ಕೊಟ್ಟೂರು: ದೊಡ್ಡ ಮಳೆ ಬಂದಾಗಲೆಲ್ಲ ಸಂಚಾರ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗುವ ಕೊಟ್ಟೂರು-ಕೂಡ್ಲಿಗಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂಬ ತಾಲೂಕಿನ ಜನತೆಯ ದಶಕಗಳ ಬೇಡಿಕೆಯಾಗಿ ಇನ್ನು ಕನಸಾಗಿಯೇ ಉಳಿದಿದೆ.ಇಂತಹ ರಸ್ತೆಯ ಮೇಲೆ ಸೇತುವೆ ನಿರ್ಮಿಸಿಬೇಕೆಂಬ ಬೇಡಿಕೆ ಚಾಲನೆ ಪಡೆದುಕೊಂಡಿತ್ತು. ಆದರೆ ಜನಪ್ರತಿನಿಧಿಗಳಾಗಲೀ ಸಂಬಂಧಿತ ಲೋಕಪಯೋಗಿ ಇಲಾಖೆ ಅಧಿಕಾರಿಗಳಾಗಲೀ ಸೇತುವೆ ನಿರ್ಮಿಸಿಲ್ಲ.
ಈ ವರ್ಷ ಭಾರಿ ಮಳೆಯ ಮುನ್ಸೂಚನೆಯು ಹವಾಮಾನ ಇಲಾಖೆಯಿಂದ ವ್ಯಕ್ತವಾಗುತ್ತಿದೆ. ಇದರಿಂದ ಮತ್ತಷ್ಟು ಚಿಂತನೆಗೊಳಗಾದ ತಾಲೂಕಿನ ಜನತೆ ಈಗಲಾದರೂ ಸೇತುವೆ ನಿರ್ಮಿಸಲು ಸಂಬಂಧಪಟ್ಟವರು ಮುಂದಾಗುತ್ತಾರೋ ಎಂದು ಎದುರು ನೋಡುತ್ತಿದ್ದಾರೆ.
ತಾಲೂಕಿನ ಮಲ್ಲನಾಯಕನಹಳ್ಳಿ ಬಳಿಯ ವಡ್ರಹಳ್ಳ ಆಗಾಗ ಮಳೆ ನೀರು ಪ್ರವಾಹದ ರೂಪ ಪಡೆದು ಕೂಡ್ಲಿಗಿ ರಸ್ತೆ ಮೇಲೆ ಹರಿಯುತ್ತಿರುವ ಕಾರಣದಿಂದ ನೀರು ನಿಲುಗಡೆಗೊಳ್ಳುವವರೆಗೂ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ ಜನ ಪ್ರತಿನಿಧಿಗಳು ಕೂಡಲೇ ಗಮನ ಹರಿಸಿ ಸೇತುವೆ ನಿರ್ಮಿಸುವ ಯೋಜನೆಯನ್ನು ಕಾರ್ಯರೂಪ ಗೊಳಿಸಲು ಮುಂದಾಗಬೇಕು ಎನ್ನುತ್ತಾರೆ ಹವ್ಯಾಸಿ ಬರಹಗಾರ ಅಂಚೆ ಕೊಟ್ರೇಶ್.