ಬರಗಾಲದಿಂದ ಕೂಲಿ ಇಲ್ಲದೇ ತೊಂದರೆಗೆ ಒಳಗಾಗಿದ್ದಾರೆ. ಸರ್ಕಾರದಿಂದ ಬರಗಾಲ ಘೋಷಣೆಯಾಗಿದ್ದು, ಕೂಲಿ ಕೆಲಸಗಳು ಸಿಗದೇ ಪರದಾಡುತ್ತಿದ್ದಾರೆ
ಯಲ್ಲಾಪುರ: ಬುಡಕಟ್ಟು ಸಿದ್ದಿ ಸಮುದಾಯದವರಿಗೆ ೨೦೨೬-೨೦೨೭ನೇ ಸಾಲಿನ ಪೌಷ್ಟಿಕಾಹಾರ ವಿತರಣೆಯಲ್ಲಿ ವಿಳಂಬವಾಗಿದ್ದು, ತಕ್ಷಣ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘಟನೆಯಿಂದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರಿಗೆ ಮನವಿ ಸಲ್ಲಿಸಿದರು.
೨೬-೨೭ನೇ ಸಾಲಿನ ಪೌಷ್ಟಿಕಾಹಾರ ವಿತರಣೆ ಈ ವರೆಗೂ ಆಗಿಲ್ಲ. ಇದರಿಂದ ಸಮುದಾಯದ ಬಡ ಕುಟುಂಬದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬರಗಾಲದಿಂದ ಕೂಲಿ ಇಲ್ಲದೇ ತೊಂದರೆಗೆ ಒಳಗಾಗಿದ್ದಾರೆ. ಸರ್ಕಾರದಿಂದ ಬರಗಾಲ ಘೋಷಣೆಯಾಗಿದ್ದು, ಕೂಲಿ ಕೆಲಸಗಳು ಸಿಗದೇ ಪರದಾಡುತ್ತಿದ್ದಾರೆ. ಕಾರಣ ಶೀಘ್ರದಲ್ಲಿ ಪೌಷ್ಟಿಕಾಹಾರ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಎರಡು ವಾರದೊಳಗೆ ಪೌಷ್ಟಿಕಾಹಾರ ವಿತರಣೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಸಂಘದ ರಾಜ್ಯಾಧ್ಯಕ್ಷ ಬೆನಿತ್ ಸಿದ್ದಿ, ಗೌರವಾಧ್ಯಕ್ಷ ಜೋನ್ ಕೊಸ್ತಾ ಬಿಳ್ಕಿಕರ್, ಪ್ರಮುಖರಾದ ಅಗಸ್ಟಿನ್ ಜೂಜೆ ಸಿದ್ದಿ, ಫಾತಿಮಾ ಸಿದ್ದಿ, ಶಂಕರ ನಾರಾಯಣ ಸಿದ್ದಿ, ಮೇರಿ ದೊಡ್ಮನಿ, ಬಸ್ಯಾಂವ್ ಸಿದ್ದಿ, ಖಾದರಸಾಬ್ ತತ್ವಣಗಿ, ಜಾಪರಸಾಬ್ ಚಪರೇಕರ್, ಹುಸೇನಾಬಿ ದೇವಕಾರಿ, ಲಕ್ಣ್ಮಣ ಸಿದ್ದಿ, ಗೋಪಾಲ ಸಿದ್ದಿ ಭಾಗವಹಿಸಿದ್ದರು.