ಹುಬ್ಬಳ್ಳಿ-ಅಂಕೋಲಾ ₹18424 ಕೋಟಿ ವೆಚ್ಚದ ರೈಲ್ವೆ ಯೋಜನೆಗೆ ಅಧಿಸೂಚನೆ

Published : Aug 11, 2026, 10:15 AM IST
railway

ಸಾರಾಂಶ

ಉತ್ತರ ಕನ್ನಡದ ದಶಕಗಳ ಕನಸಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಪರಿಷ್ಕೃತ ರೂಪದಲ್ಲಿ ಬಂದಿದ್ದು, 163 ಕಿ.ಮೀ. ಉದ್ದದ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

 ಕಾರವಾರ : ಉತ್ತರ ಕನ್ನಡದ ದಶಕಗಳ ಕನಸಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಪರಿಷ್ಕೃತ ರೂಪದಲ್ಲಿ ಬಂದಿದ್ದು, 163 ಕಿ.ಮೀ. ಉದ್ದದ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

ವಿದ್ಯುದೀಕೃತ ಬ್ರಾಡಗೇಜ್ ಡಬಲ್‌ಲೈನ್ ನಿರ್ಮಾಣದ ಪರಿಷ್ಕೃತ ಪ್ರಸ್ತಾವನೆ

ಹಳೆಯ ಏಕಹಳಿ ಯೋಜನೆಗೆ ಬದಲಾಗಿ ಇದೀಗ ವಿದ್ಯುದೀಕೃತ ಬ್ರಾಡಗೇಜ್ ಡಬಲ್‌ಲೈನ್ ನಿರ್ಮಾಣದ ಪರಿಷ್ಕೃತ ಪ್ರಸ್ತಾವನೆ ರೂಪಿಸಲಾಗಿದೆ. ಸುಮಾರು ₹18,424 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ ಕಡಿಮೆ ಮಾಡುವ ಉದ್ದೇಶದಿಂದ 57 ಸುರಂಗಗಳನ್ನು ನಿರ್ಮಿಸುವ ಪ್ರಸ್ತಾವವಿದೆ. ಒಟ್ಟು 163 ಕಿ.ಮೀ. ಉದ್ದದ ಈ ಯೋಜನೆಗೆ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ, ಖಾಸಗಿ ಮತ್ತು ಅರಣ್ಯ ಭೂಮಿ ಒಳಗೊಳ್ಳಲಿದೆ. ಆದರೆ, ಹೊಸ ಅಧಿಸೂಚನೆ ಬಂದಿರುವುದರಿಂದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದರ್ಥವಲ್ಲ. ಅರಣ್ಯ, ವನ್ಯಜೀವಿ ಹಾಗೂ ಇತರ ಅಗತ್ಯ ಅನುಮತಿಗಳು ಇನ್ನೂ ದೊರೆಯಬೇಕಿದೆ. ಆದರೂ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಹೊಸ ರೂಪದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವುದು ಉತ್ತರ ಕನ್ನಡದ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ.

ಗ್ರಾಮಗಳ ವಿವರ:

ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ನಗರಪಾಲಿಕೆ, ಬಿಂದಾಳ, ಗಬ್ಬೂರ, ಹಳಿಯಾಳ, ಕೊಟಗೊಂಡ ಹುಣಶಿ, ಅಜ್ಜನಪುರ, ಬುಡರಸಿಂಗಿ, ಮಾವನೂರ, ಗಿರಿಯಾಲ, ಕಾತನೂರ, ಚನ್ನಾಪುರ, ರಾಮಾಪುರ ಸೇರಿದಂತೆ ಯಲ್ಲಾಪುರ ತಾಲೂಕಿನ ಹೊಸಳ್ಳಿ, ಕಿರವತ್ತಿ, ಕೋಳಿಕೇರಿ, ರಾಮನಕೊಪ್ಪ, ಕನ್ನಡಗಲ್, ಸಹಸ್ರಳ್ಳಿ, ಕೊಂಡೆಮನೆ, ಯಲ್ಲಾಪುರ, ಚಂದಗುಳಿ ಹಾಗೂ ಅಂಕೋಲಾ ತಾಲೂಕಿನ ಸುಂಕಸಾಳ, ಕಟ್ಟಿನಹಕ್ಕಲ, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗಾರಮಕ್ಕಿಗದ್ದೆ, ಅಡ್ಲೂರ, ನವಗದ್ದೆ, ಬೊಗ್ರಿಬೈಲ, ಅಲಗೇರಿ, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ ಗ್ರಾಮಗಳ ಜತೆಗೆ ವಿವಿಧ ಗ್ರಾಮಗಳನ್ನು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬಿಜೆಪಿ ನಾಯಕರಿಂದ ತ್ರಿವರ್ಣ ಧ್ವಜ ಯಾತ್ರೆ
3 ದಿನದಲ್ಲಿ 60 ಸ್ಟಾರ್‌ ಹೋಟೆಲ್‌ಗಳ ಮೇಲೆ ದಾಳಿ : 640 ಕೇಜಿ ಆಹಾರ ಜಪ್ತಿ