ಕಳೆದ 6 ತಿಂಗಳಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕ ನಂ.2

Published : Dec 02, 2025, 08:20 AM IST
Karnataka

ಸಾರಾಂಶ

2025-26ನೇ ಆರ್ಥಿಕ ವರ್ಷದ ಮೊದಲ 6 ತಿಂಗಳಲ್ಲಿ (ಏಪ್ರಿಲ್‌-ಸೆಪ್ಟೆಂಬರ್) ಭಾರತ ಹಾಗೂ ದೇಶದ ಯಾವ ರಾಜ್ಯಗಳಲ್ಲಿ ಎಷ್ಟು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದುಬಂದಿದೆ ಎಂಬ ಅಂಕಿ-ಅಂಶವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ದೇಶದಲ್ಲೇ ಕರ್ನಾಟಕ 2ನೇ ಸ್ಥಾನ ಪಡೆದಿದೆ.

 ನವದೆಹಲಿ : 2025-26ನೇ ಆರ್ಥಿಕ ವರ್ಷದ ಮೊದಲ 6 ತಿಂಗಳಲ್ಲಿ (ಏಪ್ರಿಲ್‌-ಸೆಪ್ಟೆಂಬರ್) ಭಾರತ ಹಾಗೂ ದೇಶದ ಯಾವ ರಾಜ್ಯಗಳಲ್ಲಿ ಎಷ್ಟು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದುಬಂದಿದೆ ಎಂಬ ಅಂಕಿ-ಅಂಶವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ದೇಶದಲ್ಲೇ ಕರ್ನಾಟಕ 2ನೇ ಸ್ಥಾನ ಪಡೆದಿದೆ.

ರಾಜ್ಯಗಳ ಪೈಕಿ ಮಹಾರಾಷ್ಟ್ರಕ್ಕೆ ಅತಿ ಹೆಚ್ಚು (95 ಸಾವಿರ ಕೋಟಿ ರು.) ಹೂಡಿಕೆ ಹರಿದುಬಂದಿದ್ದರೆ, 84.2 ಸಾವಿರ ಕೋಟಿ ರು. ಹೂಡಿಕೆ ಪಡೆಯುವ ಮೂಲಕ ಕರ್ನಾಟಕ 2ನೇ ಸ್ಥಾನದಲ್ಲಿದೆ.

ನಂತರದ ಸ್ಥಾನಗಳಲ್ಲಿರುವ ತಮಿಳುನಾಡು

ನಂತರದ ಸ್ಥಾನಗಳಲ್ಲಿರುವ ತಮಿಳುನಾಡು 32 ಸಾವಿರ ಕೋಟಿ ರು., ಹರ್ಯಾಣ 28.8 ಸಾವಿರ ಕೋಟಿ ರು., ದೆಹಲಿ 20.6 ಸಾವಿರ ಕೋಟಿ ರು., ಗುಜರಾತ್‌ 20 ಸಾವಿರ ಕೋಟಿ ರು. ಹಾಗೂ ತೆಲಂಗಾಣಕ್ಕೆ 10 ಸಾವಿರ ಕೋಟಿ ರು. ಹೂಡಿಕೆ ಆಕರ್ಷಿಸಿವೆ.

ಭಾರತಕ್ಕೆ 2.95 ಲಕ್ಷ ಕೋಟಿ ರು.:

ಇನ್ನು ಭಾರತಕ್ಕೆ ಬಂದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಶೇ.18ರಷ್ಟು ಹೆಚ್ಚಾಗಿ 2.95 ಲಕ್ಷ ಕೋಟಿ ರು. ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 2.66 ಲಕ್ಷ ಕೋಟಿ ರು. ಆಗಿತ್ತು.

ಅಮೆರಿಕದಿಂದ ಬಂದ ಹೂಡಿಕೆ 2 ಪಟ್ಟು ಹೆಚ್ಚಾಗಿ 59 ಸಾವಿರ ಕೋಟಿ ರು. ತಲುಪಿದೆ (ಕಳೆದ ಬಾರಿ 23 ಸಾವಿರ ಕೋಟಿ ರು.). ಸಿಂಗಾಪುರ ಈ ಬಾರಿಯೂ ಅತಿ ದೊಡ್ಡ ಹೂಡಿಕೆದಾರನಾಗಿ ಮುಂದಿದ್ದು 1 ಲಕ್ಷ ಕೋಟಿ ರು. ಹೂಡಿಕೆ ಮಾಡಿದೆ.

PREV
Read more Articles on

Recommended Stories

ಚಾಮರಾಜನಗರ ಆಕ್ಸಿಜನ್‌ ದುರಂತ : ಸಿಎಂಗೆ ವರದಿ
ಇನ್ನು ಮನೇಲೆ ಕೂತು ರೆಂಟ್‌ ಅಗ್ರಿಮೆಂಟ್‌ ಮಾಡ್ಕೊಳ್ಳಿ!