ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕಳೆದ ಜುಲೈ 29ರ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ದಾಳಿ ಸಂದರ್ಭದಲ್ಲಿ ಓಂಕಾರಪ್ಪ ಕರಡಿಯೊಂದಿಗೆ ಸಾಕಷ್ಟು ಹೋರಾಟ ನಡೆಸಿದ್ದರು. ಆಗ ಅಲ್ಲಿಗೆ ಬಂದ ಕೆಲ ಗ್ರಾಮಸ್ಥರ ಕರಡಿಯನ್ನು ಓಡಿಸಿದ್ದರು. ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಓಂಕಾರಪ್ಪನ ಚಿಕಿತ್ಸೆ ವೆಚ್ಚವನ್ನು ಇಲಾಖೆ ಬರಿಸುವುದಾಗಿ ಹಿರಿಯೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ತಿಳಿಸಿದ್ದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಗಾಯಾಳಿಗೆ 5 ಲಕ್ಷ ಪರಿಹಾರ ನೀಡುವ ವ್ಯವಸ್ಥೆ ಇದ್ದು, ಮೃತಪಟ್ಟರೆ 15 ಲಕ್ಷ ಹಣವನ್ನು ಅವರ ಕುಟುಂಬಕ್ಕೆ ನೀಡಲಾಗುವುದು. ಅಲ್ಲದೇ ಸುಮಾರು ನಾಲ್ಕು ವರ್ಷಗಳ ಕಾಲ ಮಾಹೆಯಾನ ₹4000 ಅವರ ವಾರಸುದಾರರಿಗೆ ನೀಡಲಾಗುವುದು. ಈ ಘಟನೆ ನಂತರ ಆ ಭಾಗದಲ್ಲಿ ಮತ್ತೆ ಎಲ್ಲೂ ಕರಡಿ ಕಾಣಿಸಿಕೊಂಡಿಲ್ಲವೆಂದು ತಿಳಿಸಿದ್ದಾರೆ. ಮೃತ ಓಂಕಾರಪ್ಪನ ಕುಟುಂಬಕ್ಕೆ ಶೀಘ್ರದಲ್ಲೇ ಸರ್ಕಾರ ಪರಿಹಾರ ಹಣ ₹15 ಲಕ್ಷ ನೀಡಲಾಗುವುದು ಎಂದರು.ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಟಿ. ರಾಜಣ್ಣ, ವಲಯ ಅರಣ್ಯಾಧಿಕಾರಿ ಎಸ್.ವಿ.ಮಂಜುನಾಥ, ರಾಜೇಶ್, ವಿ.ವಸಂತಕುಮಾರ್ ಭೇಟಿ ನೀಡಿದ್ದರು.