ಪೊನ್ನಾಚಿ: ಹಬ್ಬಕ್ಕಾಗಿ ಊರಿಗೆ ಬಂದವರು ನೇಣಿಗೆ ಶರಣಾದರು

KannadaprabhaNewsNetwork |  
Published : Apr 03, 2026, 01:45 AM IST
ನಿಗೂಢ | Kannada Prabha

ಸಾರಾಂಶ

ಯುವ ಪ್ರೇಮಿಗಳು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಹಾಡಿಯಲ್ಲಿ ನಡೆದಿದೆ.

- ಯುವತಿ ಕಾಣೆಯಾಗಿರುವ ಬಗ್ಗೆ ತಂದೆ ದೂರು

---

ಕನ್ನಡಪ್ರಭ ವಾರ್ತೆ ಹನೂರು

ಯುವ ಪ್ರೇಮಿಗಳು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಹಾಡಿಯಲ್ಲಿ ನಡೆದಿದೆ.

ಮೀಣ್ಯಂ ಗ್ರಾಪಂ ವ್ಯಾಪ್ತಿಯ ನಕ್ಕುಂದಿ ಗ್ರಾಮದ ಸೋಲಿಗರ ಹಾಡಿ ನಾಗೇಂದ್ರ (21) ಪಾಲಾರ್‌ ಗ್ರಾಮದ ನದಿಯಾ (19) ಆತ್ಮಹತ್ಯೆ ಮಾಡಿಕೊಂಡವರು. ಪೊನ್ನಾಚಿ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಗ್ರಾಮ ದೇವತೆ ಮಾರಮ್ಮನ ಹಬ್ಬ ನಡೆಯುತ್ತಿತ್ತು. ಈ ಹಬ್ಬಕ್ಕೆ ನಾಗೇಂದ್ರನ ತಾತಾ ಶಿವಮಾದಯ್ಯ ಎಂಬುವರ ಮನೆಗೆ ನಾಗೇಂದ್ರ, ನದಿಯಾ ಆಗಮಿಸಿ‌ ಉಳಿದುಕೊಂಡಿದ್ದರು ಎನ್ನಲಾಗಿದೆ.

ಈ ನಡುವೆ ನದಿಯಾ ತಂದೆ ಮಹಾದೇವ್ ಮಲೆ ಮಹದೇಶ್ವರ ಬೆಟ್ಟ ಠಾಣೆಗೆ ಮಗಳು ಕಾಣೆಯಾದಳೆಂದು ದೂರು ಕೂಡ ಕೊಟ್ಟಿದ್ದರು. ಸದ್ಯ, ಬುಧವಾರ ತಡರಾತ್ರಿ ನದಿಯಾ ಮತ್ತು ನಾಗೇಂದ್ರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾಲಾರ್‌ ನದಿಯ ಹಾಗೂ ನಕ್ಕುಂದಿ ಗ್ರಾಮದ ನಾಗೇಂದ್ರ ಪೊನ್ನಾಚಿ ಗ್ರಾಮದ ಹಬ್ಬಕ್ಕೆಂದು ತೆರಳಿ ತಾತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳಿಬ್ಬರ ಸಾವಿಗೆ ನಿಖರವಾದ ಮಾಹಿತಿಯನ್ನು ತಿಳಿದುಬಂದಿಲ್ಲ.ಮಲೆ ಮಹದೇಶ್ವರ ಬೆಟ್ಟದ ಪೊಲೀಸ್‌ ಇನ್ಸ್‌ಪೆಕ್ಟರ್‌ ಜಗದೀಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ವಿಧಿವಿಜ್ಞಾನ ತಂಡದ ಸಿಬ್ಬಂದಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣದ ಕಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆಯಲ್ಲಿ 2ನೇ ದಿನವೂ ಸಿದ್ದು ಭರ್ಜರಿ ಪ್ರಚಾರ
ಇಂದು ಬೆಂಗ್ಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ