- ವಿಂಡೋಸ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆ 20ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಪದ್ಮಶ್ರೀ ಗುಂಜಿಕರ್ ಸಲಹೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ರೋಟರಿ ಕ್ಲಬ್ ನೂತನ ಸಭಾಂಗಣದಲ್ಲಿ ಶುಕ್ರವಾರ ವಿಂಡೋಸ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆಯ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ, ಸೈಬರ್ ಅಪರಾಧ ತಡೆಗಟ್ಟುವ ಬಗ್ಗೆ ಅವರು ಮಾತನಾಡಿದರು.
ಸೋಷಿಯಲ್ ಮೀಡಿಯಾಗಳಿಂದ ಎಷ್ಟು ಅನುಕೂಲ ಇದೆಯೋ, ಅದಕ್ಕೂ ಹೆಚ್ಚು ಅಪಾಯವೂ ಇದೆ. ವೈಯಕ್ತಿಕ ಮಾಹಿತಿ, ಫೋಟೋ, ವೀಡಿಯೋಗಳನ್ನು ಎಲ್ಲಿ ಬೇಕಾದಲ್ಲಿ, ಯಾರೊಂದಿಗಾದರೂ ಹಂಚಿಕೊಳ್ಳಬಾರದು. ವೈಯಕ್ತಿಕ ಮಾಹಿತಿ ರಕ್ಷಣೆಗೆ ಕಡೆ ಗಮನವಿರಬೇಕು. ನಿಮ್ಮ ಆನ್ ಲೈನ್ ಬ್ಯಾಂಕ್, ಎಟಿಎಂ ಕಾರ್ಡ್, ಮೊಬೈಲ್, ಫೇಸ್ ಬುಕ್ ಹೀಗೆ ಸೋಷಿಯಲ್ ಮೀಡಿಯಾಗಳಿಗೆ ಕಠಿಣವಾದ, ಸುಲಭವಾಗಿ ಯಾರೂ ಬೇಧಿಸಲಾಗದ ಪಾಸ್ ವರ್ಡ್ ಕೊಡುವುದು ಸೂಕ್ತ. ಯಾರೇ ಬ್ಯಾಂಕ್, ಕಚೇರಿ, ಪರಿಚಯಸ್ಥರೆಂದು ಕರೆ ಮಾಡಿ, ನಿಮ್ಮ ಒಟಿಪಿ ನಂಬರ್, ಬ್ಯಾಂಕ್ ಅಕೌಂಟ್ ಮಾಹಿತಿ ಕೇಳಿದರೆ ಹಂಚಿಕೊಳ್ಳಬಾರದು ಬೇಕು ಎಚ್ಚರಿಸಿದರು.ಸೈಬರ್ ಅಪರಾಧ ಎಂಬುದು ಇಂದು ಇಡೀ ವಿಶ್ವವನ್ನೇ ಕಾಡುತ್ತಿರುವ ದೊಡ್ಡ ಸವಾಲು, ಸಮಸ್ಯೆಯಾಗಿದೆ. ಶಾಲಾ-ಕಾಲೇಜುಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಸೈಬರ್ ಅಪಾಯಗಳು, ಸೈಬರ್ ವಂಚಕರು, ಸೈಬರ್ ಕಳ್ಳತನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಇಲಾಖೆ ಮಾಡುತ್ತಿದೆ. ವಿದ್ಯಾರ್ಥಿ, ಯುವ ಜನರು ಸಹ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು, ಇತರರಿಗೂ ಜಾಗೃತಿ ಮೂಡಿಸುವ ಮೂಲಕ ಅಮಾಯಕರು ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಸೋಷಿಯಲ್ ಮೀಡಿಯಾಗಳ ಅತಿ ಬಳಕೆಗಿಂತ ಪುಸ್ತಕ ಓದುವ, ಶಿಕ್ಷಣದ ಕಡೆಗೆ ಗಮನ ಕೇಂದ್ರೀಕರಿಸಿ, ಜೀವನದ ಗುರಿ ಸಾಧಿಸುವತ್ತ ನಿಮ್ಮ ದೃಷ್ಟಿ ಇರಲಿ. ಅತಿಯಾದ ಮೊಬೈಲ್ ಬಳಕೆ ಅಪಾಯಕಾರಿ. ಅತಿಯಾದರೆ, ಅಮೃತವೂ ವಿಷವೆಂಬ ಅರಿವು ಇರಲಿ. ನಿಮ್ಮ ತಂದೆ, ತಾಯಿ ಸಾಕಷ್ಟು ನಿರೀಕ್ಷೆಯೊಂದಿಗೆ ನಿಮ್ಮನ್ನು ಓದಲು ಕಳಿಸಿರುತ್ತಾರೆ. ನಿಮ್ಮ ಮೇಲೆ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಅಂತಹ ನಂಬಿಕೆ, ವಿಶ್ವಾಸ, ಕನಸಿಗೆ ಚ್ಯುತಿ ಯಾಗದಿರಲಿ ಎಂದು ಸಲಹೆ ನೀಡಿದರು.
- - -
- ಪದ್ಮಶ್ರೀ ಗುಂಜಿಕರ್, ಉಪ ಅಧೀಕ್ಷಕಿ
ದಾವಣಗೆರೆಯಲ್ಲಿ ಶುಕ್ರವಾರ ವಿಂಡೋಸ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆ 20ನೇ ವರ್ಷದ ವಾರ್ಷಿಕೋತ್ಸವ, ಸೈಬರ್ ಅಪರಾಧ ತಡೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಸಿಇಎನ್ ಅಪರಧ ತಡೆ ಪೊಲೀಸ್ ಠಾಣೆ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಉದ್ಘಾಟಿಸಿದರು. ನಾಗರಾಜ ಬಡದಾಳ್, ಈ.ಬಸವರಾಜ ಇದ್ದರು.