ನರಗುಂದ: 12ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣವರು ಸಮಾಜದಲ್ಲಿರುವ ಮೇಲು ಕೀಳು ತೆಗೆದು ಹಾಕಿ ಎಲ್ಲರೂ ಸಮಾನರೆಂದು ಜಗತ್ತಿಗೆ ಸಾರಿದ್ದಾರೆ ಎಂದು ನಿವೃತ್ತ ಪ್ರೊ.ಎಂ.ಎಸ್. ಯಾವಗಲ್ ಹೇಳಿದರು.
ಜಗಜ್ಯೋತಿ ಬಸವಣ್ಣನವರು ಶ್ರಮ ಸಂಸ್ಕೃತಿ ಹಾಗೂ ಸಮ ಸಂಸ್ಕೃತಿಯ ಪ್ರತಿಪಾದಕರಾಗಿದ್ದರು. ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕ ಮಾತ್ರವಲ್ಲದೆ, ಜಾಗತಿಕ ಸಾಂಸ್ಕೃತಿಕ ನಾಯಕ ಎಂದು ಗುರುತಿಸಿ ಗೌರವಿಸುವ ಕಾಲ ದೂರವಿಲ್ಲ ಎಂದರು.
ಕನ್ನಡ ಪ್ರಾಧ್ಯಾಪಕ ಡಾ.ಎಸ್.ವಿ. ಮನಗುಂಡಿವರು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಡಾ. ಬಿ.ಎಂ. ಜಾಬಣ್ಣವರ, ಪ್ರೊ. ಸಿ.ಎಸ್. ಸಾಲುಟಗಿಮಠ, ಉಪನ್ಯಾಸಕ ಎಂ.ಪಿ. ಕುಲಕರ್ಣಿ, ಪ್ರಾಧ್ಯಾ ಪಕ ಬಿ.ಬಿ. ಕೊಣ್ಣೂರ, ಸಿದ್ದಲಿಂಗಪ್ಪ, ರಾಮು, ದ್ಯಾಮಣ್ಣ ಗೊಬ್ಬರಗುಂಪಿ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಜಿ. ಮಣ್ಣೂರಮಠ, ಕಾರ್ಯದರ್ಶಿ ಮಂಜುನಾಥ ಘಾಳಿ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಇದ್ದರು.
ಎಸ್. ಗಂಗಾಧರಯ್ಯ ಸ್ವಾಗತಿಸಿದರು. ಮಂಜುನಾಥ ನಿಂಗನಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಡಾ.ನಾಗಪ್ಪ ಸುರಳಿಕೇರಿ ವಂದಿಸಿದರು.