ಬಸವಣ್ಣ ಬಹುದೊಡ್ಡ ಸಮಾಜ ಸುಧಾರಕ: ತಹಸೀಲ್ದಾರ್ ಅನಿಲ್ ಎಂ.

KannadaprabhaNewsNetwork |  
Published : Apr 21, 2026, 01:30 AM IST
01 | Kannada Prabha

ಸಾರಾಂಶ

ಬಸವಣ್ಣನವರ ಜಯಂತಿ ಪೂಜೆಗೆ ಆಗಮಿಸಿದ ಭಕ್ತರಿಗೆ ಹೆಸರುಬೇಳೆ, ಮಜ್ಜಿಗೆ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಪಟ್ಟಣದ ನಗರ್ತರ ಬೀದಿ ೧೭ನೇ ವಾರ್ಡಿನ ಚಿಕ್ಕಮಠದ ನಾಗದೇವತೆ, ಸುಬ್ರಮಣ್ಯ, ಬಸವೇಶ್ವರ ದೇವಾಲಯದಲ್ಲಿ ಬಸವಜಯಂತಿ ಆಚರಣಾ ಸಮಿತಿಯಿಂದ ೭೨ನೇ ವರ್ಷದ ಬಸವ ಜಯಂತಿ ಆಚರಿಸಲಾಯಿತು.

ಈ ಸಮಯದಲ್ಲಿ ತಹಸೀಲ್ದಾರ್ ಅನಿಲ್ ಎಂ. ಮಾತನಾಡಿ, ಶಿವಶರಣರು ರೂಪಿಸಿದ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ವರ್ಗದ ಎಲ್ಲ ವೃತ್ತಿಯ ದುಡಿಮೆದಾರರಿಗೆ ಸಮಾನ ಸ್ಥಾನವಿತ್ತು. ಹನ್ನೆರಡನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು ಬಸವಣ್ಣನವರು. ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ. ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದ ಸ್ತ್ರೀಕುಲವನ್ನು ಉದ್ದರಿಸಿದ ಹಿರಿಮೆ ಬಸವಣ್ಣನವರದು ಎಂದು ಹೇಳಿದರು. ಈ ವೇಳೆ ಬಸವಣ್ಣನವರ ಜಯಂತಿ ಪೂಜೆಗೆ ಆಗಮಿಸಿದ ಭಕ್ತರಿಗೆ ಹೆಸರುಬೇಳೆ, ಮಜ್ಜಿಗೆ ವಿತರಿಸಲಾಯಿತು. ಈ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆ ನಿವೃತ್ತ ಮುಖ್ಯಾಧಿಕಾರಿ ಪ್ರಭುದೇವ್, ತಾಲೂಕು ಬಸವಜಯಂತಿ ಆಚರಣಾ ಸಮಿತಿ ಅಧ್ಯಕ್ಷೆ ಮಂಗಳಮ್ಮ ಬಸವರಾಜಯ್ಯ, ಕಾರ್ಯದರ್ಶಿ ಶಾಂತಮೂರ್ತಿ, ಸಮಿತಿ ಸದಸ್ಯರಾದ ಟಿ.ಬಸವರಾಜ್, ಬಿ.ಮಧುಚಂದ್ರ, ವೀರಭದ್ರಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ಜಿಲಾ ಪ್ರಧಾನಕಾರ್ಯದರ್ಶಿ ಆರ್.ರಮೇಶ್, ಮುರಳಿಮೋಹನ್, ನರಸಿಂಹಮೂರ್ತಿ, ಭ್ರಮರಾಂಭಿಕ, ಶಾಂತಕುಮಾರಿ, ಸುನಂದ, ಲತಾ. ಅರ್ಚಕರಾದ ಎಸ್.ರುದ್ರೇಶ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನವರ ವಚನಗಳು ವಿಶ್ವದ ಸಮಸ್ಯೆಗಳಿಗೆ ಪರಿಹಾರ: ಡಾ.ಕುಮಾರ
ಬಸವಣ್ಣನವರ ತತ್ವಗಳು ಸಮಾನತೆಗೆ ದಾರಿದೀಪ