ಕಲ್ಯಾಣಿಯ ಸುತ್ತ ಕಿಕ್ಕಿರಿದು ತುಂಬಿದ್ದ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಅಭಿಷೇಕ ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕಲ್ಯಾಣಿಯ ನಾಲ್ಕು ಕಡೆಯ ಸೋಪಾನಗಳು, ಸಾಲುಮಂಟಪಗಳ ಮೇಲ್ಬಾಗ ಧಾರಾಮಂಟಪಗಳ ಮೇಲೆ ಕಳೆದೆಲ್ಲ ಸಲಕ್ಕಿಂತ ಕಿಕ್ಕಿರಿದು ತುಂಬಿದ್ದ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಸ್ನಪನಶೆಲ್ವರಿಗೆ ಭಕ್ತರ ಇಷ್ಠಾರ್ಥ ಈಡೇರಿಕೆ, ನಾಡಿನ ಸುಭೀಕ್ಷತೆ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕ ಮಾಡಲಾಯಿತು.
ಕಲ್ಯಾಣಿ ತಾಯಿಗೆ ಪೂಜೆನೆರವೇರಿಸಿ ಸ್ನಪನಶೆಲ್ವರನ್ನು ಕಲ್ಯಾಣಿಗೆ ಕೊಂಡೊಯ್ದು ತೀರ್ಥಸ್ನಾನ ನೆರವೇರಿಸಲಾಯಿತು. ಕಲ್ಯಾಣಿ ನಾಲ್ಕೂ ಕಡೆ ಸೇರಿದ್ದ ಸಹಸ್ರಾರು ಭಕ್ತರು ಪವಿತ್ರ ಸ್ನಾನಮಾಡಿದರು. ಬೆಳಿಗ್ಗೆ ತಂಗಳನ್ನದ ಮಂಟಪಕ್ಕೆ ಚೆಲುವನಾರಾಯಣಸ್ವಾಮಿ ಉತ್ಸವ ನಡೆದ ನಂತರ ದೇವಾಲಯದ ಅಮ್ಮನವರ ಸನ್ನಿಧಿಯಲ್ಲಿ ಸಂಧಾನಸೇವೆ ನೆರವೇರಿತು. ಮದ್ಯಾಹ್ನ 1.30ರ ವೇಳೆಗೆ ಸ್ವಾಮಿ ಉತ್ಸವ ಕಲ್ಯಾಣಿಗೆ ತಲುಪಿದ ತೀರ್ಥಸ್ನಾನದ ಪ್ರಕ್ರಿಯೆಗಳು ಆರಂಭವಾಗಿ 3 ಗಂಟೆ ವೇಳೆಗೆ ಮುಕ್ತಾಯವಾದವು.ರಾಜಮುಡಿಕಿರೀಟಧಾರಣೆ ಮುಕ್ತಾಯಸಂಜೆ ಪರಕಾಲ ಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕೈಂಕರ್ಯಗಳು ನೆರವೇರಿದವು. ಮಾ.28ರ ರ ವೈರಮುಡಿ ಉತ್ಸವದ ರಾತ್ರಿಯಿಂದ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ್ದ ರಾಜಮುಡಿ ಕಿರೀಟವನ್ನು ಗುರುವಾರದ ರಾತ್ರಿ ಪಟ್ಟಾಭಿಷೇಕ ಉತ್ಸವದಲ್ಲಿ ಕೊನೆ ಭಾರಿ ಅಲಂಕರಿಸಿತ್ತು. ರಾಜಮುಡಿ ಅಲಂಕಾರ ಮುಕ್ತಾಯವಾಗುತ್ತಿದ್ದಂತೆ ಸ್ವಾಮಿಗೆ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವ ವೈಭವದಿಂದ ನೆರವೇರಿತು.ಕಲ್ಯಾಣಿಗೆ ಗರುಡ ಪ್ರದಕ್ಷಿಣೆ
ಮತ್ತೊಂದೆಡೆ ಮೇಲುಕೋಟೆಯಿಂದ 12 ಕಿಮೀ ದೂರದ ನಾರಾಯಣಪುರ ಗ್ರಾಮದ ಬರಡು ಹೊಲದಲ್ಲಿ ಚೆಲುವನಾರಾಯಣಸ್ವಾಮಿಗೆ ತೀರ್ಥಸ್ನಾನವಾಗುತ್ತಿದ್ದಂತೆ ಅಲ್ಲಿನ ಬರಡು ಹೊಲದಲ್ಲಿ ತೆಗೆದ ಒಂದೆರಡು ಅಡಿಆಳದ ಗುಂಡಿಯಲ್ಲಿ ತೀರ್ಥ ಶೇಖರವಾಗುವುದರೊಂದಿಗೆ ಪ್ರತಿವರ್ಷದ ಪವಾಡ ಈ ವರ್ಷವೂ ಮುಂದುವರಿದು ಭಕ್ತರನ್ನು ನಿರಾಸೆ ಮಾಡಲಿಲ್ಲ. ತೀರ್ಥೋದ್ಬವದ ವೇಳೆ ಹೊಲದ ಮಾಲೀಕರಾದ ಶ್ರೀಧರ್ ಮತ್ತು ಕುಮಾರ್ ಪೂಜೆ ನೆರವೇರಿಸಿದರು. ---
ಮೇಲುಕೋಟೆಯ ಕಲ್ಯಾಣಿಯಲ್ಲಿ ಗುರುವಾರ ವೈರಮುಡಿ ಬ್ರಹ್ಮೋತ್ಸವ ತೀರ್ಥಸ್ನಾನದ ಪ್ರಯುಕ್ತ ಸೇರಿದ್ದ ಅಪಾರ ಭಕ್ತರು ವೈರಮುಡಿ ತೀರ್ಥಸ್ನಾನದಂದು ರಾಜಮುಡಿ ಕಿರೀಟಧರಿಸಿ ಅಲಂಕೃತನಾದ ಚೆಲುವನಾರಾಯಣಸ್ವಾಮಿ.