ಕನ್ನಡಪ್ರಭ ವಾರ್ತೆ, ತುಮಕೂರು
ಬುಧವಾರ ನಗರದ ಸಂಸದ, ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಚೇರಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಇದ್ದ ಅಧಿಕಾರವನ್ನು ಬಿಟ್ಟು ಜನರ ಹಿತಕ್ಕಾಗಿ, ಜನರಿಗೆ ಶಕ್ತಿ ತುಂಬಲು ಪ್ರಯತ್ನಿಸಿದವರಲ್ಲಿ ಬಸವಣ್ಣ, ಅಂಬೇಡ್ಕರ್, ಬುದ್ಧ, ಗಾಂಧೀಜಿ ಪ್ರಮುಖರು ಎಂದರು.ಎಲ್ಲರೂ ಸಮಾನವಾಗಿ ಬಾಳಬೇಕು ಎಂದು ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಅಲ್ಲಿ ಶರಣರ ಜೊತೆಗೂಡಿ ಜಾತಿಭೇದ, ಸಾಮಾಜಿಕ ತಾರತಮ್ಯ ನಿವಾರಣೆಗೆ ಚರ್ಚೆ ಮಾಡುತ್ತಿದ್ದರು. ಬಸವಣ್ಣನವರ ವಚನಗಳಲ್ಲಿ ಜೀವನ ಮೌಲ್ಯ ಸಾರಿದರು ಎಂದರು.
ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಎಚ್. ಹುಚ್ಚಯ್ಯ ಮಾತನಾಡಿ, ಬಸವಣ್ಣನವರು ಸಮ ಸಮಾಜದ ನಿರ್ಮಾತೃ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅದರಂತೆ ನಡೆದರೆ ಸಮಾಜದಲ್ಲಿ ಯಾವ ಗಲಭೆ, ಗಲಾಟೆ, ದ್ವೇಷ, ಅಸೂಯೆ ಇಲ್ಲದೆ ಪ್ರತಿಯೊಬ್ಬರೂ ಶಾಂತಿ, ಸೌಹಾರ್ದತೆಯಿಂದ ಬಾಳಲು ಸಾಧ್ಯವಿದೆ ಎಂದರು.
ಬಿಜೆಪಿ ಮುಖಂಡರಾದ ಎಸ್. ಶಿವಪ್ರಸಾದ್, ನಗರ ಅಧ್ಯಕ್ಷ ಧನುಷ್, ಮಾಜಿ ಅಧ್ಯಕ್ಷ ಟಿ.ಹೆಚ್. ಹನುಮಂತರಾಜು, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಮುಖಂಡರಾದ ಗಣೇಶ್‌ಪ್ರಸಾದ್, ನಂಜುಂಡಪ್ಪ(ದಾಸಣ್ಣ), ನಿಸರ್ಗ ರಮೇಶ್, ಬಿ.ಬಿ.ಮಹದೇವಯ್ಯ, ಸೊಗಡು ಕುಮಾರಸ್ವಾಮಿ, ತರಕಾರಿ ಮಹೇಶ್, ಕೊಪ್ಪಲ್ ನಾಗರಾಜು, ಲಕ್ಷ್ಮೀನಾರಾಯಣ್, ವಿನಯ್‌ಕುಮಾರ್, ಮಂಜುನಾಥ್, ಮಹೇಶ್ ಮೊದಲಾದವರು ಭಾಗವಹಿಸಿದ್ದರು.