ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಅಮರೇಶ್ವರ ಮಠದ ಆವರಣದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಬಸಯ್ಯಸ್ವಾಮಿಗಳ ಅಂತಿಮ ವಿಧಿವಿಧಾನ ನೆರವೇರಿದವು.ಬಸಯ್ಯ ಸ್ವಾಮಿಗಳು ಅಮರೇಶ್ವರ ಮಠದಲ್ಲಿ 16ನೇ ವಯಸ್ಸಿನಲ್ಲಿ ಮಠಕ್ಕೆ ಸೇವೆಗೆ ಆಗಮಿಸಿ ಶ್ರೀಮಠದ ಅಮರೇಶ್ವರ ಶ್ರೀಗಳವರ ಶಿಷ್ಯರಾಗಿ ಸೇವೆ ಮಾಡುತ್ತಿದ್ದರು. ಶ್ರೀಗಳಿಂದ ಜ್ಯೋತಿಷ್ಯ ಹೇಳುವದು ಸೇರಿದಂತೆ ಇತರ ವಿದ್ಯೆಗಳನ್ನು ಕಲಿತಿದ್ದರು. ಅಮರೇಶ್ವರ ಶ್ರೀಗಳು ಲಿಂಗೈಕ್ಯರಾದ ನಂತರ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶ್ರೇಖರ ಶ್ರೀಗಳು ಅಮರೇಶ್ವರ ಮಠಕ್ಕೆ ಪೀಠಾಧಿಪತಿಗಳಾದರು. ಅವರು ಹೆಚ್ಚಿನ ಶಿಕ್ಷಣದ ಸಲುವಾಗಿ ಕಾಶಿಗೆ ತೆರಳಬೇಕಾಗಿದ್ದರಿಂದ ಸುಮಾರು 25 ವರ್ಷಗಳ ಕಾಲ ಬಸಯ್ಯ ಸ್ವಾಮಿಗಳೇ ಶ್ರೀಮಠದ ಜವಾಬ್ದಾರಿ ಹೊತ್ತು ಮುನ್ನಡೆಸಿದರು.
ಸಂತಾಪ : ಬಸಯ್ಯಸ್ವಾಮಿಗಳ ಲಿಂಗೈಕ್ಯರಾಗಿದ್ದಕ್ಕೆ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು, ಅಮರೇಶ್ವರಮಠದ ಡಾ.ನೀಲಕಂಠ ಶಿವಾಚಾರ್ಯರು, ಕಮತಗಿ ಕೋಟೆಕಲ್ ಹೊಳೆಹುಚ್ಚೇಶ್ವರ ಶ್ರೀಗಳು, ಮುರುಘಾಮಠದ ಕಾಶಿನಾಥ ಶ್ರೀಗಳು, ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಶ್ರೀಗಳು, ಮರಡಿಮಠದ ಕಾಡಸಿದ್ದೇಶ್ವರ ಶ್ರೀಗಳು, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಎಸ್.ಜಿ.ನಂಜಯ್ಯನಮಠ, ಜಿ.ಎಸ್.ದೇಸಾಯಿ, ಮುಖಂಡರಾದ ಹೊಳಬಸು ಶೆಟ್ಟರ, ಹನಮಂತ ಮಾವಿನಮರದ, ಸಂಜಯ ಬರಗುಂಡಿ, ರಾಜು ದೇಸಾಯಿ, ಸಂಪತ್ ಕುಮಾರ ರಾಠಿ, ಸಂಜೀವ ಕಾರಕೂನ ಸೇರಿದಂತೆ ಮುಖಂಡರು ಅಮರೇಶ್ವರ ಮಠ ಹಾಗೂ ಬಸಯ್ಯಸ್ವಾಮಿಗಳ ಭಕ್ತರು ಸಂತಾಪ ಸೂಚಿಸಿದ್ದಾರೆ.