ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕನ್ನಡ ಹಬ್ಬ-2026 ಕಾರ್ಯಕ್ರಮ
ಕನ್ನಡ ಭಾಷಾ ಕಲಿಕೆಯಿಂದ ಭವಿಷ್ಯವಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಜ್ಞಾನ ಹಾಗೂ ಕೌಶಲ್ಯದೆಡೆಗಿನ ನಮ್ಮ ಉದಾಸೀನತೆಯೇ ನಿರುದ್ಯೋಗ ಸಮಸ್ಯೆಗೆ ಕಾರಣ. ಕನ್ನಡ ಭಾಷೆ ಕುರಿತು ಸರಿಯಾದ ಅರಿವು ಹಾಗೂ ಅದರ ಕೌಶಲ್ಯಯುತ ಬಳಕೆಯಿಂದ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಬೇಕು ಎಂದು ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣಕುಮಾರ್ ಹೇಳಿದ್ದಾರೆ.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡರಾಜ್ಯೋತ್ಸವದ ಪ್ರಯುಕ್ತ ನಡೆದ ಕನ್ನಡ ಹಬ್ಬ-2026 ಉದ್ಘಾಟಿಸಿ ಕನ್ನಡದಲ್ಲಿ ಉದ್ಯೋಗಾವಕಾಶಗಳು ಕುರಿತು ಮಾತನಾಡಿದರು. ನಮ್ಮ ತಾಯಿ ನುಡಿಯಾದ ಕನ್ನಡದ ಬಗೆಗೆ ಇಂದಿನ ಯುವಪೀಳಿಗೆ ನಿರ್ಲಕ್ಷ್ಯತೋರುತ್ತಿರುವುದು ನಿರುದ್ಯೋಗ ಸಮಸ್ಯೆಗೆ ಕಾರಣವಾಗಿದೆ. ಯಾವುದೇ ಭಾಷೆ ಖಚಿತ ಕಲಿಕೆಯಿಂದ ಹಾಗೂ ಅದರ ಸರಿಯಾದ ಕೌಶಲ್ಯಯುತ ಬಳಕೆಯಿಂದ ಆ ಭಾಷೆ ಹಾಗೂ ಆ ಭಾಷಿಕರ ಉದ್ಧಾರ ವೂ ಸಾಧ್ಯ, ಕೌಶಲ್ಯಯುತ ಜ್ಷಾನಕ್ಕೆ ಯಾವತ್ತೂ ಬೆಲೆಯಿದೆ. ಅವೆರಡನ್ನೂ ಸಮರ್ಪಕವಾಗಿ ದುಡಿಸಿಕೊಂಡವರಿಗೆ ನಿರು ದ್ಯೋಗದ ಸಮಸ್ಯೆಯೇ ಕಾಡುವುದಿಲ್ಲ. ಹಾಗಾಗಿ ಸಮಸ್ಯೆ ಇರುವುದು ಉದ್ಯೋಗ ದೊರೆಯುವುದರಲ್ಲಿ ಅಲ್ಲ, ಅದಕ್ಕೆ ಬೇಕಾದ ಜ್ಞಾನ ಸಂಪಾದನೆ ಹಾಗೂ ಬಳಸುವ ಕುಶಲತೆ ವೈಫಲ್ಯದಲ್ಲಿ ಎಂದು ಅಭಿಪ್ರಾಯಪಟ್ಟರು.ಕನ್ನಡ ಭಾಷಾ ಕಲಿಕೆಯಿಂದ ಇರುವ ವಿಫುಲ ಉದ್ಯೋಗಾವಕಾಶಗಳ ಪಟ್ಟಿ ನೀಡುತ್ತ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ, ಕಿರುತೆರೆಯಲ್ಲಿ ನಿರೂಪಕರು ವಾರ್ತಾವಾಚಕರು, ವರದಿಗಾರರು, ಸ್ಕ್ರಿಪ್ಟ್ ರೈಟರ್ಸ, ಕಂಟೆಂಟ್ ಕ್ರಿಯೇ ಟರ್ಸ್, ಪತ್ರಿಕೆಗಳಲ್ಲಿ ವರದಿಗಾರರು, ಸಂದರ್ಶಕರು, ಫ್ರೀಲಾನ್ಸ್ ಜರ್ನಲಿಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪ್ರೋಫ್ ರೀಡರ್ಸ್ ಇತ್ಯಾದಿ ಹುದ್ದೆಗಳು ಕಾಯುತ್ತಿವೆ ಎಂದು ಹೇಳಿದರು.
ಐಚ್ಛಿಕ ಕನ್ನಡವನ್ನು ಪದವಿ ತರಗತಿಗಳಲ್ಲಿ ಒಂದು ವಿಷಯವಾಗಿ ತೆಗೆದುಕೊಳ್ಳಲು ಯಾವ ಸಂಶಯ ಬೇಡ, ವಿದ್ಯಾರ್ಥಿಗಳು ತಾವು ಕಂಡ ಕನಸಿನ ಕಡೆಗೆ ಇಟ್ಟ ಗುರಿಯ ಕಡೆಗೆ ಆಸಕ್ತ , ಅಭ್ಯಾಸ ಹಾಗೂ ಅವಿರತ ಶ್ರಮದಿಂದ ನಡೆದು ಗಮ್ಯವನ್ನು ತಲುಪಿ ವಿಜಯಿಗಳಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಆಶಿಸಿದರು.
ಕಾಲೇಜು ಪ್ರಾಂಶುಪಾಲರಾದ ಡಾ.ಟಿ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಕ್ರಿಯಾಶೀಲರಾಗಬೇಕಾದ ಅಗತ್ಯವನ್ನು ಒತ್ತಿಹೇಳಿದರು. ಖಾಸಗಿ ಕ್ಷೇತ್ರಗಳಲ್ಲಿ ಉದ್ಯಮಿಗಳು ಅಥವಾ ಉದ್ಯೋಗದಾತರು ಕನ್ನಡೇತರರಾಗಿರುವುದರಿಂದ ಕನ್ನಡ ಭಾಷೆ ಸಂಸ್ಕೃತಿಗೆ ಮಾನ್ಯತೆ ದೊರೆಯುತ್ತಿಲ್ಲ ಎಂದು ವಿಷಾದಿಸಿದರು, ಸಮಾಜದ ಎಲ್ಲ ರಂಗಗಳಲ್ಲೂ ಕಾಲಮಾನಕ್ಕೆ ತಕ್ಕಂತೆ ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಹಾಗೂ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಡಾ.ಕಿರಣ್, ಡಾಶಿವರುದ್ರಪ್ಪ ಹಾಗೂ ಡಾ.ಲಾವಣ್ಯ, ಪ್ರಿಯಾ, ಗೀತಾ, ದತ್ತಾತ್ರೇಯ, ಎಲ್ಲ ಬೋಧಕ ಬೋಧಕೇತರರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
4ಕೆಟಿಆರ್.ಕೆ.1ಃ ತರೀಕೆರೆ ಸರ್ಕಾರಿ ಕಾಲೇಜಿನ ಕನ್ನಡ ಹಬ್ಬದಲ್ಲಿ ಪ್ರಾಂಶುಪಾಲ ಡಾ.ಟಿ.ಮಂಜುನಾಥ್, ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣಕುಮಾರ್ ಎಸ್ ಕನ್ನಡ ವಿಭಾಗದ ಮುಖ್ಯಸ್ಥೆ ಎಂ.ಎಸ್.ಗೀತಾ ಮತ್ತಿತರರು ಭಾಗವಹಿಸಿದ್ದರು.