;Resize=(412,232))
ಚನ್ನಪಟ್ಟಣ : ‘ಗ್ಯಾರಂಟಿ ಯೋಜನೆಗಳು ನಮ್ಮ ಕಮಿಟ್ಮೆಂಟ್. ಆ ಕಮಿಟ್ಮೆಂಟ್ ಪೂರೈಸಿ ಜನರಿಗೆ ಹೊಸ ಹೊಸ ಯೋಜನೆಗಳನ್ನು ಕೊಡುತ್ತಿದ್ದೇವೆ. ನಾವು ಯಾವುದೇ ಯೋಜನೆ ನಿಲ್ಲಿಸಿಲ್ಲ. ಬಜೆಟ್‌ನಲ್ಲೂ ಯಾವುದೇ ಕೊರತೆ ಇಲ್ಲ’ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದ ಯತೀಂದ್ರ, ‘ಗ್ಯಾರಂಟಿಯಿಂದಾಗಿ ಸರ್ಕಾರ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ’ ಎಂಬ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದರು, ‘ಹೌದು, ಗ್ಯಾರಂಟಿ ಯೋಜನೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತೆ. ಆದರೆ, ಅದು ನಮ್ಮ ಕಮಿಟ್ಮೆಂಟ್. ಆ ಕಮಿಟ್ಮೆಂಟ್ ಪೂರೈಸಿ ಜನರಿಗೆ ಹೊಸ ಹೊಸ ಯೋಜನೆ ಕೊಡುತ್ತಿದ್ದೇವೆ. ನಾವು ಯಾವುದೇ ಯೋಜನೆ ನಿಲ್ಲಿಸಿಲ್ಲ ಎಂದು ಹೇಳಿದರು.
‘ಕರಾವಳಿಯ ಅಭಿವೃದ್ಧಿಗಾಗಿ 35 ಸಾವಿರ ಕೋಟಿ ರು..ಕೊಟ್ಟಿದ್ದೇವೆ. ಬೊಕ್ಕಸ ಖಾಲಿ ಆಗಿದ್ರೆ, ಗ್ಯಾರಂಟಿಯಿಂದ ತೊಂದರೆ ಆಗಿದ್ರೆ, ಹಣ ಕೊಡಲು ಆಗ್ತಿತ್ತಾ?. ಗ್ಯಾರಂಟಿ ನಮ್ಮ ಕಮಿಟ್ಮೆಂಟ್ ಅದು ಮುಂದುವರಿಯುತ್ತೆ’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಪ್ರತಿಕ್ರಿಯಿಸಿ, ‘ಬಜೆಟ್‌ನಲ್ಲಿ ಯಾವುದೇ ಕೊರತೆ ಇಲ್ಲ. ಬಾಲಕೃಷ್ಣ ಅವರು ಯಾವ ಹಿನ್ನೆಲೆಯಲ್ಲಿ ಆ ರೀತಿಯ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ’ ಎಂದು ಹೇಳಿದರು.
- ಕರಾವಳಿ ಅಭಿವೃದ್ಧಿಗೆ 35 ಸಾವಿರ ಕೋಟಿ ರು. ಹಂಚಿಕೆ
- ಬೊಕ್ಕಸ ಖಾಲಿ ಆಗಿದ್ರೆ ಈ ಹಣ ಹೇಗೆ ಕೊಡುತ್ತಿದ್ದೆವು?
- ಗ್ಯಾರಂಟಿ ನಮ್ಮ ಕಮಿಟ್ಮೆಂಟ್. ಮುಂದುವರಿಯುತ್ತೆ
- ಸರ್ಕಾರದ ಬಜೆಟ್‌ನಲ್ಲಿ ಯಾವುದೇ ಕೊರತೆ ಇಲ್ಲ