ಕನ್ನಡಪ್ರಭ ವಾರ್ತೆ ಕೆ.ಆರ್. ನಗರವ್ಯಕ್ತಿ ಯಾವುದೇ ವೃತ್ತಿ ಮಾಡಬೇಕಾದರು ಆ ಹುದ್ದೆಯ ಮಹತ್ವ ಮತ್ತು ಘನತೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಸಿ. ಅರವಿಂದ್ರ ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ವಕೀಲರು ದಿಢೀರ್ ಶ್ರೀಮಂತರಾಗುವ ಕನಸು ಕಾಣುತ್ತಿದ್ದು ಅದು ಸಲ್ಲದು ಎಂದರು.ವಕೀಲ ವೃತ್ತಿ ಮಾಡುವವರಿಗೆ ಭಾಷೆಯ ಸ್ಪಷ್ಟ ಅರಿವು ಹಾಗೂ ಹಿಡಿತ ಇರಬೇಕೆಂದು ಸಲಹೆ ನೀಡಿದ ಅವರು, ಹಿರಿಯರಿಂದ ಕಲಿಯುವ ಆಸಕ್ತಿ ಬೆಳೆಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಮಾರ್ಗದರ್ಶನ ಮಾಡಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ಚಂದನ್ ಮಾತನಾಡಿ, ಪ್ರತಿಯೊಬ್ಬರು ನ್ಯಾಯ ಬಯಸಿ ವಕೀಲರ ಬಳಿ ಬರುವುದರಿಂದ ನಾವೆಲ್ಲಾ ಅತ್ಯಂತ ಜವಾಬ್ದಾರಿಯುತ ಕೆಲಸ ನಿರ್ವಹಿಸಿ ಅವರ ನಿರೀಕ್ಷೆ ಮತ್ತು ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ನಡೆದುಕೊಳ್ಳಬೇಕು ಎಂದರು.1ನೇ ಹೆಚ್ಚುವರಿ ಸಿವಿಲ್ ನ್ಯಾಯಾದೀಶರಾದ ಅಶ್ರೀನಾ ಮಾತನಾಡಿ, ವಕೀಲರು ಪರಸ್ಪರ ಸಹಕಾರ ಮನೋಭಾವನೆಯಿಂದ ವೃತ್ತಿ ನಿರ್ವಹಣೆ ಮಾಡುವುದರ ಜತೆಗೆ ಪರಸ್ಪರ ಸಂಘಟಿತರಾಗಿ ಸಮಾಜದಲ್ಲಿ ನೊಂದವರಿಗೆ ನ್ಯಾಯ ಕೊಡಿಸಬೇಕೆಂದರು.ಹಿರಿಯ ವಕೀಲ ಕೆ.ಎನ್. ಸತೀಶ್, ತಾಲೂಕು ವಕೀಲರ ಸಂಘದ ಅಡಹಾಕ್ ಕಮಿಟಿ ಸದಸ್ಯರಾದ ಮೂರ್ತಿ, ಎಲ್.ವಿ. ರವಿಶಂಕರ್, ಕೆ.ಪಿ. ಮಂಜುನಾಥ್, ಅರುಣ್ ಕುಮಾರ್, ರಾಜ್ಯ ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಶಿವಮೂರ್ತಿ, ವಕೀಲರಾದ ಕೆ.ಸಿ.ಶಿವಕುಮಾರ್, ಎಸ್.ಪ್ರಸಾದ್, ಕೆ.ಸಿ.ಹರೀಶ್, ಬಿ.ಎಸ್. ಮಹದೇವಸ್ವಾಮಿ, ಕೆ.ಎನ್.ಸತೀಶ್, ಎಸ್.ಎಸ್.ಗಾಂಧಿ, ಬಿ.ಕೆ.ನೂತನ್ ಕುಮಾರ್, ದಿಲೀಪ್ ಕುಮಾರ್, ಎಂ.ಬಿ.ಅಕ್ಷಯ್, ಪಿ.ವಿಶ್ವನಾಥ್, ತಿಮ್ಮೇಗೌಡ, ಟಿ. ದಯಾನಂದ, ವಿಜಯಕುಮಾರ್, ಕೆ.ಆರ್. ಚಂದ್ರಮೌಳಿ, ಕೆ.ಪಿ. ಬಸವರಾಜು, ಎಚ್.ಕೆ. ಉದಯ್, ಕೆ.ಎನ್. ರಾಮಚಂದ್ರರಾವ್, ಎ.ಟಿ. ತಿಮ್ಮಪ್ಪ, ಬಿ.ವಿ. ನಾಗೇಶ್, ಬಿ.ಎಂ. ಮನೋಹರ, ಗಂಗಾಧರ್, ಎಚ್.ಎಸ್. ದುರ್ಗೇಶ್, ಕೆ.ವಿ. ಮಹೇಶ್, ಕೆ.ಪಿ. ಪ್ರಭಾವತಿ, ನೇತ್ರಾವತಿ, ಪೂರ್ಣಿಮಾ, ಗಾಯತ್ರಿ ಲಾವಣ್ಯ, ಅರ್ಪಿತಾ, ಎಂ.ಸಿ. ವಿಜಯಕುಮಾರ್, ಡಿ.ಆರ್. ರಮೇಶ್ ಹಾಗೂ ವಕೀಲರ ಸಂಘದ ಎಲ್ಲ ವಕೀಲರು ಇದ್ದರು.