ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಮಳವಳ್ಳಿ ತಾಲೂಕಿನ ಹೊನ್ನನಾಯಕನ ಹಳ್ಳಿಯ ಸಿದ್ದಪ್ಪಾಜಿ ದೇವಾಲಯದ ಬಸವ ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ 40 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಅಧಿಶಕ್ತಿ ಕಂಬಮ್ಮ ದೇವಾಯಲಕ್ಕೆ ನೂತನ ದೇವರ ಗುಡ್ಡನನ್ನು ಗ್ರಾಮಕ್ಕೆ ಬಂದ ಎರಡು ಗಂಟೆಯ ಅವಧಿಯಲ್ಲಿ ಆಯ್ಕೆ ಮಾಡುವಲ್ಲಿ ಯಶಸ್ವಿ ಆಯಿತುಕಳೆದ ಆ. 9ರ ಶುಕ್ರವಾರ ಈ ದೇವಾಲಯದ ಉದ್ಘಾಟನೆಯ ಬಳಿಕ ಈ ದೇವಾಲಯದಲ್ಲಿ ಪೂಜೆ ಪುರಸ್ಕಾರ ಧಾರ್ಮಿಕ ಆಚರಣೆ ಮಾಡಲು ದೇವರ ಗುಡ್ಡ (ಅರ್ಚಕ) ಮತ್ತು ಹೆಗ್ಗಡಿ ಹಾಗೂ ಕೋಲಕಾರನನ್ನು ಆಯ್ಕೆ ಮಾಡಲು ಆ. 12 ಸೋಮವಾರ ಈ ದೇವಾಲಯವನ್ನು ನಿರ್ಮಿಸಿದ ಬೆಣ್ಣೆ ಸಿದ್ದೇಗೌಡರ ವಂಶಸ್ಥದ ಕುಟುಂಬಸ್ಥರು ಹೊನ್ನನಾಯನಕ ಹಳ್ಳಿಗೆ ತೆರಳಿ ಬಸವನನ್ನು ಆಹ್ವಾನಿಸಿದ್ದರು.
ಮಂಗಳವಾರ ಬೆಳಗ್ಗೆ 10.45ಕ್ಕೆ ಗ್ರಾಮಕ್ಕೆ ಅಗಮಿಸಿದ ಬಸವನನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ಶ್ರೀ ಆದಿಶಕ್ತಿ ಕಂಬಮ್ಮ ದೇವಾಲಯಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಹೊರ ಆವರಣದಲ್ಲಿ ಆಯೋಜಿಸಲಾಗಿದ್ದ ದೇವರ ಗುಡ್ಡನ ಆಯ್ಕೆಗಾಗಿ ಜಯಕಾರ ಚಪ್ಪಾಳೆಯೊಂದಿಗೆ ಬಸವನನ್ನು ಕರೆತರಲಾಯಿತುಮೊದಲಿಗೆ ಬೆಣ್ಣೆ ಸಿದ್ದೇಗೌಡರ ಕುಟುಂಬದ ಸುಮಾರು 19 ಯುವಕರನ್ನ ಕೂರಿಸಿ ಬಸವ ಇದರಲ್ಲಿ ಮೂರು ನಾಲ್ಕು ಮಂದಿ ಬಳಿ ಸಾಕಷ್ಟು ಬಾರಿ ಹೋಗಿ ಅವರನ್ನ ಗುದ್ದಿ ಮತ್ತೆ ದೇವಸ್ಥಾನಕ್ಕೆ ಹೋಗಿ ಬಂದ ಬಸವ ಕೊನೆಗೆ ಸಿ.ಎಂ. ಚಿರಂತ್ ಎಂಬವರನ್ನು ಗುದ್ದುವ ಮೂಲಕ ಅಲ್ಲಿಂದ ದೇವಾಲಯದವರೆಗೆ ತಳ್ಳಿಕೊಂಡು ಬಂದು ದೇವರ ಗುಡ್ಡಪ್ಪನ್ನಾಗಿ ಆಯ್ಕೆಮಾಡಿದಾಗ ನೆರೆದಿದ್ದ ಸಾವಿರಾರು ಮಂದಿ ಬಸವನಿಗೆ ಚಪ್ಪಾಳೆ ತಟ್ಟಿ ಜಯಕಾರ ಹಾಕಿ ಸಂಭ್ರಮಿಸಿದರು
ನಂತರ ನೂತನ ದೇವರ ಗುಡ್ಡನಿಗೆ ಎರಡು ಬಿಂದಿಗೆ ನೀರು ಹಾಕಿ ಕೆಂಪು ಕಾವಿಯನ್ನು ತೊಡಿಸಿ ಹೂವಿನ ಹಾಕಿ ಪೂಜೆ ಮತ್ತು ಮಹಾ ಮಂಗಳಾ ಆರತಿಯನ್ನು ದೇವರ ಗುಡ್ಡನ ತಂದೆ- ಸಣ್ಣಮಹದೇವ ತಾಯಿ- ರಾಜೇಶ್ವರಿ ಮತ್ತು ಅವರು ಕುಟುಂಬಸ್ಥರು ನೇರವೇರಿಸಿದರುಬಳಿಕ ವಾದ್ಯಗೋಷ್ಠಿಯ ನಾದ ಮತ್ತು ಚಪ್ಪಾಳೆ ಜಯಕಾರ ಹಾಕಿ ದೇವರ ಗುಡ್ಡನ ಮೂಲಕ ಕಂಬಮ್ಮ ತಾಯಿಯನ್ನು ಬರ ಮಾಡಿಕೊಂಡು ಕಳಹೊತ್ತ ದೇವರ ಗುಡ್ಡ ದೇವಾಲಯದ ಹೊರ ಸುತ್ತಾ ಸುತ್ತಿ ಬಂದು ದೇವಾಲಯಕ್ಕೆ ಬಸವನೊಂದಿಗೆ ಪ್ರವೇಶ ಮಾಡಿದಾಗ ಇಲ್ಲಿ ಹಾಜರಿದ್ದ ಸಾವಿರಾರು ಮಂದಿ ಧಾರ್ಮಿಕತೆಯನ್ನು ಸಾಕ್ಷಿಕರಿಸಿದರು
ನಂತರ ಈ ವಂಶದ ಮತ್ತು ದೇವಾಲಯದ ಉಸ್ತುವಾರಿ ಹಾಗೂ ಇಲ್ಲಿನ ಕಾರ್ಯಕ್ರಮವನ್ನು ನೋಡಿಕೊಳ್ಳುವ ಇವುಗಳನ್ನು ವಂಶಸ್ಥರಿಗಾಗಿ ತಿಳಿಸುವ ಹೆಗ್ಗಡಿ ಮತ್ತು ಕೋಲಕಾರನ್ನು ಆಯ್ಕೆ ಮಾಡಲು ಬಸವನ್ನು ಕೋರಿದಾಗ ಇದರ ಆಯ್ಕೆಗಾಗಿ ದೇವಾಲಯ ಮುಂದೆ ಕುಳಿತಿದ್ದ ಈ ವಂಶದದ ಕುಟುಂಬದಲ್ಲಿ ಒಬ್ಬರಾದ ಸಿ.ಪಿ. ಗಿರೀಶ್ ಅವರನ್ನು ಹೆಗ್ಗಡಿಯಾಗಿ ಮತ್ತು ಮಹದೇವ್ ಅವರನ್ನು ಕೋಲಕಾರನನ್ನಾಗಿ ದೇವಾಲಯಕ್ಕೆ ತಳ್ಳುವ ಮೂಲಕ ಆಯ್ಕೆ ಮಾಡಿಕೊಟ್ಟಿತುಆನಂತರ ನೂತನ ದೇವರ ಗುಡ್ಡ, ಹೆಗ್ಗಡಿ ಮತ್ತು ಕೋಲಕಾರನಿಗೆ ಕೇಶ ಮುಂಡನಾ ಮಾಡಿಸಿ ಧಾರ್ಮಿಕ ಪೂಜಾ ವಿಧಿ- ವಿಧಾನವನ್ನು ನೆರವೇರಿಸಿ ಗುರು ಬೋಧನೆಯನ್ನು ಅಡಗನಹಳ್ಳಿಯ ಗುರುಗಳಾದ ಚಂದ್ರಪಾಲ್ ಅವರು ನಡೆಸಿಕೊಟ್ಟರು. ಈ ಮೂಲಕ 12 ದಿವಸಗಳಿಂದ ನಡೆದ ಇಲ್ಲಿನ ಧಾರ್ಮಿಕ ಪೂಜಾ ಕಾರ್ಯಕ್ರಮ ಮುಕ್ತಾಯಗೊಂಡಿತು.