ರಾಜ್ಯದಲ್ಲಿ ಒಬಿಸಿ ಜನಸಂಖ್ಯೆ ಬಹಳ‌ ದೊಡ್ಡದಿದೆ : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಸಾರಾಂಶ

ಇಡೀ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳು (ಒಬಿಸಿ) ಸಮುದಾಯದ ಜನಸಂಖ್ಯೆಯೇ ಬಹಳ‌ ದೊಡ್ಡದಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಮೈಸೂರು: ಇಡೀ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳು (ಒಬಿಸಿ) ಸಮುದಾಯದ ಜನಸಂಖ್ಯೆಯೇ ಬಹಳ‌ ದೊಡ್ಡದಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶುಕ್ರವಾರ ಆಯೋಜಿಸಿದ್ದ ನಿರ್ಮಲ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳು ಒಗ್ಗೂಡಿದರೇ ಬಹುಸಂಖ್ಯಾತರಾಗಲಿದ್ದಾರೆ. ಆದರೆ, ಕಾರಣಾಂತರಗಳಿಂದ ಹಿಂದುಳಿದ ವರ್ಗಗಳು ಒಗ್ಗೂಡುತ್ತಿಲ್ಲ. ಸಣ್ಣ ಸಮುದಾಯಗಳ ಮೇಲೆ ಯಾರು ಕಾಳಜಿ ಮತ್ತು ಪ್ರೋತ್ಸಾಹ ನೀಡುತ್ತಿಲ್ಲ. ನಾನು ಕೂಡ ಹಿಂದುಳಿದ ವರ್ಗಗಳ ಸೇರಿದವನು ಎಂದು ರಾಜಕೀಯ ಬಂದಾಗ ಗೊತ್ತಾಯಿತು ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಸಣ್ಣ ಪುಟ್ಟ ಸಮುದಾಯಗಳು ಇತರ ಹಿಂದುಳಿದ ವರ್ಗಕ್ಕೆ ಸೇರುತ್ತವೆ. ಪ್ರಬಲ ಸಮುದಾಯಗಳಿಗೆ ಹೋಲಿಸಿದರೆ ರಾಜ್ಯಾದ್ಯಂತ ಒಬಿಸಿ ಸಮುದಾಯದ ಸಂಖ್ಯೆಯೇ ದೊಡ್ಡದಿದೆ. ಸಣ್ಣ ಸಣ್ಣ ಸಮುದಾಯಗಳನ್ನು ಒಟ್ಟಾಗಿ ಸೇರಿಸಿದರೆ ಒಬಿಸಿ ಸಮುದಾಯಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದರು.

Share this article