ಅಂಬೇಡ್ಕರ್ ಸಹಕಾರ ಸಂಘದ ಅಭಿಯಾನ

KannadaprabhaNewsNetwork |  
Published : Feb 22, 2024, 01:45 AM IST
21ಎಚ್ಎಸ್ಎನ್7 : ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಾರ್ವ0ಗಿನ  ಏಳಿಗೆಗಾಗಿ ಅಂಬೇಡ್ಕರ್ ವಿವಿದೋದ್ದೇಶ ಸಹಕಾರ  ಸಂಘದ ಸದಸ್ಯತ್ವ ಅಭಿಯಾನ ಆರಂಬಿಸಲು ಉದ್ದೇಶಿಸಲಾಗಿದೆ ಎಂದು ಎ ವಿ ಎಸ್ ಎಸ್ ನ ನಿರ್ದೇಶಕ ಮಂಜುನಾಥ್ ಹೇಳಿದರು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಾರ್ವಾಂಗೀಣ ಏಳಿಗೆಗಾಗಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯತ್ವ ಅಭಿಯಾನ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಎವಿಎಸ್‌ಎಸ್‌ ನಿರ್ದೇಶಕ ಮಂಜುನಾಥ್ ಹೇಳಿದರು. ಬೇಲೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎವಿಎಸ್‌ಎಸ್‌ ನಿರ್ದೇಶಕ ಮಂಜುನಾಥ್ ಸದಸ್ಯತ್ವ ಬಗ್ಗೆ ಮಾಹಿತಿಬೇಲೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಾರ್ವಾಂಗೀಣ ಏಳಿಗೆಗಾಗಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯತ್ವ ಅಭಿಯಾನ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಎವಿಎಸ್‌ಎಸ್‌ ನಿರ್ದೇಶಕ ಮಂಜುನಾಥ್ ಹೇಳಿದರು,

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 20 ಕಡೆ ಶಾಖೆಗಳಿದ್ದು ಬೇಲೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ಏಳಿಗೆಗಾಗಿ, ಬಡ ಕುಟುಂಬದ ನಿರ್ವಹಣೆಗಾಗಿ ಸಹಕಾರ ಸಂಘದ ಅಭಿಯಾನವನ್ನು ಇದೇ ಬಾನುವಾರ ಬೇಲೂರು ಪಟ್ಟಣದ ಪತ್ರಕರ್ತ ಸಂಘದ ಪಕ್ಕದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಗುರುಗಳಾದ ಜ್ಞಾನಪ್ರಕಾಶ್ ಹಾಗೂ ಬೋಧಿ ಬಂತಜ್ಜೆ ಅವರ ಆಶಯದಂತೆ ‘ನಮ್ಮಿಂದ ನಮಗಾಗಿ’ ಎಂಬ ಸಹಕಾರ ಸಂಘವು ಅಸ್ತಿತ್ವಕ್ಕೆ ಬರುತ್ತಿದ್ದು ಇದು ಕೇವಲ, ಎಸ್‌ಸಿ/ ಎಸ್‌ಟಿ ಗೆ ಸೀಮಿತವಾಗಿದ್ದು ಅವರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು,

ಎವಿಎಸ್‌ಎಸ್‌ ನಿರ್ದೇಶಕ ಗಂಗಾಧರ್ ಸಾಕ್ಯ ಮಾತನಾಡಿ, ‘ನಮ್ಮ ಸಹಕಾರ ಸಂಘವು ತಾಲೂಕಿನಲ್ಲಿ 550 ಷೇರುದಾರರನ್ನು ಹೊಂದಿದ್ದು, ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ವಾಸಿಸುವ ಪ್ರತಿಯೊಂದು ಎಸ್‌ಸಿ, ಎಸ್‌ಟಿ ಜನಾಂಗದವರು ಠೇವಣಿಯನ್ನು ಇಡಬಹುದು. ಆ ಠೇವಣಿ ಮುಖಾಂತರ ಸಾಲವನ್ನು ಪಡೆದು ಸಮಾಜದಲ್ಲಿ ಸರ್ವತೋಮುಖ ಬೆಳವಣಿಗೆಗಾಗಿ ಇಂತಹ ಸೌಲಭ್ಯವನ್ನು ಪಡೆದುಕೊಳ್ಳಬೇಕು, ಇತರೆ ಜನಾಂಗದವರು ಹಣವನ್ನು ಕಟ್ಟಲು ಅವಕಾಶವಿದೆ. ನಮ್ಮ ಕೇಂದ್ರ ಶಾಖೆಯು ಟಿ. ನರಸೀಪುರದಲ್ಲಿದ್ದು ರಾಜ್ಯಕ್ಕೆ ಒಬ್ಬರೇ ಸಹಕಾರ ಸಂಘಕ್ಕೆ ಅಧ್ಯಕ್ಷರನ್ನು ಹೊಂದಿದೆ. ಅವರ ಅಣತಿಯಂತೆ ವಿವಿಧ ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಭಾನುವಾರದ ಕಾರ್ಯಕ್ರಮಕ್ಕೆ ಜ್ಞಾನಪ್ರಕಾಶ, ಬೋಧಿ ಬಂತಜ್ಜೆ, ಬೋಧಿಸಲಿದ್ದಾರೆ. ಇನ್ನೂ ಮುಂತಾದ ಗಣ್ಯರು ಸಹಕಾರ ಸಂಘದ ಉದ್ಘಾಟನೆಗೆ ಬರಲಿದ್ದು ತಾಲೂಕಿನ ಎಲ್ಲಾ ಎಸ್‌ಸಿ, ಎಸ್‌ಟಿ ಸಮುದಾಯದ ಜನರು ಪಾಲ್ಗೊಂಡು ಸಂಘದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಎವಿಎಸ್‌ಎಸ್‌ ನಿರ್ದೇಶಕರಾದ ಪ್ರವೀಣ್ ಬೌದ್ಧ, ಚಂದ್ರು ಮೌರ್ಯ ಇದ್ದರು.ಎಸ್‌ಸಿ, ಎಸ್‌ಟಿ ಏಳಿಗೆಗಾಗಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯತ್ವ ಅಭಿಯಾನ ಆರಂಭಿಸುವ ಬಗ್ಗೆ ಎವಿಎಸ್‌ಎಸ್‌ ನಿರ್ದೇಶಕ ಮಂಜುನಾಥ್ ಬೇಲೂರಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ