- ವಲಯದ ಮೇಲ್ವಿಚಾರಕ ವಸಂತ್ ಹೇಳಿಕೆ
ಕನ್ನಡಪ್ರಭ ವಾರ್ತೆ ತರೀಕೆರೆಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಪ್ರದೇಶಗಳ ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆ ಸುಲಭವಾಗಿ ಒದಗಿಸುವ ಉದ್ದೇಶದಿಂದ ಕಾಮನ್ ಸರ್ವೀಸ್ ಸೆಂಟರ್ ಡಿಜಿಪೇ ಕಾರ್ಯಕ್ರಮವನ್ನು ರಾಜ್ಯದ ವಿವಿಧೆಡೆ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ವಲಯದ ಮೇಲ್ವಿಚಾರಕ ವಸಂತ್ ಹೇಳಿದ್ದಾರೆ.
ಸ ಪದ ಬಳ್ಳಾವರ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾನ್ಯ ಸೇವಾ ಕೇಂದ್ರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಜನರು ಬ್ಯಾಂಕ್‌ಗೆ ತೆರಳುವ ಅವಶ್ಯಕತೆ ಕಡಿಮೆ ಮಾಡಿ, ತಮ್ಮ ಸಮೀಪದಲ್ಲೆ ಡಿಜಿಟಲ್ ಹಣಕಾಸು ಸೇವೆ ಪಡೆಯುವಂತೆ ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಇದರ ಮೂಲಕ ಹಣ ಪಡೆಯುವುದು, ಹಣಕಾಸು ವ್ಯವಹಾರ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಇದೇ ಮಾದರಿಯಲ್ಲಿ ವಲಯ ಹಾಗೂ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲೂ ಡಿಜಿಪೇ ಸೇವೆ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.ಸದಸ್ಯರು ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆ ಬಳಸಿ ಹಣ ಪಡೆಯಲು ಗ್ರಾಮೀಣ ಜನರಿಗೆ ಇದು ಅನುಕೂಲಕರ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಗ್ರಾಮೀಣ ಭಾಗದ ಜನರ ಆರ್ಥಿಕ ವ್ಯವಹಾರ ಮತ್ತಷ್ಟು ಸರಳ ಗೊಳಿಸುವಲ್ಲಿ ಸಹಕಾರಿ ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷರಾದ ಕಾಮಾಕ್ಷಿ, ಪ್ರೇಮಾ, ಮೀನಾ, ಕೇರೆನಾ, ಪ್ರಿಯಾಂಕ, ದೇವಿ, ಜ್ಯೋತಿ, ಶೋಭಾ, ವಿಎಲ್ಇ ಪ್ರಿಯಾಂಕ, ಐಶ್ವರ್ಯ ಮತ್ತಿತರರು ಉಪಸ್ಥಿತರಿದ್ದರು.
-
3ಕೆಟಿಆರ್.ಕೆ.15ಃತರೀಕೆರೆ ಸಮೀಪದ ಬಳ್ಳಾವರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಾಮನ್ ಸರ್ವೀಸ್ ಸೆಂಟರ್ ಡಿಜಿಪಿ ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರಾದ ವಸಂತ್ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷರಾದ ಕಾಮಾಕ್ಷಿ, ಪ್ರೇಮಾ, ಮೀನಾ, ಕೇರೆನಾ, ಪ್ರಿಯಾಂಕ, ದೇವಿ, ಜ್ಯೋತಿ, ಶೋಭಾ, ವಿಎಲ್ಇ ಪ್ರಿಯಾಂಕ, ಐಶ್ವರ್ಯ ಮತ್ತಿತರರು ಭಾಗವಹಿಸಿದ್ದರು.