ಬಸವಣ್ಣ ಪವಾಡ ಪುರುಷನಲ್ಲ, ಪರಿವರ್ತನಾ ಪುರುಷ

KannadaprabhaNewsNetwork |  
Published : Oct 13, 2025, 02:00 AM IST
ಪೋಟೋ, 12ಎಚ್‌ಎಸ್‌ಡಿ2: ಕುಂಚಿಟಿಗ ಮಠದಲ್ಲಿ ನಡೆದ ಸುಜ್ಞಾನ ಸಂಗಮದ ಕಾರ್ಯಕ್ರಮದಲ್ಲಿ ಶಾಂತವೀರಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಕುಂಚಿಟಿಗ ಮಠದಲ್ಲಿ ನಡೆದ ಸುಜ್ಞಾನ ಸಂಗಮದ ಕಾರ್ಯಕ್ರಮದಲ್ಲಿ ಶಾಂತವೀರ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಬಸವಣ್ಣ ಪವಾಡ ಪುರುಷನಲ್ಲ ಪರಿವರ್ತನಾ ಪುರುಷ ಎಂದು ಕುಂಚಿಟಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ 23ನೇ ವರ್ಷದ 10ನೇ ತಿಂಗಳ ಸುಜ್ಞಾನ-ಸಂಗಮ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣ ದಲಿತೋದ್ಧಾರಕ ಸಮಾನತೆಯ ಹರಿಕಾರ, ಸಹಬಾಳ್ವೆಯ ಪ್ರತೀಕ ಸೌಹಾರ್ದತೆಯ ಸಂಕೇತ ಕಾಯಕವೇ ಕೈಲಾಸ ಎಂಬ ಮಂತ್ರವನ್ನು ನೀಡಿದ ಕಾರುಣಿಕ ಪುರುಷ ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬ ತತ್ವ ಬೋಧಿಸಿದ ತತ್ವಜ್ಞಾನಿ ಮಹಿಳಾ ಸಬಲೀಕರಣದ ಕಾರಣಿಕರ್ತ ಸರ್ವರು ಸಮಾನರು ಎಂದು ಸಾರಿದ ಸಮ ಸಮಾಜದ ಕನಸನ್ನು ನನಸು ಮಾಡಿದ ನುಡಿದಂತೆ ನಡೆದು ತೋರಿದ ಅದ್ಭುತ ದೇವಮಾನವ , ಮಾನವನನ್ನು ಮಹದೇವನನ್ನಾಗಿಸಿದ ಮರಣವನ್ನು ಮಹಾನವಮಿ ಎಂದು ಭೋದಿಸಿದ ಪ್ರಬುದ್ಧ ಚಿಂತಕ ಬಸವಣ್ಣ ಅಂತಹ ಆದರ್ಶ ಪುರುಷರ ದಾರಿಯಲ್ಲಿ ಸಂಚರಿಸುವ ಮೂಲಕ ಬದುಕನ್ನು ಹಸನಾಗಿಸಲು ಸುಜ್ಞಾನ ಸಂಗಮವನ್ನು ಆಯೋಜಿಸುತ್ತಿದ್ದೇವೆ ಎಂದರು.

ಸುಜ್ಞಾನ ಸಂಗಮ ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮವವಲ್ಲ ಮನಸ್ಸು ಮನಸುಗಳನ್ನು ಬೆಸೆಯುವ, ಜಾತಿ ವೈಷ್ಣವ್ಯಗಳನ್ನು ದೂರ ಮಾಡಿ ಜಾತಿ ಶ್ರೇಷ್ಠ ಎಂಬ ಮನಸ್ಥಿತಿಯನ್ನು ಬದಲಾಯಿಸಿ, ಮಾನವ ಶ್ರೇಷ್ಠ ಎಂಬ ತತ್ವವನ್ನು ಸಾರಲು ಕಳೆದ 23 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ ಇದರ ಲಾಭ ಮಠಕ್ಕಲ್ಲ ಭಕ್ತರಿಗೆ ಎಂದರು.

ವಾಲ್ಮೀಕಿ ಮಹರ್ಷಿಗಳು ಸಾಮಾನ್ಯನು ಅಸಮಾನ್ಯನಾಗಬಲ್ಲ ಎಂಬ ಶ್ರೇಷ್ಠ ಸಂದೇಶವನ್ನು ಜಗತ್ತಿಗೆ ಸಾರಿದ ಮಹನೀಯ, ಜಾತಿಯಿಂದ ವ್ಯಕ್ತಿಯನ್ನು ಗುರುತಿಸಬಾರದು ಎಂಬ ತತ್ವವನ್ನು ತಮ್ಮ ವಿಚಾರ ಹಾಗೂ ಬರಹಗಳ ಮೂಲಕ ಸಾಧಿಸಿ ತೋರಿದ ಮಹಾನ್ ದಾರ್ಶನಿಕ ಎಂದರು.

ಅಧ್ಯಕ್ಷತೆ ವಹಿಸಿದ್ದ ಗೂಳಿಹಟ್ಟಿ ಹಾಲ ಸಿದ್ದಪ್ಪ ಮಾತನಾಡಿ ಸುಜ್ಞಾನ ಸಂಗಮ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಮನಸು ಮನಸುಗಳನ್ನು ಬೆಸೆಯುವ ಸೌಹಾರ್ದ ವಾತಾವರಣವನ್ನು ನಿರ್ಮಾಣ ಮಾಡುವ ಅನುಭವ ಮಂಟಪದ ಮಾದರಿಯಲ್ಲಿ ಸರ್ವ ಜನಾಂಗದ ಭಕ್ತರು ಭಾಗವಹಿಸಿ ಸುಜ್ಞಾನವನ್ನು ಸವಿತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಶಾಂತವೀರ ಶ್ರೀಗಳು ಕೇವಲ ಬೋಧಕರಲ್ಲ ಕಷ್ಟ ಎಂದು ಬರುವ ಭಕ್ತರ ಕಷ್ಟವನ್ನು ನೀಗಿಸುವ ದೇವರಾಗಿ ಧೈರ್ಯ ತುಂಬುವ ವೀರ ಸನ್ಯಾಸಿಯಾಗಿ ನಮ್ಮ ಸಮಾಜಕ್ಕೆ ಸಿಕ್ಕಿರುವುದು ಸಮಾಜದ ಪುಣ್ಯವೇ ಸರಿ ಗುರುಗಳ ಆಜ್ಞೆಯಂತೆ ನಾವು ಕೂಡ ಜಾತ್ಯತೀತ ಮನೋಭಾವನೆಯನ್ನು ಬೆಳೆಸಿಕೊಂಡು ಸರ್ವ ಜನಾಂಗವನ್ನು ನಮ್ಮವರೆಂದು ಭಾವಿಸಿ ಬದುಕಬೇಕು ಎಂದರು.

ಕಾರ್ಯಕ್ರಮವನ್ನು ಉದ್ಯಮಿ ಕಬ್ಬಳದ ಜ್ಞಾನೇಶ್‌ ಉದ್ಗಾಟಿಸಿದರು. ಸಾಗರದ ಕನ್ನಡ ಉಪನ್ಯಾಸಕಿ ಡಾ II ಸರ್ಫ್ರಾಜ್ ಚಂದ್ರಗುತ್ತಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಾನಕಲ್ ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಹಾಂತೇಶ್ ದೊಡ್ಡಘಟ್ಟ

ಅವರನ್ನು ಸನ್ಮಾನಿಸಲಾಯಿತು

ಸಮಾರಂಭದಲ್ಲಿ ಸಂಗಮೇಶ್ವರ ಸಮುದಾಯ ಭವನ ಸಮಿತಿ , ಸಂಗಮೇಶ್ವರ ನೌಕರ ಸಂಘ , ಸಂಗಮೇಶ್ವರ ಯುವ ವೇದಿಕೆ.

ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘ ,ಶಾಂತವೀರಶ್ರೀ ಸೌಹಾರ್ದ ಪತಿನ ಸಹಕಾರ ಸಂಘ ಹೊಸದುರ್ಗ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ