ಮುಂಡಗೋಡ: ರೋಗ ಬರುವ ಮುಂಚೆ ಜಾಗೃತಿ ವಹಿಸಿ ಮನೆಯ ಹಿತ್ತಲಲ್ಲಿಯೇ ಸಿಗುವ ಮನೆ ಮದ್ದುಗಳನ್ನು ಉಪಯೋಗಿಸಿ ರೋಗ ಶಮನ ಮಾಡಿಕೊಳ್ಳಬೇಕು ಎಂದು ಮುಂಡಗೋಡ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಯೋಗೇಶ ಮಡಗಾಂವಕರ ಹೇಳಿದರು.
ಡಾ. ಮಲ್ಲಿಕಾರ್ಜುನ ಕಮತರ ಮಾತನಾಡಿ, ಆಯುರ್ವೇದ ಪುರಾತನವಾದ ಯಾವುದೇ ಅಡ್ಡ ಪರಿಣಾಮವಿಲ್ಲದ ಒಂದು ವೈದ್ಯ ಪದ್ಧತಿ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಕ್ಷೇತ್ರಾಧಿಕಾರಿ ವಿಜಯ ನಾಯ್ಕ, ಈರಯ್ಯ ಚಿಕ್ಕಮಠ, ಸೋಮಣ್ಣ ಕಂಬಳಿ, ನಿಂಗಪ್ಪ ಕಬಾಡಿ, ಕಲ್ಲನಗೌಡ, ಶಬ್ಬರ್ ಖಾನ್ ಕಲಘಟಗಿ, ಗಣೇಶ ಮೊರೆ, ಸೌಮ್ಯ ಥಾಮಸ್ ಮುಂತಾದವರು ಉಪಸ್ಥಿತರಿದ್ದರು. ವಿಜಯಾ ನಾಯ್ಕ ಸ್ವಾಗತಿಸಿ ನಿರೂಪಿಸಿದರು. ಈರಯ್ಯ ಚಿಕ್ಕಮಠ ವಂದಿಸಿದರು.