ಹಾಸನದಲ್ಲಿ ಅದ್ಧೂರಿಯಾಗಿ ಜರುಗಿದ ಬಸವಣ್ಣನ ಮೆರವಣಿಗೆ

KannadaprabhaNewsNetwork |  
Published : Jun 09, 2024, 01:33 AM IST
8ಎಚ್ಎಸ್ಎನ್6 : ಹಾಸನ ನಗರದ ಅರಳೇಪೇಟೆಯಲ್ಲಿರುವ ಬಸವೇಶ್ವರ ದೇವಾಲಯದ ಆವರಣದಿಂದ ಹೊರಟ ಮೆರವಣಿಗೆ. | Kannada Prabha

ಸಾರಾಂಶ

ಹಾಸನದ ಅರಳೇಪೇಟೆ ರಸ್ತೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಆಚರಣಾ ಸಮಿತಿ ವತಿಯಿಂದ ಶನಿವಾರ ಬೆಳಿಗ್ಗೆ ನಡೆದ ವಿವಿಧ ಸಾಂಸ್ಕೃತಿಕ ಕಲಾತಂಡದೊಡನೆ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನೋಡುಗರ ಗಮನಸೆಳೆಯಿತು.

ಬಸವೇಶ್ವರ ಜಯಂತ್ಯುತ್ಸವ । ಶ್ರೀ ಜಗಜ್ಯೋತಿ ಬಸವೇಶ್ವರ ಆಚರಣಾ ಸಮಿತಿ ಆಯೋಜನೆ । ವಿವಿಧ ಸಾಂಸ್ಕೃತಿಕ ಕಲಾತಂಡಗಳ ಮೆರುಗು

ಕನ್ನಡಪ್ರಭ ವಾರ್ತೆ ಹಾಸನ

ಶ್ರೀ ಬಸವೇಶ್ವರ ವಿಶೇಷ ಜಯಂತ್ಯುತ್ಸವದ ಅಂಗವಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಆಚರಣಾ ಸಮಿತಿ ವತಿಯಿಂದ ಶನಿವಾರ ಬೆಳಿಗ್ಗೆ ನಡೆದ ವಿವಿಧ ಸಾಂಸ್ಕೃತಿಕ ಕಲಾತಂಡದೊಡನೆ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನೋಡುಗರ ಗಮನಸೆಳೆಯಿತು.

ಮೊದಲು ನಗರದ ಅರಳೇಪೇಟೆ ರಸ್ತೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ಸೀಗೆನಾಡು ಮಳೆಮಲ್ಲೇಶ್ವರ ಬೆಟ್ಟದ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಯಸಳೂರು ತೆಂಕಲಗೂಡು ಬೃಹನ್ ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಬೆಳ್ಳಿ ರಥದಲ್ಲಿ ಇಡಲಾಗಿದ್ದ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು ಪುಷ್ಪಾರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಮೆರವಣಿಗೆಯಲ್ಲಿ ಎತ್ತುಗಳು, ನಾದಸ್ವರ, ನಂದಿದ್ವಜ, ಚಂಡೆವಾಧ್ಯ, ವೀರಗಾಸೆ, ಗೊಂಬೆ ಬಳಗ, ಡಿಜೆ, ನಾಸಿಕ್ ಡೋಲ್, ಕೀಲುಕುದುರೆ, ಶ್ರೀ ಕೃಷ್ಣ, ರಕ್ಮಿಣಿ, ರಾಧೆಯರ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರುಗು ನೀಡಿತು. ಮೆರವಣಿಗೆ ನಂತರ ಶ್ರೀ ಬಸವೇರ್ಶವರ ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನದಾಸೋಹ ನೆರವೇರಿಸಿದರು.

ಅಖಿಲ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಬಿ.ಆರ್. ಗುರುದೇವ್ ಮಾತನಾಡಿ, ೧೨ನೇ ಶತಮಾನದ ಸಾಮಾಜಿಕ ಹರಿಕಾರರು ಆದ ವಿಶ್ವಗುರು ಬಸವಣ್ಣನವರ ಹಾಕಿಕೊಟ್ಟಂತಹ ಆಚಾರ ವಿಚಾರಗಳಲ್ಲಿ ಭೇದಭಾವ ಮಾಡದಂತೆ ಶ್ರಮಿಸಿದಂತಹ ಬಸವಣ್ಣನವರ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ವಿವಿಧ ಮಠದ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಮೆರವಣಿಗೆ ಅದ್ಧೂರಿಯಾಗಿ ಜರುಗಿದೆ. ಮೆರವಣಿಗೆಯಲ್ಲಿ ಪ್ರಮುಖವಾಗಿ ಶ್ರೀ ಬಸವೇಶ್ವರರ ಭಾವಚಿತ್ರ ಹಾಗೂ ಶಿವಶರಣರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಸಾಗಿದೆ ಎಂದು ಹೇಳಿದರು.

ವೀರಶೈವ ಲಿಂಗಾಯಿತ ಸಂಘದ ನಿರ್ದೇಶಕ ಶೋಭನ್ ಬಾಬು ಮಾತನಾಡಿ, ಬಸವ ಜಯಂತಿ ಪ್ರಯುಕ್ತ ವಿಶೇಷವಾಗಿ ಜಯಂತ್ಯುತ್ಸವ ಆಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯಿತ ಸಮಾಜದವರು ಸೇರಿದಂತೆ ಜಾತಿ ಭೇದವಿಲ್ಲದೇ ಎಲ್ಲರೂ ಭಾಗವಹಿಸಿದ್ದಾರೆ. ಈ ಅದ್ಧೂರಿ ಕಾರ್ಯಕ್ರಮವು ಜಾತ್ರೆಯ ರೀತಿ ನಡೆಯುತ್ತಿದೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸಂಗಂ, ಹೇಮೇಶ್, ಸಂಘದ ಉಪಾಧ್ಯಕ್ಷ ಕಿರಣ್ ಕುಮಾರ್, ಮಾಜಿ ನಿರ್ದೇಶಕ ಲೋಕೇಶ್, ಮದನ್, ಮುಖಂಡರಾದ ಹೇಮಂತ್, ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಮಯೂರಿ, ರೋಹಿತ್, ವಸಂತಕುಮಾರ್, ಎಚ್.ಎನ್. ನಾಗೇಶ್, ಯು.ಎಸ್.ಬಸವರಾಜು, ಬಿ.ಆರ್. ಉದಯಕುಮಾರ್, ವಕೀಲೆ ಗಿರಿಜಾಂಬಿಕಾ, ಕೀರ್ತಿಕುಮಾರ್, ದೊಡ್ಡೇಗೌಡ, ಜಿ.ಒ. ಮಹಂತಪ್ಪ, ಮಹಂತೇಶ್ ಸೇ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!