ಬಂಟ್ವಾಳ: ನಾಳೆ ಚಿಣ್ಣರಲೋಕದ ಶೈಕ್ಷಣಿಕ ಸಂಭ್ರಮ

KannadaprabhaNewsNetwork |  
Published : Jun 21, 2025, 12:49 AM IST
32 | Kannada Prabha

ಸಾರಾಂಶ

ಬಂಟ್ವಾಳ ಚಿಣ್ಣರಲೋಕ ಸೇವಾ ಬಂಧು ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರದ ಶೈಕ್ಷಣಿಕ ಸಂಭ್ರಮ ಕಾರ್ಯಕ್ರಮ 22ರಂದು ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಂಟ್ವಾಳ ಚಿಣ್ಣರಲೋಕ ಸೇವಾ ಬಂಧು ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರದ ಶೈಕ್ಷಣಿಕ ಸಂಭ್ರಮ ಕಾರ್ಯಕ್ರಮ 22ರಂದು ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಚಿಣ್ಣರಲೋಕ ಆಡಳಿತ ಟ್ರಸ್ಟಿ ತೇವು ತಾರಾನಾಥ ಕೊಟ್ಟಾರಿ ಹಾಗೂ ಅಧ್ಯಕ್ಷ ಮೋಹನದಾಸ ಕೊಟ್ಟಾರಿ ಮುನ್ನೂರು ತಿಳಿಸಿದರು.ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಉದ್ಘಾಟಿಸಲಿದ್ದಾರೆ. ಬಿ.ಸಿ.ರೋಡಿನ ಗುರುಕೃಪಾ ಪೆಟ್ರೋಲಿಯಂ ಮುಖ್ಯಸ್ಥ ಬಿ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ಭುವನೇಶ್ ಪಚ್ಚಿನಡ್ಕ, ಬಾಲಾಜಿಬೈಲು ಚಂದ್ರಹಾಸ ರೈ, ಪಿ.ಜಯರಾಮ ರೈ ವಿಟ್ಲ, ಸುದರ್ಶನ್ ಜೈನ್ ಪಂಜಿಕಲ್ಲು, ಸರಪಾಡಿ ಅಶೋಕ ಶೆಟ್ಟಿ, ಬಿ.ವಿಶ್ವನಾಥ, ಅನಿಲ್ ಪಂಡಿತ್, ರಾಜೇಶ್ ಮೆಂಡನ್, ಗಣೇಶ್ ಕೊಲ್ಯ, ಮಂಜುನಾಥ್, ಪುಷ್ಪಾವತಿ, ರಾಜೇಶ್ ಬೋಳಂತೂರು, ಪ್ರೆಸಿಲ್ಲಾ ಎವ್ಲಿನ್ ಡಿಸೋಜ, ರಾಮಕೃಷ್ಣ ರಾವ್, ರಾಜಾ ಚಂಡ್ತಿಮಾರ್, ವಿಜಯಕುಮಾರ್ ಕೊಟ್ಟಾರಿ ಅಡ್ಯಾರು ಭಾಗವಹಿಸಲಿದ್ದಾರೆ ಎಂದರು.ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯರಾದ ಪ್ರಾರ್ಥನಾ, ಅಝ್ಕಾ ಖತೀಜ ಕುನ್ನಿಲ್, ತನ್ವಿ ಹಾಗೂ ಶ್ರೀಶೈಲ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಆರಂಭದಲ್ಲಿ ಬೋಳಂತೂರು ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ, ಸಭಾಕಾರ್ಯಕ್ರಮದ ಬಳಿಕ ಮೋಕೆದ ಕಲಾವಿದೆರ್ ಅಭಿನಯದಲ್ಲಿ ‘ತೆಲಿಪುವರಾ ಅತ್ತ್ ಬುಲಿಪುವರಾ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.ಸಂಸ್ಥೆಯು ಬೋಳಂತೂರು ಸರ್ಕಾರಿ ಹಿ.ಪ್ರಾ.ಶಾಲೆಯನ್ನು ದತ್ತು ಪಡೆದುಕೊಂಡು ೧೪ ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯ ಮಾಡಿದೆ. ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪುಸ್ತಕ ಸೇರಿದಂತೆ ಇತರ ಸೌಲಭ್ಯ, ಗೌರವ ಶಿಕ್ಷಕರಿಗೆ ವೇತನ ನೀಡುವ ಕಾರ್ಯ ಮಾಡುತ್ತಿದೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಟ್ರಸ್ಟ್‌ ಮುತಿವರ್ಜಿಯಿಂದ ಕೆಲಸ ಮಾಡುತ್ತಿದೆ ಎಂದವರು ಈ ಸಂದರ್ಭ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಇಬ್ರಾಹಿಂ ಕೈಲಾರ್, ನಿರ್ದೇಶಕಿ ಶೋಭಾ ಶೆಟ್ಟಿ, ಶಾಲಾ ದತ್ತು ಸಂಚಾಲಕ ರಾಮಕೃಷ್ಣ ರಾವ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸುಗ್ಗಿ ಸಂಕ್ರಾಂತಿ
ಕೆರೂರು ಗ್ರಾಮಸ್ಥರಿಂದ ರಸ್ತೆ ಅತಿಕ್ರಮಣ ತೆರವಿಗೆ ಗಡುವ ನಿಗದಿ