ಬೆಂಗಳೂರಿನಿಂದ ದಿಲ್ಲಿಗೆ ಬಂದ ಏರ್ ಇಂಡಿಯಾ ಎಐ 2802 ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ಸಂಜೆ ನಡೆದಿದ. ಕೂಡಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯಲ್ಲಿ ವಿಮಾನ ಇಳಿಯಿತು. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಬೆಂಗಳೂರಿನಿಂದ ದಿಲ್ಲಿಗೆ ಬಂದ ಏರ್ ಇಂಡಿಯಾ ಎಐ 2802 ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ಸಂಜೆ ನಡೆದಿದ. ಕೂಡಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯಲ್ಲಿ ವಿಮಾನ ಇಳಿಯಿತು. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಇದು ಗುರುವಾರ ನಡೆದ ಏರ್ ಇಂಡಿಯಾ ವಿಮಾನಕ್ಕೆ ಸಂಬಂಧಿಸಿದಂತೆ ಎರಡನೇ ಘಟನೆಯಾಗಿದೆ. ಇದಕ್ಕೂ ಮೊದಲು, ಬೆಂಗಳೂರಿನಲ್ಲಿ ಇಳಿಯುವಾಗ ಏರ್ ಇಂಡಿಯಾ ವಿಮಾನದ ಬಾಲ ಬಡಿದು ಅಪಘಾತ ಸಂಭವಿಸಿತ್ತು. ‘ಏರ್‌ಬಸ್ ಎ320 ಎನ್‌ಇಒ ವಿಮಾನ ಬೆಂಗಳೂರಿಂದ ಬಂದು ದಿಲ್ಲಿಯಲ್ಲಿ ಬಂದು ಇಳಿಯುತ್ತಿದ್ದಂತೆಯೇ ಎಂಜಿನ್‌ನಲ್ಲಿ ಕಿಡಿಗಳು ಕಾಣಿಸಿಕೊಂಡವು. ಕೂಡಲೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ವಿಮಾನದಲ್ಲಿದ್ದ 171 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿಮಾನ ಇಳಿದ ನಂತರ ಅದನ್ನು ಟ್ಯಾಕ್ಸಿವೇಯಿಂದ ಬೇಗನೆ ಸ್ಥಳಾಂತರಿಸಲಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆ ಆರಂಭವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.