33 ಅಂಕ ನೀಡಿಕೆ ಬಗ್ಗೆ ಬರಗೂರು ಅಸಮಾಧಾನ

KannadaprabhaNewsNetwork |  
Published : Feb 04, 2026, 01:15 AM IST
ಪಾವಗಡ ತಾಲೂಕು ಕಸಾಪ ವತಿಯಿಂದ ಹಮ್ಮಿಕೊಂಡಿದ್ದ 8ನೇ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು  ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ನೆರೆವೇರಿಸಿದರು. | Kannada Prabha

ಸಾರಾಂಶ

ಆಂತರಿಕವಾಗಿ 20 ಅಂಕಗಳನ್ನು ನೀಡಿ ಉಳಿದ 13 ಅಂಕಗಳನ್ನು ಕೊಟ್ಟು ವಿದ್ಯಾರ್ಥಿಗಳನ್ನು ಪಾಸು ಮಾಡಿ ಮುಂದೆ ಸಾಗಿಸುವದನ್ನು ಯಾರಾದರೂ ಶಿಕ್ಷಣ ವ್ಯವಸ್ಥೆ ಎಂದು ಕರೆಯಲು ಸಾಧ್ಯವೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಆಂತರಿಕವಾಗಿ 20 ಅಂಕಗಳನ್ನು ನೀಡಿ ಉಳಿದ 13 ಅಂಕಗಳನ್ನು ಕೊಟ್ಟು ವಿದ್ಯಾರ್ಥಿಗಳನ್ನು ಪಾಸು ಮಾಡಿ ಮುಂದೆ ಸಾಗಿಸುವದನ್ನು ಯಾರಾದರೂ ಶಿಕ್ಷಣ ವ್ಯವಸ್ಥೆ ಎಂದು ಕರೆಯಲು ಸಾಧ್ಯವೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಪಟ್ಟಣದ ಎಸ್ ಎಸ್ ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ಇಂದಿನ ಶಿಕ್ಷಣ ಪದ್ಧತಿ ಬಹಳ ದೊಡ್ಡಪಲ್ಲಟ ಉಂಟು ಮಾಡಿದೆ. ನೀವು 20 ಅಂಕಗಳನ್ನು ಆಂತರಿಕ ಮೌಲ್ಯ ಮಾಪನೆ ಮೇಲೆ ಕೊಟ್ಟು ಇನ್ನೊಂದು 13 ಅಂಕಗಳಲ್ಲಿ ಅಂಕಗಳನ್ನು ಬರೆದು ಬಿಟ್ಟರೆ ಹುಡುಗರು ಪಾಸ್ ಆಗಿ ಮುಂದೆ ಹೋಗುತ್ತಾರೆ. ಅವರನ್ನು ಮುಂದೆ ದೂಡಿ ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳಬಹುದು. ಶೇಕಡಾ ಇಂತಿಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಬಂತು ಅಂತ ಹೇಳಿ ಸಂತಸ ಪಡಬಹುದು. ಆದರೆ ಇದನ್ನು ಯಾವನಾದ್ರೂ ಶಿಕ್ಷಣ ಪದ್ಧತಿ ಅಂತ ಕರೀತಾರಾ? ಗುಣಮಟ್ಟದ ಶಿಕ್ಷಣವನ್ನು ಕೊಡಬೇಕು ಅದ್ರೆ ಮಕ್ಕಳಿಗೆ ನೀವು ಏನು ಕಲಿಸುತ್ತೀರಿ? ಮಕ್ಕಳಿಗೆ ಎಂಥ ವಾತಾವರಣ ಉಂಟು ಮಾಡುತ್ತೀರಿ ಅನ್ನೋದು ಮುಖ್ಯ. ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. 52,700 ಹುದ್ದೆಗಳು ಇವತ್ತು ಪಿಯುಸಿ ವರೆಗೆ ಖಾಲಿ ಇವೆ ಕರ್ನಾಟಕದಲ್ಲಿ ಅತಿಥಿ ಅಧ್ಯಾಪಕರನ್ನ ಕರ್ಕೊಂಡು ಪಾಠ ಮಾಡಿಸ್ತಿದ್ದಾರೆ. ಇದಕ್ಕೆ ಈ ಸರ್ಕಾರ ಒಂದೇ ಕಾರಣ ಅಲ್ಲ. ನಿರಂತರವಾಗಿ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿರುವುದಾಗಿದೆ. ಜೊತೆಗೆ ಮುಖ್ಯವಾಗಿ ಪ್ರಾಥಮಿಕ ಶಿಕ್ಷಣವನ್ನೇ ನಾವು ಲೆಕ್ಕಕ್ಕೆ ಇಟ್ಟುಕೊಳ್ಳದೆ ಇರುವುದರಿಂದ ಇಂದಿನ ಎಲ್ಲ ಸ್ಥಿತ್ಯಂತರಕ್ಕೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾನು ಅಧಿಕೃತವಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದು ಪಾವಗಡದಲ್ಲಿ. ಇಲ್ಲಿ ತೆಲುಗು ಮಾತನಾಡುತ್ತಾರೆ ಆದರೆ ತೆಲುಗು ಶಾಲೆಗಳು ಇಲ್ಲ. ಇದು ವಿಶೇಷವಾಗಿದೆ. ಇಲ್ಲಿ ವಿಭಿನ್ನ ಎರಡು ಸಂಸ್ಕೃತಿ ಇದೆ. ಇಲ್ಲಿನ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಯಾರಿಗೂ ಕೇಳಿಸುವುದಿಲ್ಲ ಇಲ್ಲಿಗೆ ವಿಶೇಷವಾದ ಅನುದಾನ ಕೊಡಬೇಕು. ನಾನು 2002 ರಲ್ಲಿ ಕೊಟ್ಟ ವರದಿ ಹಿನ್ನೆಲೆಯಲ್ಲಿ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದರು. ಗಡಿ ಭಾಗಗಳು ಅಭಿವೃದ್ಧಿ ಕಾಣಬೇಕು. ಕನ್ನಡ ಭವನ ಬೇಕು ಅಂದ್ರೆ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಂದು ಅರ್ಜಿ ಸಲ್ಲಿಸಿ, ಸ್ಥಳೀಯ ಶಾಸಕ ಬೆಂಬಲ ಕೋರಿ ಹಕ್ಕೊತ್ತಾಯ ಮಂಡಿಸಿ ಅರ್ಜಿ ಸಲ್ಲಿಸಿದರೆ ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಅವರ ಜತೆ ಚರ್ಚಿಸಿ ಗಡಿ ತಾಲೂಕಿನ ಪಾವಗಡದಲ್ಲಿ ಕನ್ನಡ ಭವನ ಮಂಜೂರಾತಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಎಂಟನೇ ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಸಣ್ಣನಾಗಪ್ಪ ಅವರನ್ನು ಸಾರೋಟದಲ್ಲಿ ಮೆರವಣಿಗೆಯಲ್ಲಿ ಕರೆತಂದಿದ್ದು ತಾಲೂಕು ಕಸಾಪ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ನಿಕಟಪೂರ್ವ ಅಧ್ಯಕ್ಷ ಹ.ರಾಮಚಂದ್ರಪ್ಪ ಸೇರಿದಂತೆ ಆರ್.ಟಿ.ಖಾನ್, ಕೆ.ಎಂ.ಪ್ರಭಾಕರ್ ,ಪ್ರಮೋದ್ ಕುಮಾರ್ ಎಂ.ಎಸ್.ವಿಶ್ವನಾಥ್ ಇತರೆ ಅನೇಕ ಮಂದಿವಸಾಹಿತಿ ಹಾಗೂ ಗಣ್ಯರು ಉಒಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಧಿ ಬಗ್ಗೆ ನಿರಂತರ ಅಪಪ್ರಚಾರ ಸಲ್ಲ
ರೇಷ್ಮೆನಗರಿ ರಾಮನಗರ ಕ್ಲೀನ್ ಸಿಟಿ ಮಾಡುವ ಸಂಕಲ್ಪ