ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಬಸವನಗುಡಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ , ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಶಿವನನ್ನು ಒಲಿಸಿಕೊಳ್ಳಲು ಆಡಂಬರ,ಡಾಂಭಿಕತೆ ಅವಶ್ಯಕತೆ ಇಲ್ಲ. ಭಕ್ತಿ ಸರಳವಾಗಿ ಮತ್ತು ಪ್ರಾಮಾಣಿಕವಾಗಿದ್ದರೆ ಶಿವ ಎಂತವರಿಗೂ ಒಲಿಯುತ್ತಾನೆ ಎಂಬ ಸಂದೇಶವನ್ನು ನೀಡಿದರು. ಜಾತಿ ತಾರತಮ್ಯಗಳನ್ನು ನಿರಾಕರಿಸಿ ಸಮಾಜದ ವಿವಿಧ ಸ್ತರದ ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸ ಮಾಡಿದರು. ಅವರ ವಚನಗಳ ಆಶಯಗಳನ್ನು ಅರ್ಥ ಮಾಡಿಕೊಂಡು ಸಮಾಜದ ಬದಲಾವಣೆಗೆ ಶ್ರಮಿಸಬೇಕು ಎಂದು ಪ್ರತಿಯೊಬ್ಬರೂ ಶ್ರಮಿಸಿದರು ಎಂದರು.
ಕಾಯಕವೇ ಕೈಲಾಸ:ಬಸವಣ್ಣನವರು ಜಗತ್ತಿನ ಮೊದಲ ಸಂಸತ್ತು ಎಂದು ಕರೆಸಿಕೊಳ್ಳುವ ಅನುಭವ ಮಂಟಪವನ್ನು ಸ್ಥಾಪಿಸಿ ಮಹಿಳೆ, ಪುರುಷರು, ಕೆಳ ವರ್ಗದವರು ಎನ್ನದೆ ಎಲ್ಲ ವರ್ಗದವರಿಗೂ ಅವಕಾಶ ನೀಡಿದ್ದ ಅವರು ಆ ಕಾಲಕ್ಕೆ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಗ್ರಗಣ್ಯರು. ಇವರ ಒಂದೊಂದು ವಚನವೂ ಎಲ್ಲರ ಬದುಕಿಗೂ ಆದರ್ಶ, ಸ್ಫೂರ್ತಿಯಾಗಿದೆ. 12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣ. ಇವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ. ಇದು ಜೀವನ ಪಾಠವೂ ಹೌದು. ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ. "ಕಾಯಕವೇ ಕೈಲಾಸ "ಎಂದು ಹೇಳಿ ನುಡಿದಂತೆ ನಡೆದವರು. ತಮ್ಮ ವಚನಗಳ ಮೂಲಕವೇ ಜ್ಞಾನದ ಬೆಳಕು ಚೆಲ್ಲಿದವರು.
ಉಪನ್ಯಾಸಕ ಎನ್.ಚಂದ್ರಶೇಖರ್ ಮಾತನಾಡಿ, 12ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯನ್ನು ತೊಲಗಿಸಲು ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾದವರು ಬಸವಣ್ಣನವರು ಆದರೂ ಕೂಡ 21ನೇ ಶತಮಾನದ ಪ್ರಸ್ತುತದಲ್ಲೂ ಜಾತಿ ವ್ಯವಸ್ಥೆಯ ಜಾಡ್ಯ ಹೋಗದಿರುವುದು ಕಳವಳಕಾರಿ ವಿಚಾರವಾಗಿದೆ. ಬಸವಣ್ಣನವರ ವಚನಗಳು ಜಾತಿ ವ್ಯವಸ್ಥೆಯ ಆಚರಣೆಯನ್ನು ನೇರವಾಗಿ ದಿಕ್ಕರಿಸುತ್ತವೆ.
ಲಿಂಗಾಯತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಚಿಕ್ಕಬಳ್ಳಾಪುರದ ಬಸವನಗುಡಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ , ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಪುತ್ಥಳಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪುಷ್ಪನಮನ ಸಲ್ಲಿಸಿದರ