ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬಸವಮಾರ್ಗ ಸಂಸ್ಥೆಯಲ್ಲಿ ಶನಿವಾರ ವಿಶೇಷ ಉಪನ್ಯಾಸ ನೀಡಿದ ಅವರು, ಜೀವನದಲ್ಲಿ ಸಣ್ಣ ಪುಟ್ಟ ಗುರಿಗಳನ್ನು ಇಟ್ಟುಕೊಳ್ಳುವುದು ದೊಡ್ಡ ಅಪರಾಧ. ದೊಡ್ಡ ದೊಡ್ಡ ಗುರಿ, ಉದ್ದೇಶಗಳನ್ನು ಇಟ್ಟುಕೊಳ್ಳುವುದೇ ನಿಜವಾದ ಪರೋಪಕಾರ. ಈ ನಿಟ್ಟಿನಲ್ಲೇ ಸಮಾಜಮುಖಿ ಕೆಲಸ ಮಾಡುವುದೇ ನಮ್ಮ ಮೊದಲ ಆದ್ಯತೆಯಾಗಬೇಕು. ದೊಡ್ಡ ಕನಸು, ದೊಡ್ಡ ಗುರಿಯಿಂದ, ದೊಡ್ಡ ಯಶಸ್ಸು, ಶ್ರೇಯಸ್ಸು ಸಿಗುತ್ತದೆ ಎಂದರು.
ಮನುಷ್ಯನಿಗೆ ಏನು ಮಾಡಬೇಕು ಎಂದು ತಿಳಿದಿರುವ ಜೊತೆಗೆ, ಏನು ಮಾಡಬಾರದು ಎನ್ನುವುದು ಕೂಡ ತಿಳಿದಿರಬೇಕು. ಮನುಷ್ಯ ಸದಾ ಪ್ರಜ್ಞೆಯಲ್ಲಿ ಇರಬೇಕು. ಪ್ರಜ್ಞೆ ಕಳೆದುಕೊಂಡರೆ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಯೋಚನೆ ಮಾಡಲೂ ನಮ್ಮಿಂದ ಸಾಧ್ಯವಾಗುವುದಿಲ್ಲ. ಕುಡಿತ ಮನುಷ್ಯನ ಪ್ರಜ್ಞೆ ಕಸಿಯುತ್ತದೆ. ಆ ಕಾರಣದಿಂದ ವ್ಯಸನಗಳಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು.ಈ ಹುಟ್ಟಿಗೆ ಯಾವುದೋ ಒಂದು ಬಲವಾದ ಕಾರಣ ಇದೆ. ದೇವರು ಕೊಟ್ಟ ದೇಹ ಮತ್ತು ಮನಸ್ಸನ್ನು ಹಾಳು ಮಾಡಿಕೊಳ್ಳಬಾರದು. ಎಲ್ಲಾ ಅಂಗವನ್ನು ಸುಸ್ಥಿತಿಯಲ್ಲಿ ಇಟ್ಟು ಪರಮಾತ್ಮ ನಮಗೆ ಜೀವ, ಜೀವನ ನೀಡುತ್ತಾನೆ. ಆದರೆ ನಾವೇನು ಮಾಡುತ್ತಿದ್ದೇವೆ? ಬೇಡದ ಚಟಗಳಿಗೆ ದಾಸರಾಗಿ ದೇಹದ ಅಂಗಾಂಗಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದು ದೇವರಿಗೆ ನಾವು ಮಾಡುವ ದೊಡ್ಡ ದ್ರೋಹ. ಈ ಬಗ್ಗೆ ಆತ್ಮ ವಿಮರ್ಶೆ ತುರ್ತಾಗಿ ನಡೆಯಬೇಕಾಗಿದೆ ಎಂದರು.
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸೂರು ಇದೆ. ಆದರೆ ವ್ಯಸನಕ್ಕೆದಾಸರಾದವರಿಗೆ ಯಾವ ಸೂರಿದೆ. ಆತನಿಗೆ ಸಮರ್ಪಕವಾದಸೂರು ಕಲ್ಪಿಸಿ, ಬದಲಾವಣೆಗೆ ಸೂಕ್ತ ಅವಕಾಶ, ವೇದಿಕೆ ಕಲ್ಪಿಸುವುದೇ ನಮ್ಮ ಗುರಿ, ಉದ್ದೇಶವಾಗಿದೆ ಎಂದರು.
ಸಂಸ್ಥೆಯ ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯ, ಯೋಗ ಶಿಕ್ಷಕ ಎಚ್.ಪಿ. ನವೀನ್ ಕುಮಾರ್, ಸಿಬ್ಬಂದಿ ಆನಂದ್, ಸಂಜಯ್ ಮೊದಲಾದವರು ಇದ್ದರು.