ಆಯುರ್ವೇದ ಪುರಾತನವಾದ ಯಾವುದೇ ಅಡ್ಡ ಪರಿಣಾಮವಿಲ್ಲದ ಒಂದು ವೈದ್ಯ ಪದ್ಧತಿ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು

ಮುಂಡಗೋಡ: ರೋಗ ಬರುವ ಮುಂಚೆ ಜಾಗೃತಿ ವಹಿಸಿ ಮನೆಯ ಹಿತ್ತಲಲ್ಲಿಯೇ ಸಿಗುವ ಮನೆ ಮದ್ದುಗಳನ್ನು ಉಪಯೋಗಿಸಿ ರೋಗ ಶಮನ ಮಾಡಿಕೊಳ್ಳಬೇಕು ಎಂದು ಮುಂಡಗೋಡ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಯೋಗೇಶ ಮಡಗಾಂವಕರ ಹೇಳಿದರು.

ಸರ್ಕಾರಿ ಆಯುರ್ವೇದ ಆಸ್ಪತ್ರೆ ಮತ್ತು ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ಹಾ ಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ, ಆಶ್ರಯದಲ್ಲಿ ತಾಲೂಕಿನ ನಂದಿಕಟ್ಟಾ ಗ್ರಾಮದ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾದ ವಯೋಮಿತ್ರ ಕಾರ್ಯಕ್ರಮದಡಿ ಉಚಿತ ಕೀಲು ಮೂಳೆ ವ್ಯಾಧಿಗಳ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಡಾ. ಮಲ್ಲಿಕಾರ್ಜುನ ಕಮತರ ಮಾತನಾಡಿ, ಆಯುರ್ವೇದ ಪುರಾತನವಾದ ಯಾವುದೇ ಅಡ್ಡ ಪರಿಣಾಮವಿಲ್ಲದ ಒಂದು ವೈದ್ಯ ಪದ್ಧತಿ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಕ್ಷೇತ್ರಾಧಿಕಾರಿ ವಿಜಯ ನಾಯ್ಕ, ಈರಯ್ಯ ಚಿಕ್ಕಮಠ, ಸೋಮಣ್ಣ ಕಂಬಳಿ, ನಿಂಗಪ್ಪ ಕಬಾಡಿ, ಕಲ್ಲನಗೌಡ, ಶಬ್ಬರ್ ಖಾನ್ ಕಲಘಟಗಿ, ಗಣೇಶ ಮೊರೆ, ಸೌಮ್ಯ ಥಾಮಸ್ ಮುಂತಾದವರು ಉಪಸ್ಥಿತರಿದ್ದರು. ವಿಜಯಾ ನಾಯ್ಕ ಸ್ವಾಗತಿಸಿ ನಿರೂಪಿಸಿದರು. ಈರಯ್ಯ ಚಿಕ್ಕಮಠ ವಂದಿಸಿದರು.