್ಯಕರ್ತರು ಪ್ರಕರಣಗಳನ್ನು ಬಹಿರಂಗಪಡಿಸಿದಾಗ ಮಾತ್ರ ಕ್ರಮ ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು. ಪೊಲೀಸ್ ಇಲಾಖೆ ತನ್ನ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಅವರು ಮನವಿ ಮಾಡಿದರು.

ಖಮೇನಿ ಸಾವಿಗೆ ಮೌನಾಚರಣೆ ತಪ್ಪು:

ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನೂ ಪ್ರಸ್ತಾಪಿಸಿದ ಮುತಾಲಿಕ್, ದೇಶಭಕ್ತಿಯ ಮನೋಭಾವ ಪ್ರತಿಯೊಬ್ಬ ನಾಗರಿಕನಲ್ಲೂ ಇರಬೇಕು. ವಿದೇಶಿ ವಿಚಾರಗಳಲ್ಲಿ ತಪ್ಪು ಮನೋಭಾವ ಬೆಳೆಸುವುದು ದೇಶದ ಏಕತೆಗೆ ಹಾನಿಕಾರಕ. ಇರಾನ್ ಇರಬಹುದು, ಅಮೆರಿಕ ಇರಬಹುದು ಇವರೆಲ್ಲಾ ಇಡೀ ರಾಷ್ಟ್ರಕ್ಕೆ, ಇಡೀ ಜಗತ್ತಿಗೆ ಕಂಠಕ ಇವರೆಲ್ಲರು. ಇರಾನ್ ಎಂಬುದು ದೇಶ ದ್ರೋಹಿ. ಭಯೋತ್ಪಾದಕರಿಗೆ ಸಹಾಯ ಮಾಡಿ ಶಸ್ತ್ರಾಸ್ತ್ರಗಳ ಕೊಟ್ಟು ನಮ್ಮ ದೇಶಕ್ಕೂ ಕೂಡ ಸಾಕಷ್ಟು ತೊಂದರೆ ಕೊಟ್ಟಂತಹ ದೇಶ ಅದು. ಮಹಿಳೆಯರಿಗಂತೂ ಅತ್ಯಂತ ಕ್ರೌರ್ಯವಾಗಿ ನಡೆದುಕೊಂಡಂತಹ ಆಯತ್ತುಲ್ಲಾ ಖಮೇನಿ ಅವನು. ಅಂತವರ ಪರವಾಗಿ ಕಲ್ಬುರ್ಗಿಯ ಕಾರ್ಪೋರೇಷನ್ ಬಜೆಟ್ ವೇಳೆ ಮೌನ ಆಚರಣೆ ಮಾಡಿರುವುದಕ್ಕೆ ಧಿಕ್ಕಾರ ಹೇಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆ ರೀತಿಯ ಮಾನಸಿಕತೆಯು ನಮ್ಮ ದೇಶದಲ್ಲಿ ಸರಿಯಲ್ಲ ಎಂದು ಸಲಹೆ ನೀಡಿ ಇದು ದೇಶದ್ರೋಹಿ ಮಾನಸಿಕತೆ ಇದೆ ಎಂದು ಕುಟುಕಿದರು.

ನಾಳೆ ಇರಾನ್ ಭಾರತ ಯುದ್ಧ ಆದರೇ ಇಲ್ಲಿನ ಮುಸ್ಲಿಂರು ಇರಾನ್ ಪರವಾಗಿ ನಿಲ್ಲುತ್ತಾರಾ! ಈ ದೇಶದ ಅನ್ನ ತಿಂದಿದ್ದೀರಿ!, ಈ ದೇಶದಲ್ಲಿ ಹುಟ್ಟಿದ್ದೀರಿ! ಈ ದೇಶದಲ್ಲೆ ಸೌಲಭ್ಯ ಪಡೆದಿದ್ದು, ಈ ರೀತಿಯ ವರ್ತನೆ ಸರಿಯಲ್ಲ ಎಂದು ಖಂಡಿಸಿದರು. ಅಂತಾರಾಷ್ಟ್ರೀಯ ಯುದ್ಧವಾದ ವೇಳೆ ಸಾಕಷ್ಟು ಪ್ರಕ್ರಿಯೇ ಆಗುತ್ತದೆ ಅದನ್ನು ಎದುರಿಸಬೇಕು ಎಂದು ಧೈರ್ಯ ತುಂಬಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆಯಲ್ಲಿ 2ನೇ ದಿನವೂ ಸಿದ್ದು ಭರ್ಜರಿ ಪ್ರಚಾರ
ಇಂದು ಬೆಂಗ್ಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ