- ಅಂತರ್ಧ್ವನಿ ಮಹಿಳಾ ಘಟಕದಿಂದ ದೂರು
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬನ್ನಿತಾಳಪುರ ಗ್ರಾಮದಲ್ಲಿ ದೀರ್ಘಕಾಲದಿಂದಲೂ ಚರಂಡಿ ಕೆಟ್ಟುನಿಂತಿದ್ದು, ನೀರು ನಿಂತು ದುರ್ವಾಸನೆಯಿಂದ ಆರೋಗ್ಯಕ್ಕೂ ಅಪಾಯ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸಮಸ್ಯೆ ಬಗೆಹರಿಸುವಂತೆ ಪೃಥ್ವಿ ಅಂತರ್ಧ್ವನಿ ಮಹಿಳಾ ಒಕ್ಕೂಟವು ಗ್ರಾಮ ಪಂಚಾಯ್ತಿಗೆ ಆಗ್ರಹಿಸಿದೆ.
ಕೂಡಲೇ ಗ್ರಾಮದ ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಬನ್ನಿತಾಳಪುರ ಗ್ರಾಮ ಪಂಚಾಯ್ತಿಗೆ ಲಿಖಿತ ಮನವಿ ಸಲ್ಲಿಸಿ ಮಹಿಳೆಯರು ಆಗ್ರಹಿಸಿದರು.ಈ ಸಮಯದಲ್ಲಿ ಮಾತನಾಡಿದ ಸದಸ್ಯರು, ಇದು ಒಂದು ದಿನದ ಸಮಸ್ಯೆಯಲ್ಲ. ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದರು.
--
ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಪೃಥ್ವಿ ಅಂತರ್ಧ್ವನಿ ಮಹಿಳಾ ಸಂಘದ ಸದಸ್ಯರು ಗ್ರಾಪಂಗೆ ಮನವಿ ಸಲ್ಲಿಸಿದರು.
ಬನ್ನಿತಾಳಪುರ ಗ್ರಾಮದ ರಸ್ತೆ ಬದಿಯ ಚರಂಡಿ ತುಂಬಿ ತುಳುಕುತ್ತಿದ್ದು, ದುರ್ನಾಥ ಆವರಿಸಿದೆ.