ರಾಜ್ಯದಲ್ಲಿ ಇಂದಿನಿಂದಲೇ ಖಾಸಗಿ ಬಸ್ ಟಿಕೆಟ್ ದರ ಶೇ.3-8 ಏರಿಕೆ

Published : Jun 09, 2026, 07:03 AM IST
Karnataka Day service Private Bus Ticket Fares Hiked From Today

ಸಾರಾಂಶ

ಡೀಸೆಲ್​ ದರ ಏರಿಕೆ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ರಾಜ್ಯಾದ್ಯಂತ ಚಾಲನೆಯಲ್ಲಿರುವ ಎಲ್ಲಾ ಖಾಸಗಿ ಮಜಲು ವಾಹನ (ಡೇ ಸರ್ವಿಸ್​) ಬಸ್​ಗಳ ಪ್ರಯಾಣ ದರವನ್ನು ಶೇ.3 ರಿಂದ 8ರವರೆಗೆ ಪರಿಷ್ಕರಿಸಿ ಮಂಗಳವಾರದಿಂದ (ಜೂ.9) ಹೊಸ ದರ ಜಾರಿಗೆ ತರಲಾಗುತ್ತಿದೆ

 ಉಡುಪಿ :  ಡೀಸೆಲ್​ ದರ ಏರಿಕೆ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ರಾಜ್ಯಾದ್ಯಂತ ಚಾಲನೆಯಲ್ಲಿರುವ ಎಲ್ಲಾ ಖಾಸಗಿ ಮಜಲು ವಾಹನ (ಡೇ ಸರ್ವಿಸ್​) ಬಸ್​ಗಳ ಪ್ರಯಾಣ ದರವನ್ನು ಶೇ.3 ರಿಂದ 8ರವರೆಗೆ ಪರಿಷ್ಕರಿಸಿ ಮಂಗಳವಾರದಿಂದ (ಜೂ.9) ಹೊಸ ದರ ಜಾರಿಗೆ ತರಲಾಗುತ್ತಿದೆ ಎಂದು ರಾಜ್ಯ ಖಾಸಗಿ ಬಸ್​ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ತಿಳಿಸಿದರು.

ರಾಜ್ಯಾದ್ಯಂತ 5300 ಬಸ್​ಗಳು ಒಕ್ಕೂಟದ ವ್ಯಾಪ್ತಿಯಲ್ಲಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 5300 ಬಸ್​ಗಳು ಒಕ್ಕೂಟದ ವ್ಯಾಪ್ತಿಯಲ್ಲಿದ್ದು, ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆ 3 ರು. ಹಾಗೂ ಕೇಂದ್ರ ಸರ್ಕಾರ 4 ಬಾರಿ 8.17 ರು. ಡೀಸೆಲ್​ ದರ ಏರಿಕೆ ಮಾಡಿದೆ. ವಾಹನದ ಬಿಡಿ ಭಾಗಗಳ ದರ, ಟೈರ್​,ಟೈರ್​ ರಿಸೋಲಿಂಗ್​ ದರ, ಟೋಲ್​ ದರ, ನೌಕರರ ವೇತನ, ಸರ್ಕಾರದ ತೆರಿಗೆ ಸಹಿತ ದೈನಂದಿನ ವೆಚ್ಚಗಳಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಬಸ್​ ಟಿಕೆಟ್​ ದರ ಹೆಚ್ಚಿಸಲು ಅನಿವಾರ್ಯವಾಗಿ ನಿರ್ಧರಿಸಲಾಗಿದೆ ಎಂದರು. ಶಾಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಸಿಗುತ್ತಿದ್ದ ರಿಯಾಯಿತಿ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.

 ಪ್ರತಿ ಕಿ.ಮೀ.ಗೆ ಕನಿಷ್ಟ 0.25 ಪೈಸೆಯವರೆಗೆ ಸೆಸ್

ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಪ್ರತಿ ಪ್ರಯಾಣಿಕರಿಗೆ 4 ಪೈಸೆಯಂತೆ ಪ್ರತಿ ಕಿ.ಮೀ.ಗೆ ಕನಿಷ್ಟ 0.25 ಪೈಸೆಯವರೆಗೆ ಸೆಸ್​ ಹಾಕಲು ಅವಕಾಶವಿದ್ದು, ಹಾಲಿ ದರದ ಮೇಲೆ ಶೇ.3ರಿಂದ 8ರವರೆಗೆ ದರ ಪರಿಷ್ಕರಣೆ ಮಾಡಲಾಗಿದೆ ಎಂದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬಾರ್‌, ಪಬ್‌ಗಳಿಗೆ ಗುರುತಿನ ಚೀಟಿ ಇಲ್ಲದಿದ್ರೆ ಪ್ರವೇಶವಿಲ್ಲ
ಬಿಟ್‌ಕಾಯಿನ್‌ ಹಗರಣದಲ್ಲಿ ನಲಪಾಡ್‌ಗೆ ಇದೀಗ ಎಸ್ಐಟಿ ಚಾರ್ಜ್‌ಶೀಟ್‌ ಶಾಕ್‌!