ಐಪಿಎಲ್‌ ಟಿ-20 ಕ್ರಿಕೆಟ್ ಪಂದ್ಯಗಳ ವೀಕ್ಷಿಸಲು ‘ನಮ್ಮ ಮೆಟ್ರೋ’ ತಡರಾತ್ರಿ 12.30ರವರೆಗೆ ಸೇವೆ

ಸಾರಾಂಶ

ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್‌ ಟಿ-20 ಕ್ರಿಕೆಟ್ ಏಳು ಪಂದ್ಯಗಳ ವೀಕ್ಷಿಸಲು ಬರುವವರಿಗೆ ‘ನಮ್ಮ ಮೆಟ್ರೋ’ ತಡರಾತ್ರಿ 12.30ರವರೆಗೆ ರೈಲು ಸೇವೆ ವಿಸ್ತರಿಸುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿದೆ.

ಬೆಂಗಳೂರು : ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್‌ ಟಿ-20 ಕ್ರಿಕೆಟ್ ಏಳು ಪಂದ್ಯಗಳ ವೀಕ್ಷಿಸಲು ಬರುವವರಿಗೆ ‘ನಮ್ಮ ಮೆಟ್ರೋ’ ತಡರಾತ್ರಿ 12.30ರವರೆಗೆ ರೈಲು ಸೇವೆ ವಿಸ್ತರಿಸುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿದೆ.

ಐಪಿಎಲ್ ಪಂದ್ಯಾವಳಿ ನಡೆಯಲಿರುವ ಏಪ್ರಿಲ್ 2, 10, 18 ಹಾಗೂ 24 ಮತ್ತು ಮೇ 3, 13 ಹಾಗೂ 17 ರಂದು ಎಲ್ಲ ನಾಲ್ಕು ಟರ್ಮಿನಲ್ ಅಂದರೆ ವೈಟ್‌ ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 1.15ಕ್ಕೆ ಹೊರಡಲಿದೆ. ಇದು ಸಾಮಾನ್ಯ ದಿನಗಳಿಗಿಂತ ತಡ ರಾತ್ರಿವರೆಗೂ ಮೆಟ್ರೋ ಸೇವೆ ನೀಡಲಿದೆ.

Share this article