ಕನ್ನಡಪ್ರಭ ವಾರ್ತೆ ಕಾಗವಾಡಕಾಯಕಯೋಗಿ ಬಸವಣ್ಣ ಮಹಾಮನವತಾವಾದಿ ಹಾಗೂ ಮನುಕುಲ ಕಂಡ ಮಹಾನ್ ಚೇತನ್, ಅವರ ತತ್ವಾದರ್ಶಗಳು ಅಧುನಿಕ ಸಮಾಜಕ್ಕೆ ಮಾರ್ಗದರ್ಶಕವಾಗಿವೆ ಎಂದು ಐನಾಪುರ, ಕೃಷ್ಣಾ-ಕಿತ್ತೂರ ಗುರುದೇವಾಶ್ರಮದ ಬಸವೇಶ್ವರ ಮಹಾಸ್ವಾಮಿಗಳು ನುಡಿದರು.
ಸಮಸಮಾಜ ನಿರ್ಮಾಣಕ್ಕೆ ಕ್ರಾಂತಿ ಮಾಡಿದ ಬಸವೇಶ್ವರರ ತತ್ವಾದರ್ಶಗಳಿಂದ ಶಾಂತಿಯುತ ಸಮಾಜ ನಿರ್ಮಾಣ ಮಾಡಬಹುದು. ಬಸವೇಶ್ವರರ ಸ್ತಬ್ಧಚಿತ್ರ, 108 ಜೋಡಿ ಅಲಂಕೃತವಾದ ಎತ್ತುಗಳು ಹಾಗೂ ಬಸವಣ್ಣನವರ ಪುತ್ಥಳಿಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ವಿವಿಧ ವಾದ್ಯವೃಂದಗಳು, ವೀರಶೈವ ಸೇವಾ ಸಮಾಜದ ಮುಖಂಡರು ಭಾಗವಹಿಸಿದ್ದರು.
ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬಿರಡಿ, ಸಮಾಜದ ಮುಖಂಡರಾದ ಪ್ರಕಾಶ ಕೋರ್ಬು, ಸುರೇಶ ಗಾಣಿಗೇರ, ಮಹೇಶ ಸೊಲ್ಲಾಪುರೆ, ತಮ್ಮಣ್ಣ ಕಮತೆ, ಸುನೀಲ ಅವಟಿ, ವಿರುಪಾಕ್ಷಿ ಡೂಗನವರ, ಪ್ರಕಾಶ ಗಾಣಿಗೇರ, ರಾವಸಾಬ್ ಚೌಗಲಾ, ಶ್ರೀಶೈಲ ಅಪರಾಜ, ದಾಧಾ ಜಂತೆಣ್ಣವರ, ವಿರುಪಾಕ್ಷಿ ಡೂಗನವರ, ಶಂಕರ ಕೋರ್ಬು, ಗುರುರಾಜ ಕಾಲತಿಪ್ಪಿ ಸೇರಿದಂತೆ ಅನೇಕರು ಇದ್ದರು. ಶಂಕರಯ್ಯ ಮಳಿಮಠ, ಪೂಜೆ ನೆರವೇರಸಿ ಮೆರವಣಿಗೆಗೆ ಚಾಲನೆ ನೀಡಿದರು.