ಹಾನಗಲ್ಲ ತಾಲೂಕಿನ 162 ಕೆರೆಗಳ ತುಂಬಿಸುವ ಕಾರ್ಯಕ್ಕೆ ಚಾಲನೆ

KannadaprabhaNewsNetwork |  
Published : Jun 21, 2025, 12:49 AM IST
ಬಾಳಂಬೀಡ ಏತ ನೀರಾವರಿ ಯೋಜನೆಯ ಪಂಪ್ ಮೂಲಕ ಕೆರೆಗಳಿಗೆ ನೀರು ಹರಿಸಲು ಶಾಸಕ ಶ್ರೀನಿವಾಸ ಮಾನೆ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಕಳೆದ ವರ್ಷ ಯೋಜನೆ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸಿರುವ ಕಾರಣ ಅನುಕೂಲವಾಗಿತ್ತು. ಈ ಬಾರಿ ಅವಧಿಗೆ ಮೊದಲೇ ಪಂಪ್ ಆರಂಭಿಸಲಾಗಿದ್ದು, ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ತಾಲೂಕಿನ ರೈತರ ಜೀವನದಿ ಬಾಳಂಬೀಡ ಏತ ನೀರಾವರಿ ಯೋಜನೆಯ ಮೂಲಕ ಶಾಸಕ ಶ್ರೀನಿವಾಸ ಮಾನೆ ತಾಲೂಕಿನ ಬಾಳಂಬೀಡ ಗ್ರಾಮದ ಪಂಪ್‌ಹೌಸ್‌ನಿಂದ ಕೆರೆಗಳಿಗೆ ನೀರು ಹರಿಸಲು ಚಾಲನೆ ನೀಡಿದರು.ಶುಕ್ರವಾರ ಸಮೀಪದ ಬಾಳಂಬೀಡದ ಬಳಿಯ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಹಾಗಾಗಿ ಪಂಪ್ ಚಾಲನೆಗೊಳಿಸಿ ತಾಲೂಕಿನ 77 ಗ್ರಾಮಗಳ 162 ಕೆರೆಗಳಿಗೆ ನೀರು ಹರಿಸಲಾಲಾಯಿತು. ಯೋಜನೆಯಿಂದ ಜನ, ಜಾನುವಾರು, ಕುಡಿಯುವ ನೀರು ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ಉಪಯೋಗಕ್ಕಾಗಿ ನೀರು ಪೂರೈಸುವ ಜತೆಗೆ ಅಂತರ್ಜಲ ಮಟ್ಟದ ಸುಧಾರಣೆಗೂ ಅನುಕೂಲವಾಗಲಿದೆ.

ಕಳೆದ ವರ್ಷ ಯೋಜನೆ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸಿರುವ ಕಾರಣ ಅನುಕೂಲವಾಗಿತ್ತು. ಈ ಬಾರಿ ಅವಧಿಗೆ ಮೊದಲೇ ಪಂಪ್ ಆರಂಭಿಸಲಾಗಿದ್ದು, ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದ ಶಾಸಕ ಮಾನೆ, ನದಿ ನೀರು ಸದ್ಬಳಕೆ ಮಾಡಿಕೊಂಡು ಎಲ್ಲ ಕೆರೆಗಳನ್ನು ತುಂಬಿಸುವಂತೆ ಇದೇ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.3250 ಎಚ್‌ಪಿ ಸಾಮರ್ಥ್ಯದ ಒಟ್ಟು 6 ಪಂಪುಗಳನ್ನು ಅಳವಡಿಸಲಾಗಿದ್ದು, ಸದ್ಯ ದಿನದ 22 ಗಂಟೆಗಳ ಕಾಲ ಒಂದು ಪಂಪು ನೀರು ಹರಿಸಲಿದೆ. ನೀರಿನ ಹರಿವು ಆಧರಿಸಿ ಇನ್ನುಳಿದ ಪಂಪುಗಳನ್ನು ಆರಂಭಿಸಲಾಗುವುದು. ವರದಾ ನದಿಯಿಂದ ಒಟ್ಟು 0.445 ಟಿಎಂಸಿ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ಎಇಇ ಪ್ರಹ್ಲಾದ ಶೆಟ್ಟಿ ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿಪಂ ಮಾಜಿ ಸದಸ್ಯ ಮಿಯ್ಯಾಜಾನ್ ಕಂಬಳಿ, ತಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಬಾರ್ಕಿ, ಮುಖಂಡರಾದ ಫಕ್ಕೀರಪ್ಪ ಚಿಕ್ಕಜ್ಜನವರ, ಶಿವಣ್ಣ ಬಾರ್ಕಿ, ಮಂಜಣ್ಣ ತಡಸದ, ಬಸವರಾಜ ಚಲವಾದಿ, ದಿನೇಶ ಕಂಬಿ, ರುದ್ರಪ್ಪ ಹೇರೂರ, ದೇವೇಂದ್ರಪ್ಪ ಕತ್ತಿ, ಉಡುಚಪ್ಪ ಮಾಸಣಗಿ, ರಾಜೇಂದ್ರ ಜಿನ್ನಣ್ಣನವರ, ಗುಡ್ಡಣ್ಣ ಕೆಂಚಣ್ಣನವರ, ರಫೀಕ್ ಉಪ್ಪಣಸಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ರಾಣಿಬೆನ್ನೂರು: ಸ್ಥಳೀಯ ವಿವೇಕ ಜಾಗೃತ ಬಳಗದ ಯೋಗ ಶಿಬಿರಾರ್ಥಿಗಳು, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕು ಘಟಕ, ಜೆಸಿಐ ಅಲ್ಯೂಮಿನಿ ಕ್ಲಬ್- ವಲಯ 24 ಇವರ ಆಶ್ರಯದಲ್ಲಿ ಇಲ್ಲಿನ ಗೌರಿಶಂಕರ ನಗರದ ವಿವೇಕ ಜಾಗೃತ ಬಳಗದ ಯೋಗ ಮಂದಿರದಲ್ಲಿ ಜೂ. 21ರಂದು ಬೆಳಗ್ಗೆ 5ರಿಂದ 7ರ ವರೆಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಏರ್ಪಡಿಸಲಾಗಿದೆ.ನಿವೃತ್ತ ನೌಕರರ ಸಂಘ ತಾಲೂಕು ಘಟಕ ಅಧ್ಯಕ್ಷ ಎಸ್.ಕೆ. ನೇಸ್ವಿ ಅಧ್ಯಕ್ಷತೆ ವಹಿಸುವರು. ಜೆಎಸಿ ಜೋನ್ ಚೇರ್ಮನ್ ಪ್ರಭುಲಿಂಗಪ್ಪ ಹಲಗೇರಿ ಮುಖ್ಯ ಅತಿಥಿಯಾಗಿ ಆಗಮಿಸುವರು. ಯೋಗಾಸನಗಳ ವಿಶ್ಲೇಷಣೆ ಮತ್ತು ಅವುಗಳ ಉಪಯೋಗ ಕುರಿತು ಡಾ. ಅನಿತಾ ಭಜಂತ್ರಿ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸುಗ್ಗಿ ಸಂಕ್ರಾಂತಿ
ಕೆರೂರು ಗ್ರಾಮಸ್ಥರಿಂದ ರಸ್ತೆ ಅತಿಕ್ರಮಣ ತೆರವಿಗೆ ಗಡುವ ನಿಗದಿ